Skip to product information
1 of 1

Marjan Satrapi, Translated : Preeti Nagaraja,

ಪರ್ಸೆಪೊಲಿಸ್

ಪರ್ಸೆಪೊಲಿಸ್

Publisher - ಛಂದ ಪ್ರಕಾಶನ

Regular price Rs. 395.00
Regular price Rs. 395.00 Sale price Rs. 395.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಇರಾನ್ ಮೂಲದ ಲೇಖಕಿ ಮಾರ್ಜಾನ್ ಸತ್ರಪಿ ವಿರಚಿತ 'ದ ಪರ್ಸೆಪೊಲಸ್' ಎಂಬ ಫ್ರೆಂಚ್ ಗ್ರಾಫಿಕ್ ಕಾದಂಬರಿಯ ಮೊದಲ ಭಾಗ 2000ದ ಇಸವಿಯಲ್ಲಿಯೂ, ಎರಡನೇ ಭಾಗ 2004ನೇ ಇಸವಿಯಲ್ಲಿಯೂ ಪ್ರಕಟಗೊಂಡವು. ಜಗತ್ತಿನಾದ್ಯಂತ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದ ಈ ಪುಸ್ತಕಗಳು ಒಂದು ವಿನೂತನ ಪ್ರಯೋಗ ಎನ್ನಿಸಿಕೊಂಡಿವೆ. ಹಲವಾರು ಮರು ಮುದ್ರಣ ಕಂಡು, ಅನಿಮೇಷನ್ ಸಿನಿಮಾವಾಗಿ ಹಲವು ಪ್ರಶಸ್ತಿಗಳಿಗೆ ಭಾಜನವಾಗಿವೆ.

ಲೇಖಕಿ ಮಾರ್ಜಾನ್ 1969ರ ನವೆಂಬರ್ 22 ರಂದು ಜನಿಸಿದರು. ಇರಾನ್‌ನ ಟೆಹರಾನ್ ನಗರದಲ್ಲಿ ವಾಸಿಸುತ್ತಿದ್ದ ಆಕೆಯ ತಂದೆತಾಯಿಗಳು ಮಧ್ಯಮವರ್ಗಕ್ಕೆ ಸೇರಿದ, ಪ್ರಗತಿಪರ ವಿಚಾರಗಳುಳ್ಳ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಇರಾನ್ ದೇಶದ ಕಡೆಯ ಷಾ ಅವರ ರಾಜಪ್ರಭುತ್ವದ ವಿರುದ್ಧ ನಡೆದ ಉದಾರವಾದಿ ಹೋರಾಟಗಳನ್ನು ಅವರು ಬೆಂಬಲಿಸಿದರು. 1979ರಲ್ಲಿ ಹತ್ತು ವರ್ಷದ ಪುಟ್ಟ ಹುಡುಗಿಯಾದ ಮಾರ್ಜಾನ್ ಕಣ್ಣೆದುರು, ಇರಾನಿನ ಕ್ರಾಂತಿ ನಡೆಯುತ್ತಿತ್ತು. ಅನಂತರ ಇರಾನ್ ದೇಶವು ಮುಸ್ಲಿಂ ಮೂಲಭೂತವಾದಿಗಳ ಆಳಿಕೆಗೆ ಒಳಪಟ್ಟಿತು. ರಾಜಾಡಳಿತ ಬದಲಾಗಿ ಮೂಲಭೂತವಾದಿಗಳ ಕೈಗೆ ಅಧಿಕಾರ ವರ್ಗಾವಣೆಯಾಯಿತು. ಆಗ ಕಂಡ ವಿಚಿತ್ರ ವೈರುಧ್ಯಗಳ ಸಮರ್ಥ ಚಿತ್ರಣವನ್ನು ಈ ಪುಸ್ತಕ ಕಟ್ಟಿಕೊಡುತ್ತದೆ.

ಮಾರ್ಜಾನ್‌ ಮೊದಲಿಗೆ ಟೆಹರಾನ್‌ನಲ್ಲಿರುವ ಫ್ರೆಂಚ್ ಭಾಷೆಯ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಮುಂದೆ ಅವಳ ಭವಿಷ್ಯ ಇರಾನಿನಲ್ಲಿ ಸಾಧ್ಯವಿಲ್ಲ ಎನ್ನುವ ಅಂಶವನ್ನು ಮನಗಂಡ ಅವಳ ಅಸಹಾಯಕ ತಂದೆತಾಯಿಗಳು, ಆ ಹದಿನಾಲ್ಕರ ಪುಟ್ಟ ಬಾಲೆಯನ್ನು ಏಕಾಂಗಿಯಾಗಿ ದೂರದ ಆಸ್ಟ್ರಿಯಾ ದೇಶಕ್ಕೆ ಕಳುಹಿಸಿದರು. ಆಸ್ಟ್ರಿಯ ದೇಶಕ್ಕೆ ಆಗ ಇರಾನ್‌ನಿಂದ ಸರಿಯಾದ ಸಂಪರ್ಕ ಮಾರ್ಗಗಳೂ ಇರಅಲ್ಲ. ಆದರೂ 'ಬದುಕಿದರೆ ಬೇಡಿ ತಿಂದೇನು' ಎಂಬ ಹಟದಲ್ಲಿ ಹೊಸ ದೇಶಕ್ಕೆ ಹೋದ ಮಾರ್ಜಾನ್, ಹಲವಾರು ಸಿಹಿ ಕಹಿ ಅನುಭವಗಳಿಗೆ ಒಳಗಾಗುತ್ತಾಳೆ ಮತ್ತು ಸಾವಿನ ಬಾಗಿಲನ್ನೂ ತಟ್ಟಿ ಬರುತ್ತಾಳೆ. ಆದರೂ ಪೂರ್ಣ ಸಫಲತೆಯನ್ನು ಕಾಣದೆ, ಮತ್ತೆ ಇರಾನಿಗೆ ಮರಳುತ್ತಾಳೆ. ಆದರೆ ಬದಲಾಗಿರುವ ಇರಾನ್ ಅನ್ನು ಕಂಡು ಮರುಗುತ್ತಾಳೆ.

ಮಾತೃಭೂಮಿಯಾದ ಇರಾನಿನಲ್ಲಿ ಆಗ ಮೂಲಭೂತವಾದಿಗಳ ದಬ್ಬಾಳಿಕೆಯ ಆಳ್ವಿಕೆ ಮುಂದುವರೆಯುತ್ತಿರುತ್ತದೆ. ಅದರ ಕರಿನೆರಳಲ್ಲೇ ತನ್ನ ಶಿಕ್ಷಣವನ್ನು ಮಾರ್ಜಾನ್ ಮುಂದುವರೆಸುತ್ತಾಳೆ. ಎಲ್ಲ ಸಂಕಷ್ಟಗಳ ನಡುವೆಯೂ ಆಶಾಭಾವನೆಯ ಸೆಳಕನ್ನು ಕಾಣಲು ಪ್ರಯತ್ನಪಟ್ಟರೂ ಸಾಧ್ಯವಾಗದೆ, ವೈಯಕ್ತಿಕ ಅಡೆತಡೆಗಳ ನಡುವೆಯೂ ಇರಾನ್ ಬಿಟ್ಟು ಫ್ರಾನ್ಸ್‌ಗೆ ಹೋಗಿ ಓದನ್ನು ಮುಂದುವರೆಸುತ್ತಾಳೆ. ಎರಡನೆಯ ಬಾರಿ ತೊರೆಯುತ್ತಿರುವ ತನ್ನ ನೆಲದ ಬಗ್ಗೆ ಅವಳಿಗೆ ಭಾವುಕತೆ ಇದೆಯಾದರೂ, ಈಗದು ದೌರ್ಬಲ್ಯವಾಗಿರದೆ ಎದೆಯಲ್ಲಿರುವ ಪ್ರಾಣವಾಯುವಿನಂತೆ ಸಶಕ್ತವಾಗಿದೆ.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)