Meghana Sudhindra
Publisher - ಸಾವಣ್ಣ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ದೇವರ ಅವತಾರಗಳ ಬಗ್ಗೆ ನಾವು ಕೇಳಿದ್ದೇವೆ. ಒಂದೊಂದು ಅವತಾರಕ್ಕೂ ಒಂದೊಂದು ಯುಗದಲ್ಲಿ ಅದರದ್ದೇ ಆದ ಕಥೆಗಳಿವೆ. ಆ ಕಥೆಗಳೇ ನಮ್ಮ ಅದೆಷ್ಟೋ ಕ್ರಿಯಾಶೀಲ ಯೋಚನೆಗಳಿಗೆ ಮೂಲ, ದೇವರು. ಮೀನಿನ ರೂಪ, ಆಮೆಯ ರೂಪ, ಅರ್ಧ ಮನುಷ್ಯ ಅರ್ಧ ಪ್ರಾಣಿ ರೂಪದ ಅವತಾರ ಆಗಬಹುದೆಂಬ ಕಥೆ ಕಲ್ಪನೆ ಹಾಗೂ ವಾಸ್ತವದ ನಮ್ಮ ನಂಬಿಕೆಯ ಮೂಲಧಾರ.
ಮನುಷ್ಯ ಒಂದು ಜನ್ಮದಲ್ಲಿ ಬೇರೆ ಬೇರೆ ಕೆಲಸ ಮಾಡುತ್ತಿದ್ದರೆ ಅವನದ್ದು ಅದೆಷ್ಟು ಅವತಾರಗಳು ಎಂದು ರೇಗಿಸಿರುತ್ತೇವೆ. ಮನುಷ್ಯ ಮನುಷ್ಯನಾಗಿಯೇ ಅವತಾರ ಎತ್ತೋದಕ್ಕೆ ಸಾಧ್ಯವಿಲ್ಲ. ದೇವರು ಸಹ ಬೇರೆ ಲೋಕಕ್ಕೆ ಬಂದು ತನ್ನ ಅವತಾರ ಎತ್ತಿ ಎಲ್ಲರಿಗೂ ಸನ್ಮ೦ಗಳ ಉಂಟು ಮಾಡಿ ಹೊರಡುತ್ತಾನೆ. ಮನುಷ್ಯ ಇರುವ ಜನ್ಮದಲ್ಲಿ ಪಾಪ ಪುಣ್ಯಗಳ ಲೆಕ್ಕ ಹಾಕಿಕೊಂಡು ಸತ್ತ ಮೇಲೆ ಸ್ವರ್ಗವೋ, ನರಕವೋ ಇಲ್ಲ ಮತ್ತೆ ಮನುಷ್ಯ ಜನ್ಮವೋ, ಪ್ರಾಣಿ ಜನ್ಮವೋ ಎಂದು ಕಾದು ಕುಳಿತಿರುತ್ತಾನೆ. ಆದರೆ ಸತ್ತ ನಂತರ ಏನು ಎಂಬ ಪ್ರಶ್ನೆಗೆ ಥರಾವರಿ ಉತ್ತರಗಳು ಸಿಗುತ್ತವೇ ವಿನಃ ಇದೇ ದಾರಿ ಎಂದಂತೂ ನಮಗೆ ಗೊತ್ತಿಲ್ಲ. ಮೆಟಾವರ್ಸ್ ಎ೦ಬ ಅಲ್ಟರ್ನೇಟ್ ಜಗತ್ತಿನ ಈಗಿನ ದೊಡ್ಡ ದೊಡ್ಡ ಕಂಪೆನಿಗಳು ಸೃಷ್ಟಿ ಮಾಡುತ್ತಿವೆ. ಅಲ್ಲೀಗ ಮನುಷ್ಯ ಒಂದು "ಅವತಾರ್" ರೂಪದಲ್ಲಿ ಜೀವಂತ ಇರುತ್ತಾನೆ. ಅವನಿಗೇ ಆದ ಒಂದು ನೀತಿ, ನಿಯಮ ಇದ್ದು ತಾನು ಅತ್ಯಂತ ಶಕ್ತಿಶಾಲಿಯೆಂದು ಅಂದುಕೊಂಡು, ಅವನಿಗೆ ಅಂತ್ಯವೇ ಇಲ್ಲ ಎಂಬ ಮನಸ್ಥಿತಿಯೊಂದಿಗೆ ಕಾಲ ಕಳೆಯುತ್ತಾನೆ. ದೇವರ ಅವತಾರಕ್ಕೆ ಕೊನೆ ಇರುವಾಗ ಮನುಷ್ಯನ 'ಅವತಾರ್' ಕೊನೆಯಾಗುವುದಿಲ್ಲವೇ? ಮೆಟಾವರ್ಸಿನ 'ಅವತಾರ್'ನಲ್ಲಿ ಅವನನ್ನ ಶಾಶ್ವತವಾಗಿ ನೋಡುವ ಮಗಳ ಕನಸಿಗೆ ನೀರೆರೆದು ಪೋಷಿಸುವ ಕೆಲಸ ಸಿಂದೆಸಿ ಮಾಡುತ್ತಿದೆ, ಯಾರು ಸಿಂದೆಸಿ? ಯಾವ ಪ್ರಾಜೆಕ್ಟು ಎ೦ಬುದರ ಕುತೂಹಲಕರವಾದ ಮಾಹಿತಿ ಈ ಪುಸ್ತಕದಲ್ಲಿದೆ. ಅಂದಹಾಗೆ ಮೆಟಾ ಅಂದರೆ 'ಮೀರಿದ್ದು' ಎಂದರ್ಥ. ವರ್ಸ್ ಎಂಬುದು ಯೂನಿವರ್ಸ್ ಪದದಿಂದ ಆಯ್ದುಕೊಂಡ ಭಾಗ, ಈ ಜಗತ್ತನ್ನು ಮೀರಿದ್ದು ಮೆಟಾವರ್ಸ್ ಎಂಬುದು ಇದರ ಸ್ಥೂಲ ಅರ್ಥ. ಮನುಷ್ಯನ ಕಲ್ಪನೆಗೂ ಎಲ್ಲೆ ಇಲ್ಲ, ಮೆಟಾವರ್ಸಿಗೂ ಇಲ್ಲ. ಮಗಳ ಎಲ್ಲೆ ಮೀರಿದ ಕನಸುಗಳಿಗೆ ಅಪ್ಪ ಮಾತ್ರ ರೆಕ್ಕೆ ಕೊಡಲು ಸಾಧ್ಯ, ಅಂತಹ "ಅವತಾರ್" ನೀಳ್ಗತೆಯನ್ನು ಇಲ್ಲಿ ಓದಬಹುದು.