P. Chandrika
ರಾಗಿ ತಂದೇವಾ ನಾವು
ರಾಗಿ ತಂದೇವಾ ನಾವು
Publisher - ಅಭಿನವ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 128
Type - Paperback
... ಕೃಷಿ ಸಂಸ್ಕೃತಿಯ ಬಗ್ಗೆ ನಮ್ಮಲ್ಲಿ ಬಂದಿರುವ ಕೃತಿಗಳು ವಿರಳ. ಒಂದು ಬೇಸಾಯ ಸಸ್ಯದ ಉಗಮ, ವಿಸ್ತರಣೆ, ಜನಜೀವನದಲ್ಲಿ ಅದರ ಪಾತ್ರ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಾರುವ ಕೃತಿಗಳು ಬಂದಿರುವುದು ಅಪರೂಪ ರಾಗಿಯಂಥ ಜನಪ್ರಿಯ ಬೇಸಾಯ ಸಸ್ಯವನ್ನು ಕುರಿತ ವ್ಯಾಪಕ ಹರಹಿನ ಈ ಕೃತಿಯು ಅಂತಹ ಅಭಾವವನ್ನು ನೀಗಿಸುವ ನಿಟ್ಟಿನಲ್ಲಿ ಒಂದು ಮಾದರಿ ಕೃತಿಯೆನಿಸಿದೆ. ಲೇಖಕಿ ಪಿ. ಚಂದ್ರಿಕಾ ಅವರು ಸ್ವತಃ ಬೇಸಾಯದಲ್ಲಿ ತೊಡಗಿಸಿಕೊಂಡಿರುವುದರ ಜೊತೆಗೆ ಮರೆಯಾಗುತ್ತಿರುವ ರಾಗಿ ಕಣವನ್ನು ಮತ್ತೆ ಕಾರ್ಯರಂಗಕ್ಕೆ ತರಲು ಪ್ರಯತ್ನಿಸುತ್ತಿರುವ ರಾಗಿಯನ್ನು ಕುರಿತ ಎಲ್ಲ ಮಾಹಿತಿಗಳಿಗೂ ಕೈಚಾಚಿ ಕಲೆಹಾಕಿ ಪ್ರಯೋಗಶೀಲರು. ಆ ಮನೋಭಾವದಿಂದಾಗಿ ಅವರು ಆಪ್ತತೆಯಿಂದ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ರಾಗಿ ಆಹಾರ ಧಾನ್ಯವಾಗಿ ಅಭಿವೃದ್ಧಿಯಾದ ಹಿನ್ನೆಲೆಯಲ್ಲಿ ಹೆಣ್ಣಿನ ಪಾತ್ರವಿರಲೇಬೇಕೆಂದು ತರ್ಕಿಸುವಾಗ ನಾಗರಿಕ ಚರಿತ್ರೆಯಲ್ಲಿ ಹೆಣ್ಣು ಮತ್ತು ಬೀಜ ಸಂರಕ್ಷಣೆಯ ನಡುವಿನ ಚಾರಿತ್ರಿಕ ಸಂಬಂಧಗಳನ್ನು ಸಹ ವಿವರಿಸುತ್ತಾರೆ. ರಾಗಿಯ ಸುತ್ತ ಇರುವ ಜಾನಪದ ಕತೆಗಳು, ಬೇರೆ ಬೇರೆ ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ಜನಪದೀಯರ ನಂಬಿಕೆಗಳು, ನಮ್ಮ ಆಚರಣೆಗಳ ಭಾಗವಾಗಿ ಪಡೆದುಕೊಂಡಿರುವ ಸಾಂಸ್ಕೃತಿಕ ಮಹತ್ವದ ಸಂಗತಿಗಳು ಸಹ ಕುತೂಹಲಕಾರಿಯಾಗಿವೆ.
ಒಕ್ಕಣೆಗೆ ಪೂರ್ವದಲ್ಲಿ ರಾಗಿಯ ಕಣದ ತಯಾರಿಕೆ ಸಹ ಒಂದು ಕಲಾತ್ಮಕ ಕಾರ್ಯ. ಕಣ ಸಿದ್ದಗೊಂಡ ನಂತರ ನಡೆಯುವ ಒಕ್ಕಣೆಗೆ ಸಂಬಂಧಿಸಿದ ಕಾರ್ಯ ವಿಧಾನಗಳು, ಕಣದಲ್ಲಿ ಬಳಕೆಯಾಗುವ ವಿಶಿಷ್ಟ ಪರ್ಯಾಯ ನಾಮಪದಗಳು, ಧಾನ್ಯದ ಹಂಚಿಕೆ, ಸಾಗಣೆ, ಆಚರಣೆಗಳ ವಿವರಗಳೆಲ್ಲವು ಇಲ್ಲಿ ಬಂದಿವೆ. ರಾಗಿಯ ಒಕ್ಕಣೆಗೆ ಸಂಬಂಧಿಸಿದಂತೆ ಈಗಾಗಲೇ ನೇಪಥ್ಯಕ್ಕೆ ಸರಿದಿರುವ ಅನೇಕ ಆಚರಣೆ ಮತ್ತು ಸಂಗತಿಗಳನ್ನು ಲೇಖಕಿ ನೆನಪಿಸಿದ್ದಾರೆ.
Share
Subscribe to our emails
Subscribe to our mailing list for insider news, product launches, and more.