Jogi
ಒಂದಾನೊಂದು ಊರಲ್ಲಿ..
ಒಂದಾನೊಂದು ಊರಲ್ಲಿ..
Publisher - ಸಾವಣ್ಣ ಪ್ರಕಾಶನ
- Free Shipping Above ₹250
- Cash on Delivery (COD) Available
Pages -
Type -
ಮುಲ್ಲಾ ನಸ್ರುದ್ದೀನ್ ಎಂಬ ಸೂಫಿ ತತ್ವಜ್ಞಾನಿಯ ಈ ಕತೆಗಳನ್ನು ನಾನು ಕನ್ನಡಕ್ಕೆ ತಂದದ್ದು, ಇದೀಗ ಕತೆಗಳನ್ನು ಓದುವ ಆಸಕ್ತಿ ತೋರುತ್ತಿರುವ ಕನ್ನಡದ ಮಕ್ಕಳಿಗೋಸ್ಕರ, ಬಿಡುವಿನ ದಿನಗಳಲ್ಲಿ ಏನೋ ಒಂದು ನೆಪ ಮಾಡಿಕೊಂಡು ಹಳ್ಳಿ ಹಳ್ಳಿಯ ಶಾಲೆಗಳನ್ನು ಸುತ್ತುತ್ತಿದ್ದಾಗ, ಹಟ್ಟಿಯಂಗಡಿಯಲ್ಲಿ ಸಿಕ್ಕ ಏಳನೇ ಕ್ಲಾಸಿನ ಪುಟಾಣಿಯೊಬ್ಬಳು 'ನಾವೂ ಓದಬಹುದಾದ ಕತೆಗಳನ್ನು ನೀವೇಕೆ ಬರೆಯುತ್ತಿಲ್ಲ' ಅಂತ ಕೇಳಿದಳು. ಈ ಮಾತು ನನ್ನನ್ನು ನಿಜಕ್ಕೂ ಚಿಂತೆಗೀಡು ಮಾಡಿತು. ಗಂಭೀರವಾದ, ತಾತ್ವಿಕತೆಯೇ ತುಂಬಿದ ಕತೆಗಳನ್ನು ಬರೆಯುತ್ತಿರುವ ನಾವು ಮಕ್ಕಳಿಗೋಸ್ಕರ ಏನು ಮಾಡುತ್ತಿದ್ದೇವೆ ಎಂಬ ಪ್ರಶ್ನೆ ಕೊರೆಯತೊಡಗಿತು. ನಾನು ಚಿಕ್ಕಂದಿನಲ್ಲಿ ಓದಿದ ಈಸೋಪನ ಕತೆಗಳು, ಪಂಚತಂತ್ರದ ಕತೆಗಳು, ಅರೇಬಿಯನ್ ನೈಟ್ಸ್ ಕತೆಗಳು, ಜಿಪಿ ರಾಜರತ್ನಂ ಅನುವಾದಿಸಿದ ಪರ್ಷಿಯನ್ ಕತೆಗಳೆಲ್ಲ ಕಣ್ಣುಂದೆ ಸುಳಿದು ಹೋದವು.
ಅಲ್ಲಿಂದ ಬಂದವನೇ ಈ ಕತೆಗಳನ್ನು ಕನ್ನಡಕ್ಕೆ ತಂದೆ. ನಸ್ರುದ್ದೀನನ ಸಾವಿರಾರು ಕತೆಗಳ ಪೈಕಿ ನೂರನ್ನು ಎಷ್ಟು ಸರಳವಾಗಿ ಹೇಳಲು ಸಾಧ್ಯವೋ ಅಷ್ಟು ಸರಳವಾಗಿ ಹೇಳಿದ್ದೇನೆ. ಇವು ಹೊಸಕಾಲದ ಪುಟಾಣಿಗಳಿಗೆ ಅವರಿಗೆ ದಕ್ಕುವ ಕನ್ನಡದಲ್ಲಿ ಹೇಳಿದ ಕತೆಗಳು. ಇವು ಮಕ್ಕಳನ್ನು ಕನ್ನಡ ಪುಸ್ತಕ ಓದುವ ಹುಚ್ಚಿಗೆ ಹಚ್ಚಲಿ ಎಂಬುದಷ್ಟೇ ನನ್ನ ಆಸೆ.
-ಜೋಗಿ
Share
Subscribe to our emails
Subscribe to our mailing list for insider news, product launches, and more.