Rajendra Bhat
ರಾಜ ಮಾರ್ಗ
ರಾಜ ಮಾರ್ಗ
Publisher - ವಿಸ್ತಾರ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 152
Type - Paperback
ಗಂಡನ ಮನೆಯಿಂದ ಆಕೆಯನ್ನು ಹೊರದಬ್ಬಲಾಗಿತ್ತು. ಆಗಷ್ಟೇ ಹುಟ್ಟಿದ ಎಳ ಹಸುಳೆಯನ್ನು ಎದೆಗವಚಿಕೊಂಡು ಆಕೆ ಸಾಯುವುದಕ್ಕಾಗಿ ರೈಲು ನಿಲ್ದಾಣಕ್ಕೆ ಬಂದಿದ್ದಳು. ಇನ್ನೇನು ರೈಲಿನ ಮುಂದೆ ಹಾರಬೇಕು ಎನ್ನುವಾಗ ದೂರದಲ್ಲೊಂದು ಮಗುವಿನ ಅಳು ಕೇಳಿಸಿತು. ಪಕ್ಕಕ್ಕೆ ಸರಿದು ಸೆರಗಿನ ತುದಿಯಲ್ಲಿದ್ದ ರೊಟ್ಟಿಯನ್ನು ನೀರಲ್ಲಿ ಅದ್ದಿ ಆ ಮಗುವಿನ ಬಾಯಿಗಿಟ್ಟಳು. ಮಗು ಸಣ್ಣಗೆ ನಕ್ಕಿತು. ಆ ಹೆಣ್ಮಗಳು
ಸಾಯುವ ನಿರ್ಧಾರವನ್ನೇ ಆ ನಗು ಬದಲಿಸಿತು. ತನ್ನ ಮಗುವಿನ ಜತೆಗೆ ಆ ಅನಾಥ ಮಗುವನ್ನು ಎತ್ತಿಕೊಂಡು ಕಾಲೆಳದ ಕಡೆ ನಡೆದಳು. ಇವತ್ತು ಆಕೆ 1400 ಅನಾಥ ಮಕ್ಕಳಿಗೆ ತಾಯಿ. ಹೆಸರು ಸಿಂಧೂತಾಯಿ ಸಪ್ಕಲ್!
ನ್ಯೂಜಿಲ್ಯಾಂಡ್‌ನ ಮಾರ್ಕ್ ಇಂಗ್ಲಿಸ್ ಒಬ್ಬ ಟ್ರೆಕ್ಕಿಂಗ್ ಸಹಾಯಕ. 1982ರಲ್ಲಿ ಅಲ್ಲಿನ ಹಿಮಾವೃತ ಮೌಂಟ್ ಕುಕ್ ಪರ್ವತ ಹತ್ತುವಾಗ ಜಾರಿ ಬಿದ್ದು ಹಿಮ ಗುಹೆಯೊಳಗೆ ಸಿಲುಕಿದರು. ಬರೋಬ್ಬರಿ 47 ದಿನ ಬಾಹ್ಯ ಸಂಪರ್ಕವೇ ಇರಲಿಲ್ಲ. ರಕ್ಷಿಸಲ್ಪಟ್ಟು ಹೊರಗೆ ಬಂದಾಗ ಎರಡೂ ಕಾಲುಗಳು ಕೂಳತು ಕತ್ತರಿಸಿ ಹಾಕಬೇಕಾಯಿತು.23ರ ಹರೆಯದಲ್ಲೇ ಎರಡೂ ಕಾಲು ಕಳೆದುಕೊಂಡ ಕುಕ್‌ಗೆ ಪರ್ವತದ ಮೋಹ ಮಾತ್ರ ಬಿಡಲಿಲ್ಲ. ಕೃತಕ ಕಾಲುಗಳನ್ನು ಕಟ್ಟಿಕೊಂಡು ಹೊರಟೇಬಿಟ್ಟ. ನೀವು ನಂಬಲೇಬೇಕು. ಕೆಲವೇ ವರ್ಷದಲ್ಲಿ ಅದೇ ಮೌಂಟ್ ಕುಕ್ ಮಾತ್ರವಲ್ಲ, ಜಗತ್ತಿನ ಮೇರು ಶಿಖರವೂ ಆತನ ಮುರಿದ ಕಾಲಿನ ಅಡಿಯಲ್ಲಿ ಬಿದ್ದಿತ್ತು.
ಬಿಲೀವ್ ಮಿ.. ವಾರೆನ್ ಬಫೆಟ್ ಈಗಲೂ ದಿನದ 80% ಸಮಯವನ್ನು ಓದುವುದರಲ್ಲಿ ಕಳೆಯುತ್ತಾರೆ! ತಮ್ಮ 62 ಕಂಪನಿಗಳಿಗೆ ವರ್ಷಕೊಮ್ಮೆ ಮಾತ್ರ ಭೇಟಿ ಕೊಡುತ್ತಾರೆ. ಎಲ್ಲರೊಂದಿಗೆ ನಗದು ವ್ಯವಹಾರ ಮಾಡುತ್ತಾರೆ. ಅವರ ಹತ್ತಿರ ಯಾವುದೇ ಕ್ರೆಡಿಟ್ ಕಾರ್ಡ್ ಇಲ್ಲ.
-ರಾಜೇಂದ್ರ ಭಟ್ ಕೆ.
Share
Subscribe to our emails
Subscribe to our mailing list for insider news, product launches, and more.