Dr. K. Shivaram Karanth
ಪ್ರಾಣಿ ಪ್ರಪಂಚದ ವಿಸ್ಮಯಗಳು
ಪ್ರಾಣಿ ಪ್ರಪಂಚದ ವಿಸ್ಮಯಗಳು
Publisher - ಸಪ್ನ ಬುಕ್ ಹೌಸ್
- Free Shipping Above ₹250
- Cash on Delivery (COD) Available
Pages - 82
Type - Paperback
ಮುನ್ನುಡಿ
ಪಶು, ಪಕ್ಷಿಗಳ ವಿಚಾರದಲ್ಲಿ ಚಿಕ್ಕವರಿಗಿರುವಂಥ ಆಸಕ್ತಿ ಬೆಳೆದವರಲ್ಲಿ ಕಾಣಿಸುವುದಿಲ್ಲ; ಬೆಳೆದವರ ಚಿಂತೆಯೆಲ್ಲವೂ ಜೀವನೋಪಾಯದ ಕಡೆಗೆ ಹರಿಯುತ್ತದೆ; ಆದರೆ, ಮಕ್ಕಳು ಹುಟ್ಟಿದ ಗಳಿಗೆಯಿಂದ ಕಣ್ಣಿದು ಸುತ್ತಲಿನ ಯಾವತ್ತು ಜಗತ್ತಿನ ಕಡೆಗೆ ಆಸಕ್ತಿಯನ್ನು ತೋರಿಸತೊಡಗುತ್ತಾರೆ. ಅವರ ಪಂಚೇಂದ್ರಿಯಗಳು ಅದನ್ನು ನಿರೀಕ್ಷಿಸಲು ಹಾತೊರೆಯುತ್ತವೆ. ಬಣ್ಣ, ಬೆಳಕುಗಳ ಪ್ರಪಂಚ, ಚಲನವಲನಗಳ ಪ್ರಪಂಚ ಅವರನ್ನು ಆಕರ್ಷಿಸಿದಷ್ಟು ಇತರ ಸಂವೇದನೆಗಳು ಆಕರ್ಷಿಸುವುದಿಲ್ಲವಾದರೂ, ಇವೆರಡು ಶಕ್ತಿಗಳು ಮುಂದೆ ಅವರ ಜೀವನ, ಜೀವಗಳ ಕಡೆಗೆ ಕುತೂಹಲ ಬೆಳೆಯಿಸಲು ನೆರವಾಗುತ್ತವೆ.
ಮನುಷ್ಯ ತನ್ನ ಬದುಕಿಗೇ ಪ್ರಾಧಾನ್ಯಕೊಟ್ಟು, ಕೇವಲ ಆ ದೃಷ್ಟಿಯಿಂದ ಜಗತ್ತನ್ನು ಕಾಣುತ್ತಿದ್ದರೆ, ಮಕ್ಕಳು ಜಗತ್ತಿನ ಚರಾಚರವಸ್ತುಗಳ ಕಡೆಗೆ ವಿಶೇಷ ಆಸಕ್ತರಾಗಿರುತ್ತಾರೆ. ಆದರೂ ನಮ್ಮ ಜನರಿಗೆ, ಅದು ಮಕ್ಕಳಿಗೇ ಇರಲಿ, ಹಿರಿಯರಿಗೇ ಇರಲಿ, ತಿಳಿದಿರುವ ಸಂಗತಿಗಳು ತೀರ ಕಡಿಮೆ. ತಿಳಿಯಬೇಕಾದ ಸಂಗತಿಗಳು ಅಪಾರವಾಗಿವೆ. ಅವನ್ನು ಎಳೆಯರ ಮುಂದೆ ಇರಿಸುವ ಪ್ರಯತ್ನ ಇದು. ಅವರ ಕುತೂಹಲ ಬೆಳೆದು, ಈ ಜಗತ್ತಿನ ಪಶುಪಕ್ಷಿಗಳೂ ನಮ್ಮ ಅಣ್ಣ ತಮ್ಮಂದಿರು ಎಂಬ ಭಾವನೆ ಅವರಲ್ಲಿ ಮೂಡಿದ್ದಾದರೆ ಅವರ ಬದುಕಿಗೆ ಇನ್ನಷ್ಟು ಹೆಚ್ಚಿನ ಸಂತೋಷ ದೊರಕೀತು.
ಇತಿ,
ಶಿವರಾಮ ಕಾರಂತ
ಪ್ರಕಾಶಕರು - ಸಪ್ನ ಬುಕ್ ಹೌಸ್
Share
Subscribe to our emails
Subscribe to our mailing list for insider news, product launches, and more.