Skip to product information
1 of 1

Ravi J. Bhajranthi

ಪ್ರಾಣೇಶ್ PUNCH ಪಕ್ವಾನ್ನ

ಪ್ರಾಣೇಶ್ PUNCH ಪಕ್ವಾನ್ನ

Publisher - ಸಾವಣ್ಣ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಹಾಸ್ಯ ಪ್ರವೃತ್ತಿಯ ಜೊತೆಗೆ ಕವನ, ಕಿರು-ಕತೆ, ನಗೆಹನಿ, ಚುಟುಕುಗಳು ಮತ್ತು ಆಕರ್ಷಕ ನುಡಿಮುತ್ತುಗಳು ಮುಂತಾದವುಗಳನ್ನು ಬರೆದುಕೊಂಡು, ಒಂದೆಡೆ ಸಂಗ್ರಹಿಸಿಟ್ಟುಕೊಳ್ಳುವುದು ನಾನು ಮೊದಲಿನಿಂದಲೂ ಬೆಳೆಸಿಕೊಂಡು ಬಂದಿರುವ ಹವ್ಯಾಸ

ಶ್ರೀ ಗಂಗಾವತಿ ಪ್ರಾಣೇಶ ಗುರುಗಳ ಹಾಸ್ಯ ಭಾಷಣದಿಂದ ಸಾಕಷ್ಟು ಪ್ರಭಾವಿತಗೊಂಡ ನಾನು, ಪತ್ರಿಕಾರಂಗದ ದಿಗ್ಗಜರಾದ ಶ್ರೀ ವಿಶ್ವೇಶ್ವರ ಭಟ್ಟರ ಅಂಕಣಗಳ ಅತ್ಯಂತ ಪ್ರೀತಿಯ ಓದುಗನೂ ಹೌದು. ಅವರ ವಿಶ್ವವಾಣಿಯಲ್ಲಿ ಹಾಸ್ಯಗುರು ಪ್ರಾಣೇಶರವರ 'ಪ್ರಾಣೇಶ್ ಪ್ರಪಂಚ' ಅಂಕಣಗಳನ್ನು ಓದುತ್ತಾ ಬಂದ ಹಾಗೆ, ಕೇವಲ ಓದಿ ಬಿಡದೇ ಬರೆದಿಟ್ಟುಕೊಳ್ಳುವಂತಹ ಸಾಕಷ್ಟು ಆಕರ್ಷಕ ನುಡಿಸಾಲುಗಳನ್ನು ಅವುಗಳಲ್ಲಿ ಕಂಡುಕೊಂಡ, ಸಹಜವಾಗಿ ಅಂಥವುಗಳನ್ನು ಸಂಗ್ರಹಿಸುತ್ತಾ ಬಂದೆ, ಒಂದು ದಿನ ಪ್ರಾಣೇಶ ಗುರುಗಳಿಗೆ ಅವುಗಳನ್ನು ತೋರಿಸಿದಾಗ, ಬಹಳ ಸಂತಸಗೊಂಡ ಅವರು ತುಂಬಾನೇ ಚೆನ್ನಾಗಿ ಸಂಗ್ರಹ ಮಾಡಿದ್ದೀರಿ, ಇವುಗಳಿಗೆ ಒಂದು ಪುಸ್ತಕ ರೂಪ ಕೊಡಬಹುದಲ್ಲ'' ಎಂದು ಹೇಳಿದ ಮಾತಿನ ವಿಚಾರದ ಫಲವೇ ಈ ಪ್ರಾಣೇಶ್ ಪಂಚ್ ಪಕ್ವಾನ್ ಕಿರುಹೊತ್ತಿಗೆ

ಬೀಚೀ ಪ್ರಾಣೇಶರ ಬರಹಗಳಿಂದಾರಿಸಿದ ಈ ನುಡಿ ಮುತ್ತುಗಳ ಹೊತ್ತಿಗೆಯ ವೈಚಾರಿಕತೆಗೆ ಸಾಣೆ ಹಿಡಿಯುವ ತೀಕ್ಷ ಮಾತುಗಳಿವೆ, ನಗೆಯ ಹೊನಲನ್ನು ಚನ ಚಿಮ್ಮಿಸುವ ಚಾಟೋಕ್ತಿ, ವ್ಯಂಗ್ಯಕ್ತಿಗಳಿವೆ. ಹೊಸ ವಿಚಾರಧಾರೆಯಕ್ತ ಕರೆದೊಯ್ಯುವ ನುಡಿದೀಪಗಳಿವೆ. ನೋವಿನನುಭವಡಿ ಕರುಳ ಕರಗಿಸುವ, ಮನ ಮೆಚ್ಚಿ ಅಹುದಹುದೆನ್ನುವ ಅನುಭವಾಮೃತ ವಾಣಿಗಳಿವೆ, ಜೀವನದ ಯಾನದಲ್ಲಿ ಹತಾಶ, ವಿಷಾಧಗಳನ್ನು ಅನುಭವಿಸಿದಾಗ ಅದಕ್ಕೊಂದು ಹೊಸ ನುಡಿಗಟ್ಟನ್ನು ನೀಡುವ ನವಿನೋಕ್ಷಿಗಳಿವೆ. ಕಿರು ಮಾತುಗಳಲ್ಲಿ ಒಂದರ್ಥವನು ಹೊಮ್ಮಿಸುವ ನವಿಲೋಕ್ತಿಗಳಿವೆ, ಹೊಸನಗೆಯ ಪಂಚ್'ಗಳಿವೆ.

ಈಗಾಗಲೇ ಅನೇಕ ಕೃತಿಗಳ ಮೂಲಕ ಕನ್ನಡದ ಪ್ರಮುಖ ಬರಹಗಾರರ ಸಾಲಿನಲ್ಲಿ ಗೌರವದ ಸ್ಥಾನ ಪಡೆದಿರುವ ಬೀಚಿ ಪ್ರಾಣೇಶ ಗುರುಗಳಿಗೆ ಈ ಕೃತಿಯನ್ನು ನುಡಿತೋರಣಗಳ ಮೂಲಕ ಅಭಿಮಾನ ವಂತು ಸ೦ಪ್ರೀತಿ ತುಂಬಿದ ಗೌರವಗಳೊಂದಿಗೆ ಅರ್ಪಿಸುವ ಆಕಾಂಕ್ಷೆ ನನ್ನದು.

ಸಾವಣ್ಣ ಪ್ರಕಾಶನ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)