Skip to product information
1 of 2

K. N. Subrahmanya

ಪರ ಉರಿನವನು

ಪರ ಉರಿನವನು

Publisher - ಸ್ನೇಹ ಬುಕ್ ಹೌಸ್

Regular price Rs. 175.00
Regular price Rs. 175.00 Sale price Rs. 175.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 144

Type - Paperback

ವೈಚಿತ್ರ್ಯಗಳಿಂದ ಕೂಡಿದ ಬದುಕೇ ಒಂದು ಬವಣೆಯ ಯಾತ್ರಾ-ಅಯನದಂತೆ! ಅಲಿಯುವುದು, ಅರಸುವುದು, ತೊಳತೊಳಲಿ ನೆಲೆಗಾಣದೇ ಅಂತಿಮ ಅಳಿದು ಹೋಗುವುದು. ಪ್ರಾಯಶಃ ಇದುವೇ ಜೀವನಕ್ರಮವೇ! ಅಥವಾ ಜೀವಿತಾವಧಿಗೆ ಹಿಡಿದ ಕೈಗನ್ನಡಿಯ ಮಾದರಿಯೇ? ಅರ್ಥವಾಗದ ನಿರೀಕ್ಷಣವಿದು. ಕೇಳಲು ತಾತ್ವಿಕ ವಿಷಯ ವಾದರೂ; ಯಾಂತ್ರಿಕ ಗುಣಧರ್ಮದಲ್ಲಿನ ಮನುಷ್ಯ-ಪಾತ್ರವು ಕೇವಲ ತೃಣು-ಅಣು- ಕಣವಾಗಿಯೇ ಇರಿಸಿ, ನಶಿಸಿ ಅಸುನೀಗಿಸುವುದು. ಇದು ಪ್ರಾಕೃತಿಕ-ವಿಕಲ್ಪವಲ್ಲದಿದ್ದರೂ ಸುಕೃತದೊಳಗಿನ ಸೂಕ್ಷ್ಮ ಸಂವೇದನೆಯ ವೈರುಧ್ಯವೂ ಹೌದು! ಇಂಥ ನಿಂತ ನೆಲವೇ ಅವಿರತ ಅಸ್ತಿತ್ವದ ಬುನಾದಿಯನ್ನರಿಸಿರುವಾಗ; ಅಸ್ಮಿತೆಯ ಪ್ರಶ್ನೆ ಧುತ್ತೆಂದು ಮೆದುಳನ್ನೇರಿ ಅನ್ಯವಿಚಾರಗಳಿಗೆ ವಲಸೆಯಾಗುವುದು ಸಜಿಕವೇ. ಇದೀಗ ಈ ಹೊತ್ತಗೆಯ ಯದು-ಮಧುವಿನ "ಪರೂರ" ವ್ಯಥೆಯೂ ಇದನ್ನೇ ಯಾನಿಸುವಂತೆ..

ಹೌದು! ಅರಸುತ್ತ ಅರಸುತ್ತ ಅನ್ವೇಷಣ ಪಥದಲ್ಲಿ ಸಾಗುತ್ತ "ಪರ ಊರಿನವನು" ಎನುತಲೇ 'ಶ್ರೀ. ಕೆ.ಎನ್. ಸುಬ್ರಹ್ಮಣ್ಯ' ಅವರು ಗಾಢವಾಗಿ, ಅಷ್ಟೇ ಅಗಾಧಾ'ದ್ಯವಾಗಿ ತಂತ್ರಜ್ಞಾನದ ಆಗರ ಬೇಗೆಯಲಿ ಬೆಂದು-ಬಳಲಿ ಪರಮಾತ್ಮವಾಗಿ ಈ ಕಾದಂಬರಿಯನ್ನು ರಚಿಸಿದ್ದಾರೆ! ಇದು ಅವರ ಸ್ವ-ನುಭೂತಿಯ ಕಥೆಯಾದರೂ ವ್ಯತಿರಿಕ್ತ ಭಾವಗಳಿಗೆ ಭಿನ್ನ-ಹಂದರವೇ ಆಗಿದೆ. ಅಂತೇ; ಸಂಬಂಧಗಳ ನಂಟು ಎಷ್ಟೇ ಸಮತತ್ವದಲ್ಲಿದ್ದರೂ ಅಷ್ಟೇ ವಿಚ್ಚಿನ್ನ-ಭಾವವೂ ವ್ಯಕ್ತವಾಗುವಂತೆ! ಅರ್ಥಾತ್, ಓರ್ವನ ಸಾಧನೆ-ಆರ್ಥಿಕತೆ-ಛಲ-ಕನಸು-ಜ್ಞಾನ- ಪರಿಶ್ರಮ-ನಿಷ್ಠೆ-ತ್ಯಾಗ-ಪ್ರೀತಿ ಎಲ್ಲವೂ ವಿಫಲತೆಗೆ ಎಡೆಯಾದಾಗ ಹತಾಶೆಯ ಗೂಡೊಂದು ತೆರೆದುಕೊಳ್ಳುವಂತೆ!! ಆಗಲ್ಲಿ ಚಿಲಿಪಿಲಿಗಳ ಕಲರವವಿರುವುದಿಲ್ಲ. "ಮನೋ-ತಾಂತ್ರಿಕ- ದೋಷವೇ" ಎಂಬಂತೆ ಜೀವಿಗಳೂ ನಾಮಾವಶೇಷವಾಗುತ್ತವೆ. "ವಲಸೆ ಬಂದ ಹಕ್ಕಿಗಳಿಗೆಲ್ಲಿ ಜಾಗೆ" ಅಂಬಂತೆ? ಇನ್ನೂ ಹುಲುಮಾನವ?! ಆದಾಗ್ಯೂ; ಲೇಖಕರರು ಎಲ್ಲಿಯೂ, ಏನನ್ನೂ ಬಿಟ್ಟುಕೊಡದೇ, ಅಪೂರ್ಣಗೊಳಿಸದೇ, ಅಲೆಮಾರಿಯಾಗಿಸದೇ ಒಟ್ಟೂ-ವಲಯದ ಪ್ರಾಕರಿಯನ್ನು ಕಾದಂಬರಿಯಲ್ಲಿ ಬೆಸೆದು; ಸಾರದಂತೆ, ನೋವಲ್ಲದ್ದಿದ ಕುಂಚದಂತೆ ಭಾವನಾತ್ಮಕವಾಗಿ "ಪರೂರ-ಗಾಥೆಯನ್ನು" ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಅಷ್ಟೇ ಸುಂದರ ಸಚಿತ್ರಿಸಿದ್ದಾರೆ...

-ಶ್ರೀ. ಪ್ರವೀಣ ರಬಕವಿ

ನಟರು-ಚಿಂತಕರು

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
H
HAARKNAAL SHIVAKUMARA GOUDA JTO
👌

🎉