Skip to product information
1 of 2

Mangala. M. Nadig

ಪ್ರೀತಿಯ ಚಿಟ್ಟೆಯ ಬೆನ್ನೇರಿ

ಪ್ರೀತಿಯ ಚಿಟ್ಟೆಯ ಬೆನ್ನೇರಿ

ಪ್ರಕಾಶಕರು - ಹರಿವು ಬುಕ್ಸ್

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 60

Type - Paperback

ಶ್ರೀಮತಿ ಮಂಗಳ ಎಂ ನಾಡಿಗರದು ಮುಗ್ಧ ಭಾವನೆಗಳ ಕಾವ್ಯ ಪ್ರಪಂಚ. ಇಷ್ಟು ಕರ್ಕಶವಾದ ಈ ಲೋಕದಲ್ಲಿ ಮೃದು ಮಧುರವಾದ ಭಾವನೆಗಳು ಇನ್ನೂ ಉಳಿದಿವೆಯೇ? ಎಂದು ಅಚ್ಚರಿ ಪಡುವಷ್ಟು ಅವರ ಭಾವನೆಗಳು ಸರಳ ಸುಂದರವಾಗಿವೆ. ಹೂವು, ಹಕ್ಕಿ, ಕಾಡು, ನದಿ, ಚಂದ್ರ, ಸೂರ್ಯ, ನಕ್ಷತ್ರ, ನೀಲಾಕಾಶ, ಬೆಳದಿಂಗಳಿAದ ತುಂಬಿದ ರಮ್ಯಲೋಕವದು. ಒಲಿದ ಗಂಡು, ಹೆಣ್ಣುಗಳ ಮನದ ಭಾವಲಹರಿಗಳು ತಂಗಾಳಿಯಂತೆ ಅಲ್ಲಿ ಸುಳಿದಾಡುವವು. ಒಲಿದವರು ನಲಿದು ಕಟ್ಟಿರುವ ಪುಟ್ಟ ಕುಟುಂಬ ಅಲ್ಲಿದೆ. ಮಗುವಿದೆ, ಮೊಮ್ಮಗುವಿದೆ, ಅವರ ನಗುವಿದೆ. ಕುಟುಂಬ ಮೌಲ್ಯವನ್ನು ನಿಷ್ಕಲ್ಮಷ ಪ್ರೀತಿಯಿಂದ ಉಳಿಸುತ್ತಿರುವ ಹೆಣ್ಣುಮಕ್ಕಳ ಹೃದಯವಂತಿಕೆಯೇನಾದರೂ ಬರಡಾದರೆ ಏನು ಗತಿ? ಸರಳ ಹೃದಯದ ತಾಯಿಯರ ಪ್ರೇಮ, ಮಮತೆ, ಲಾಲನೆ, ಪಾಲನೆಗಳಿಂದ ಕುಟುಂಬ ವ್ಯವಸ್ಥೆ ಉಳಿದಿದೆ. ಮಂಗಳಾ ಈ ಇಂಥ ಲಕ್ಷಾಂತರ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ನನಗೆ ಕಾಣುತ್ತಾರೆ. ಅಲ್ಲಿ ಸೋಗಿಲ್ಲ, ಕಾವ್ಯ ಸಿದ್ಧಾಂತಗಳ ಜಂಜಡವಿಲ್ಲ, ಪ್ರತಿಭಟನೆಯ ರೌದ್ರಾವತಾರವಿಲ್ಲ, ಬದಲಾಗಿ ಎಡೆ ಸಿಕ್ಕಲ್ಲಿ ಚಿಗುರುವ ಗಿಡದ ಗುಣವಿದೆ, ಎಂಥ ತಾಮಸಿಯನ್ನೂ ತನ್ನ ಪ್ರೀತಿಯಿಂದ ಕರಗಿಸುವ ಕಲಾತ್ಮಕತೆ ಇದೆ. ‘ನಾನು ಒಲಿದಂತೆ ಹಾಡುವೆ' ಎಂದು ಅವರು ಹೇಳುವುದೂ ಇಲ್ಲ, ಹಾಗೆ ಬರೆಯುತ್ತಾರೆ.

 ಮಂಗಳ ಅವರ ಕವಿತೆಗಳು ತಿಳಿನೀರ ಕೊಳದಂತಿವೆ. ಇಳಿದು ನೀರು ಕುಡಿಯ ಬಯಸುವವರಿಗೆ ಅವರು ಸುತ್ತಲೂ ಪಾವಟಿಗೆಗಳನ್ನೂ ರಚಿಸಿಕೊಟ್ಟಿದ್ದಾರೆ. ಅಲ್ಲಿ ಕುಳಿತು ಅವರು ತೋರುವ ಹಕ್ಕಿಗಳನ್ನೂ, ಆಕಾಶವನ್ನೂ ನೋಡಬಹುದು, ನೀರು ಕುಡಿಯಬಹುದು, ಹಣ್ಣುಗಳೂ ಸಿಗುತ್ತವೆ. ಎಂದೋ ಕೇಳಿ ಮರೆತ ಸುಂದರ ರಾಗಗಳು ನಿಮಗೆ ಮತ್ತೆ ಒದಗಿ ಬರಬಹುದು. ಅಲ್ಲಿಂದ ಎದ್ದು ಬಂದರೆ ನಿಮ್ಮ ಜಗತ್ತು ನಿಮಗೆ ಇದ್ದೇ ಇದೆ. ಎಲ್ಲ ಶುಭಗಳಿರಲಿ ಕವಯಿತ್ರಿಗೆ.

-ಚಿಂತಾಮಣಿ ಕೊಡ್ಲೆಕೆರೆ
(ಮುನ್ನುಡಿಯಿಂದ)


View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
S
SUMA MANJUNATH
Superb👌👌

Excellent👌 ಶ್ರೀಮತಿ. ಮಂಗಳ ಅವರು ಬರೆದಿರುವ ಕವನಗಳು, ನಿಜಕ್ಕೂ ಬಹಳ ಸೊಗಸಾಗಿವೆ 👌👌 ನನಗೆ ಬಹಳ ಹಿಡಿಸಿತು. ಧನ್ಯವಾದಗಳು ಹರಿವು ಅವರಿಗೂ. ಹೀಗೆಯೇ, ಹೆಚ್ಚು ಹೆಚ್ಚು ಹೊಸ ಕವಿ, ಕವಯಿತ್ರಿಗಳಿಗೆ ಅವಕಾಶ ನೀಡಿ, ಪ್ರೋತ್ಸಾಹಿಸಿ, ಕನ್ನಡ ಸಾಹಿತ್ಯವನ್ನು, ಇನ್ನೂ ಹೆಚ್ಚು ಉತ್ತುಂಗಕ್ಕೇರುವಂತೆ ಮಾಡಬೇಕಾಗಿ ವಿನಂತಿ 🙏