Priya Kervashe
Publisher - ಸಪ್ನ ಬುಕ್ ಹೌಸ್
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ನಾವು ಕಾಣದ್ದನ್ನು ಕಾಣುವ ಮಾಯೆ, ನಮಗೆ ಆಗದೇ ಇರುವುದನ್ನು ಕೂಡ ಆಗಿದೆ ಎಂದು ಭಾವಿಸುವ ಸಮಗ್ರತೆ, ನಾವು ಅನುಭವಿಸಿದ್ದನ್ನು ಅನುಭವಿಸಿಯೇ ಇಲ್ಲ ಎಂದು ನಿರಾಕರಿಸುವ ಶೂನ್ಯಪ್ರಭೆ, ನಿಜ ಮತ್ತು ಕಲ್ಪನೆಯ ಜಗತ್ತನ್ನು ನಾವೇ ಸೃಷ್ಟಿಸಿಕೊಳ್ಳುವ ರೀತಿ, ನಮ್ಮ ನಿಜದ ನೆಲೆಯಿಂದ ವಿಮುಖರಾಗಿ, ಮಾಯಾಲೋಕದಲ್ಲಿ ವಿಹರಿಸುತ್ತಾ ಅದನ್ನೇ ನಿಜವೆಂದು ಭಾವಿಸುವ ಸುಖ ಈ ಕೃತಿಯಲ್ಲಿ ಇವೆಲ್ಲ ಹಾಸುಹೊಕ್ಕು. ತಾನು ಬರೆಯುವುದನ್ನು ವಾಸ್ತವಕ್ಕೆ ಒಗ್ಗಿಸುವ ಯಾವ ಪ್ರಯತ್ನವನ್ನೂ ಮಾಡದೇ ಇರುವುದೇ ಈ ಕೃತಿಯ ಸತ್ಯತೆ. ತಾನು ಹಾರಿ ಕೂರಲಾರದಷ್ಟು ಎತ್ತರದಲ್ಲಿರುವ ಜೋಕಾಲಿಗೆ ತನ್ನನ್ನು ಎಳೆದು ಏರಿಸಿದ್ದು ಭೂತವೋ ತನ್ನ ಇಚ್ಛಾಶಕ್ತಿಯೋ ಎಂಬುದು ಗೊತ್ತಾಗದಷ್ಟೂ ದಿನ ನಮ್ಮೊಳಗಿನ ಬರಹಗಾರ ಜೀವಂತವಾಗಿರುತ್ತಾನೆ ಎಂಬುದನ್ನು ಈ ಕೃತಿ ನನಗೆ ಮನದಟ್ಟು ಮಾಡಿಸಿದೆ.
ಯಾವ ತೋರಿಕೆಯೂ ಇಲ್ಲದ, ತಾರ್ಕಿಕ ಬೆಂಬಲವೂ ಇಲ್ಲದ, ಇವತ್ತು ನಾಳೆಯಾಗುವಷ್ಟೇ ಸಹಜವಾಗಿ ಓದಿಸಿಕೊಂಡು ಹೋಗುವ ಈ ಬರಹಗಳ ಗುಚ್ಛವನ್ನು ನಾನು ಪ್ರೀತಿಸಲು ಆರಂಭಿಸಿದ್ದೇನೆ. ನೀವೂ ಪ್ರೀತಿಸುತ್ತೀರಿ ಎಂಬ ನಂಬಿಕೆ ನನಗಿದೆ.
- ಜೋಗಿ
ಯಾವ ತೋರಿಕೆಯೂ ಇಲ್ಲದ, ತಾರ್ಕಿಕ ಬೆಂಬಲವೂ ಇಲ್ಲದ, ಇವತ್ತು ನಾಳೆಯಾಗುವಷ್ಟೇ ಸಹಜವಾಗಿ ಓದಿಸಿಕೊಂಡು ಹೋಗುವ ಈ ಬರಹಗಳ ಗುಚ್ಛವನ್ನು ನಾನು ಪ್ರೀತಿಸಲು ಆರಂಭಿಸಿದ್ದೇನೆ. ನೀವೂ ಪ್ರೀತಿಸುತ್ತೀರಿ ಎಂಬ ನಂಬಿಕೆ ನನಗಿದೆ.
- ಜೋಗಿ
