Dr. K. N. Ganeshaiah
ಪೆರಿನಿ ತಾಂಡವ
ಪೆರಿನಿ ತಾಂಡವ
Publisher - ಅಂಕಿತ ಪುಸ್ತಕ
- Free Shipping Above ₹300
- Cash on Delivery (COD) Available
Pages - 144
Type - Paperback
Couldn't load pickup availability
ಪೆರಿನಿ ಎನ್ನುವುದು ಕ್ರಿ.ಶ. ಹನ್ನೆರಡನೆ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ರೂಢಿಯಲ್ಲಿದ್ದ ಒಂದು ಶಾಸ್ತ್ರೀಯ ನೃತ್ಯರೂಪ. ಪುರುಷ-ಪೌರುಷವನ್ನು ನಾಟ್ಯಕಲೆಯ ಸೌಂದರ್ಯದಲ್ಲಿ ಸೆರೆಹಿಡಿಯುವುದೇ ಈ ನೃತ್ಯದ ವಿಶೇಷತೆ.
ವೀರ ಪುರುಷರ ಯೋಧ ಭಂಗಿಗಳನ್ನು ನೃತ್ಯಕಲೆಯ ಮಧುರ ರಸಭಾವಗಳಲ್ಲಿ ಪ್ರಕಟಿಸಲು ರೂಪುಗೊಂಡ ಈ ನಾಟ್ಯ ಕಲೆಯ ಬಗ್ಗೆ, ಕಾಕತೀಯರ ಸಾಮ್ರಾಜ್ಯದಲ್ಲಿ ಸೇನಾನಿಯೂ, ನೃತ್ಯ ಪ್ರವೀಣನೂ ಆಗಿದ್ದ ಜಯಪ್ಪನಾಯಕ ಎಂಬ ಪಂಡಿತ 'ನೃತ್ಯ ರತ್ನಾವಳಿ' ಎಂಬ ಗ್ರಂಥವನ್ನು ರಚಿಸಿದ್ದಾನೆ. ಪೆರಿನಿಯ ನೂರಾರು ಭಂಗಿಗಳನ್ನು ವಾರಂಗಲ್ ನಿಂದ 77 ಕಿಮೀ ದೂರದಲ್ಲಿರುವ ಪಾಲಂಪೇಟೆ ಎಂಬಲ್ಲಿ ಕ್ರಿ.ಶ. 12138ರಲ್ಲಿ ನಿರ್ಮಿಸಲಾದ ಒಂದು ಕಲ್ಲಿನ ದೇವಾಲಯದ ಸುತ್ತ ಭಿತ್ತಿಯಲ್ಲಿ, ಶಿಲ್ಪ ರೂಪದಲ್ಲಿ ಬಿಡಿಸಲಾಗಿದೆ. ಇಲ್ಲಿನ ಒಂದು ಕಥೆಯಲ್ಲಿ ಈ ನೃತ್ಯವು ಪ್ರಮುಖ ಪಾತ್ರ ವಹಿಸಿರುವುದರಿಂದ ಈ ಕಥಾಸಂಕಲನದ ಶೀರ್ಷಿಕೆಯಲ್ಲಿ ಆ ಹೆಸರನ್ನು ಜೋಡಿಸಲಾಗಿದೆ.
ಜೊತೆಗೆ, ಇಲ್ಲಿನ ಮಿಕ್ಕೆರಡು ಕಥೆಗಳಲ್ಲಿ ಬದುಕಿನ ಸುಂದರ ನಡೆಗಳು ಹೇಗೆ ತಾಂಡವ ರೂಪ ಪಡೆಯುತ್ತವೆ ಎನ್ನುವುದಕ್ಕೆ ಉಪಮೇಯ ವಾಗಬಹುದು ಎನ್ನುವ ನಂಬಿಕೆಯಿಂದ 'ಪೆರಿನಿ ತಾಂಡವ' ಈ ಕಥಾಸಂಕಲನದ ಶೀರ್ಷಿಕೆಯಾಗಿದೆ.
Share


Subscribe to our emails
Subscribe to our mailing list for insider news, product launches, and more.