Skip to product information
1 of 2

Yandamoori Veerendranath | Kannada: Raja Chendoor

ಪವಿತ್ರ ಯುದ್ಧ

ಪವಿತ್ರ ಯುದ್ಧ

Publisher - ವಸಂತ ಪ್ರಕಾಶನ

Regular price Rs. 320.00
Regular price Rs. 320.00 Sale price Rs. 320.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 339

Type - Paperback

17 ಡಿಸೆಂಬರ್, 1971ರಲ್ಲಿ ಪಾಕಿಸ್ತಾನ ಇಬ್ಬಾಗವಾಯಿತು. ಒಡೆದು ಎರಡು ಹೋಳಾಯಿತು. ಬಾಂಗ್ಲಾದೇಶ ಹುಟ್ಟಿಕೊಂಡಿತು. ಬಾಂಗ್ಲಾಗೆ ಭಾರತ ತನ್ನ ಸಂಪೂರ್ಣ ಬೆಂಬಲ-ಸಹಕಾರ ನೀಡಿತು. ಮುಕ್ತಿವಾಹಿನಿ (ಬಾಂಗ್ಲಾಸೇನೆ) ತನ್ನ ಸಂಪೂರ್ಣ ಬೆಂಬಲ ನೀಡಿತು. ಪಾಕ್‌ ಸೋಲೊಪ್ಪಿಕೊಂಡಿತು. ಮುಜೀಬುರ್ ರೆಹಮಾನ್, ಆ ದೇಶದ ಜನನಾಯಕರಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಾಗಿತ್ತು.

ಆಗಸ್ಟ್ 1975- ಇಸ್ಲಾಮಿಕ್ ಸೇನಾ ಪಡೆ ದಂಗೆದ್ದು ಮುಜೀಬುರ್ ರೆಹಮಾನ್‌ರನ್ನು, ಅವರ ಕುಟುಂಬದವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಮಾಡಿತು. ದೇಶ-ದೇಶಗಳ ನಡುವಿನ ವೈಷಮ್ಯ ಪಾಕ್‌ನಲ್ಲಿ ಬೇರೂರಿ ಮತ್ತೊಂದು ಆಕಾರ ತಳೆಯಿತು. ಅದು ಕಾಶ್ಮೀರವನ್ನು ಪಾಕ್‌ನೊಂದಿಗೆ ವಿಲೀನವಾಗಿಸುವ ಹುನ್ನಾರ. ಗೂಢಚರ್ಯೆ ಮುಖ್ಯಸ್ಥ ನೂರು ಕೋಟಿ ಬೇಡಿಕೆ ಮುಂದಿಡುತ್ತಾನೆ. ಐನೂರು ಕೋಟಿ ಕೊಡುವುದಾಗಿ ಆತನ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾನೆ – ಪಾಕ್ ಸರ್ಕಾರದ ಆಗಿನ ಪ್ರಧಾನಿ.

ನೂರು ಕೋಟೆಯೊಂದಿಗೆ ಆತ ಕಾಣೆಯಾಗುತ್ತಾನೆ. ನಲವತ್ತು ವರ್ಷ.. ಪಾಕ್‌ಗೆ ನೂರು ಕೋಟಿ ಮೊತ್ತದ ಹೊರತು ಮತ್ತೇನೂ ಗೊತ್ತಿಲ್ಲ. ಅದರ ಹಿನ್ನೆಲೆ - ಸಂಚೇನು..? ಅವನು ಇದ್ದಾನೋ.. ಸತ್ತಿದ್ದಾನೋ..?

ಆಳವಾಗಿ ಬೇರುಬಿಟ್ಟ ವೈಷಮ್ಯ, ನೆಲದಾಹ.. ಭಾರತ ಬೇಹುಗಾರಿಕೆಯಲ್ಲಿ ಸಂಚಲನ.. ಅಳಿಸಿಹೋದ ಹೆಜ್ಜೆ ಗುರುತುಗಳ ಅನ್ವೇಷಣೆ.. ಎಲ್ಲವೂ ನಿಗೂಢ..

ಇದು ಸಾಮಾಜಿಕ ಹಿನ್ನೆಲೆಯಲ್ಲಿ ರೂಪುಗೊಂಡ ಯಂಡಮೂರಿ ವೀರೇಂದ್ರನಾಥರ ಸಸ್ಪೆನ್ಸ್ - ಥ್ರಿಲ್ಲರ್ ಕಾದಂಬರಿ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)