Dr. K. N. Ganeshaiah
Publisher - ಅಂಕಿತ ಪುಸ್ತಕ
Regular price
Rs. 175.00
Regular price
Rs. 175.00
Sale price
Rs. 175.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
`ಬರೆದರೆ ಓದುಗರು ಮೆಚ್ಚಿ ಅಹುದಹುದೆನಬೇಕು' ಹೀಗೆಲ್ಲಾ ಹೇಳುವುದು ಸುಲಭ. ಬರೆಯುವುದು ಕಷ್ಟ. ಆದರೆ ಗಣೇಶಯ್ಯನವರು ಬರವಣಿಗೆಯ ಕಲೆಯನ್ನು ಸಿದ್ಧಿಸಿ ಕೊಂಡು ಬಿಟ್ಟಿದ್ದಾರೆ. ಅವರು ಬರೆದರೆ ಓದುಗರು ಮೆಚ್ಚಿ ಕತ್ತುನೋವು ಬರುವಷ್ಟು ತಲೆಯಾಡಿಸಬೇಕಾಗುತ್ತದೆ.
ಕನ್ನಡ ಸಾಹಿತ್ಯ ಲೋಕಕ್ಕೆ, ಇದ್ದಕ್ಕಿದ್ದಂತೆ ನುಗ್ಗುವ ಪ್ರವಾಹದಂತೆ ಬಂದವರು ಗಣೇಶಯ್ಯನವರು. ಹೊಚ್ಚ ಹೊಸ ಭಾಷೆ, ಹೊಚ್ಚ ಹೊಸ ವಿಷಯ, ಹೊಚ್ಚ ಹೊಸ ನಿರೂಪಣೆಯ ಮೂಲಕ ಇಡೀ ಓದುಗ ವರ್ಗವನ್ನು ದಿಗ್ಬ್ರಮೆಗೊಳಿಸಿದ್ದಾರೆ. ಇದು ಪತ್ತೇದಾರಿ ಅಂದರೆ ಪತ್ತೇದಾರಿ ಅಲ್ಲ, ಇಲ್ಲ ಅಂದರೆ ಥಿಲ್ಲರ್ ಅಲ್ಲ, ಚರಿತ್ರೆ ಅಂದರೆ ಚರಿತ್ರೆ ಅಲ್ಲ. ಆದರೆ ಒಮ್ಮೆ ಓದಲು ತೊಡಗಿದಿರೆಂದರೆ ಪೂರ್ತಿ ಮುಗಿಯುವವರೆಗೆ ಪುಸ್ತಕವನ್ನು ಕೆಳಗಿಡಲು ಸಾಧ್ಯವೇ ಇಲ್ಲ. ವೈಜ್ಞಾನಿಕ - ಚಾರಿತ್ರಿಕ - ಪತ್ತೇದಾರಿ - ಥ್ರಿಲ್ಲರ್ ಮುಂತಾದ ಗುಣಗಳು ಇವರ ಕಥೆ - ಕಾದಂಬರಿಗಳಲ್ಲಿ ಮೇಳೈಸಿವೆ.
'ಡಾವಿನ್ಸಿಕೋಡ್' ಮಾದರಿಯ ಬರವಣಿಗೆಯ ಮೂಲಕ ಕನ್ನಡ ಕಥಾಸಾಹಿತ್ಯವನ್ನು ಪುನರುಜ್ಜಿವನಗೊಳಿಸಿ “ಕನ್ನಡಕ್ಕೊಬ್ಬರೇ ಗಣೇಶಯ್ಯ' ಎನಿಸಿದ್ದಾರೆ. ಬರೆದದ್ದು ಮೂರು ಕಾದಂಬರಿ, ಎರಡು ಕಥಾ ಸಂಕಲನಗಳಾದರೂ ಹೊಸ ಓದುಗ ವರ್ಗವನ್ನೇ ಸೃಷ್ಟಿ ಮಾಡಿದ ಈ ಕೃಷಿವಿಜ್ಞಾನಿಯ ಸಾಧನೆ ಮೆಚ್ಚುವಂಥದ್ದು.