Skip to product information
1 of 1

Kumara Bendre

ಪರವಶ

ಪರವಶ

Publisher - ಅಂಕಿತ ಪುಸ್ತಕ

Regular price Rs. 175.00
Regular price Rs. 175.00 Sale price Rs. 175.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಗೆಳೆಯ ಕುಮಾರ ಬೇಂದ್ರೆಯವರ 'ಪರವಶ' ಎಂಬ ಈ ಕಥಾ ಸಂಕಲದ ಹಲವು ಕತೆಗಳಲ್ಲಿ ಪ್ರೀತಿ ಸ್ಥಾಯಿಯಾಗಿರುವುದಷ್ಟೇ ಅಲ್ಲ, ಸಂಚಾರಿಯೂ ಆಗಿದೆ. ಗಂಡು ಹೆಣ್ಣಿನ ನಡುವಣ ಆಕರ್ಷಣೆಯನ್ನು ಕುಮಾರ ಬೇಂದ್ರೆಯವರು ಎಷ್ಟು ನವಿರಾಗಿ ಮನಸ್ಸನ್ನು ಪ್ರಫುಲ್ಲಗೊಳಿಸುವಂತೆ ಬರೆಯಬಲ್ಲರು ಎಂಬುದಕ್ಕೆ “ಪರವಶ' ಕತೆಯನ್ನು ನೋಡಬಹುದು.

'ಮನಸು ಮಾಯೆಯ ಬೆನ್ನೇರಿ' ಕತೆಯಲ್ಲೂ ಪಾತ್ರಗಳು ತಮ್ಮ ಮೊದಲ ನೋಟದ ಪ್ರೇಮದಿಂದ ಸಾಕಷ್ಟು ಮುಂದುವರಿದರೂ ಕೂಡ ಅವುಗಳಿಗೆ ಲೈಂಗಿಕ ಸಾಫಲ್ಯಕ್ಕಿಂತ ಮಿಗಿಲಾಗಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳುವುದೇ ಮುಖ್ಯವಾಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಕುಮಾರ ಬೇಂದ್ರೆಯವರಲ್ಲಿ ಕತೆಯ ಶಿಲ್ಪ ಹೇಗಿರಬೇಕೆಂಬ ಪ್ರಜ್ಞೆಯಿದೆ; ವಿವರಗಳು ಎಷ್ಟು ಬೇಕು, ಕತೆಗೆ ಸಂಭಾಷಣೆಗಳೇ ಏನೆಲ್ಲಾ ಪೂರಕ ವಿವರಗಳನ್ನು ಒದಗಿಸಬೇಕು ಎಂಬ ಅರಿವಿದೆ; ಓದುಗನ ಮನಸ್ಸನ್ನು ತಟ್ಟುವಂಥ ಅಭಿವ್ಯಕ್ತಿ ವಿಧಾನವಿದೆ. ಎಲ್ಲಕ್ಕಿಂತ ಮಿಗಿಲಾಗಿ ದೈನಂದಿನ ಅಥವಾ ಪ್ರಕೃತಿಯ ಸೂಕ್ಷ್ಮ ವರ್ಣನೆಯ ಮೂಲಕ ಸಂದರ್ಭವೊಂದರ ದಾರುಣತೆಯನ್ನೋ ವಿಷಣ್ಣತೆಯನ್ನೋ ಬಿಂಬಿಸಿಬಿಡುವಂಥ ನಿರೂಪಣಾ ಕೌಶಲವಿದೆ. ಒಮ್ಮೊಮ್ಮೆ ಕೋಮಲತೆಯಿಂದ, ಕೆಲವೊಮ್ಮೆ ವಿಷಾದದಿಂದ ಕೊನೆಯಾಗುವ ಇಲ್ಲಿನ ಕತೆಗಳು ತಮ್ಮ ಮನೋವಿಶ್ಲೇಷಣಾತ್ಮಕ ಒಳನೋಟಗಳಿಂದ ನಮ್ಮ ಮನಸ್ಸನ್ನು ವ್ಯಾಪಿಸಿಕೊಳ್ಳುತ್ತವೆ. ಕಳೆದುಹೋದ ಕಾಲದ ಹಾಗೂ ಅರ್ಧ ಹತ್ತಿಕ್ಕಲಾದ ಹಳಹಳಿಕೆ, ಮತ್ತೆ ಮತ್ತೆ ಹಿಂತಿರುಗಿ ಕಾಡುವ ನೆನಪುಗಳು, ಅಳಿಸಲಾಗದ ಜೀವನ ಚಿತ್ರಗಳು, ಮನುಷ್ಯನ ಆಶೋತ್ತರಗಳ ಅಶಾಶ್ವತತೆ, ಇವೆಲ್ಲವೂ ಇಲ್ಲಿ ಮಡುಗಟ್ಟಿವೆ.

• ಎಸ್. ದಿವಾಕರ್
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)