Ramakrishna Hegde
ಒಲವ ಧಾರೆ
ಒಲವ ಧಾರೆ
Publisher -
- Free Shipping Above ₹300
- Cash on Delivery (COD) Available
Pages - 66
Type - Paperback
Couldn't load pickup availability
ರಾಮಕೃಷ್ಣ ಹೆಗಡೆ ಉಪನ್ಯಾಸಕರು
ಕಥೆ-ಕವನ ರಚನೆ ಮಾಡುವುದು ಮನಸ್ಸಿನ ಸಂತೋಷಕ್ಕಾಗಿ ಎಂದು ಭಾವಿಸಿದ್ದವನು ನಾನು. ನಾನು ರಚಿಸಿದ ಕವನಗಳು ಪುಸ್ತಕ ರೂಪದಲ್ಲಿ ಬರಬೇಕು ಎಂದು ಯಾವತ್ತಿಗೂ ಬಯಸಿದವನಲ್ಲ. ಅಂತಹ ಪಾಂಡಿತ್ಯ ಪೂರ್ಣ ಬರಹಗಳನ್ನೂ ಬರೆದವನಲ್ಲ. ಆದರೆ ಸುಮ್ಮನೆ ಕುಳಿತಿರುವಾಗ ಹೊಳೆದ ಪದಗಳನ್ನು ಗೀಚಿದ್ದೇನೆ. ಅದನ್ನು ನೋಡಿದ ನಮ್ಮ ಕ್ರಿಯೇಟಿವ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಶ್ರೀ ಅಶ್ವತ್ ಎಸ್.ಎಲ್ ರವರು ನಿಮ್ಮದು ಒಂದು ಕವನ ಸಂಕಲನ ಮಾಡಬೇಕು ಎಂದು ಪ್ರೀತಿಯಿಂದ ಹಾರೈಸಿ ಬರೆಸಿದರು. ಕಳೆದ 15 ವರ್ಷಗಳಿಂದ ಬರೆಯುತ್ತಿದ್ದೆನಾದರೂ ನನ್ನ ವೈಯಕ್ತಿಕ ಡೈರಿ ಪುಸ್ತಕದಲ್ಲಿ ಇರುತ್ತಿತ್ತು. ಅದಕ್ಕೆ ಒಂದು ಪುಸ್ತಕ ರೂಪಕೊಟ್ಟು ಸಂಕಲಿಸಬೇಕೆಂದು ಒತ್ತಾಸೆ ನೀಡಿದವರು ಕವಿ ಹೃದಯಿ, ವಾಗ್ನಿ ಮತ್ತು ಪುಸ್ತಕಪ್ರೀತಿ ಹೊಂದಿರುವ ಪ್ರಕಾಶಕರ ಮಾತುಗಳನ್ನು ವಿಶೇಷ ಪ್ರೀತಿ ಅಭಿಮಾನದಿಂದ ಬರೆದು ಪ್ರೋತ್ಸಾಹಿಸಿದವರು ಅಶ್ವತ್ ಎಸ್ .ಎಲ್ ರವರು.
ಸರ್ ನನ್ನಿಂದ ಆಗಲಿಕ್ಕಿಲ್ಲ ಎಂದಾಗ ಖಂಡಿತ ಆಗುತ್ತದೆ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಖ್ಯಾತ ಸಾಹಿತಿ ಅನು ಬೆಳ್ಳೆಯವರೂ ಒಂದು ಕವನ ಸಂಗ್ರಹ ಬರೆಯಿರಿ ಎಂದು ಮೊದಲಿನಿಂದಲೂ ಬೆಂಬಲಿಸುತ್ತಿದ್ದರು. ಎಲ್ಲರ ಸಾಂಗತ್ಯದಿಂದ ನನ್ನ ಆ ಚೊಚ್ಚಲ ಕವನ ಸಂಕಲನ 'ಒಲವ ಧಾರೆ' ರೂಪುಗೊಂಡಿದೆ. ಹಾಗೆಯೇ ಮಡಿಕೇರಿ ಸಂತ ಜೋಸೆಫರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ, ಹಲವಾರು ಸಾಹಿತ್ಯ ಪ್ರಶಸ್ತಿ ಗಳಿಸಿರುವ ಶ್ರೀಮತಿ ಜಯಲಕ್ಷ್ಮಿ ಕೆ. ಚೆಂದದ ಮುನ್ನುಡಿ ಬರೆದುಕೊಟ್ಟಿದ್ದಾರೆ. ನನ್ನನ್ನು ಕೃತಿ ರಚಿಸುವಂತೆ ಪ್ರೇರೇಪಿಸಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಪ್ತಸಂಸ್ಥಾಪಕರಿಗೆ, ತಿದ್ದಿ-ತೀಡಿ ಹಾರೈಸಿದ ಎಲ್ಲರಿಗೂ ಚಿರಋಣಿ. ತಮ್ಮೆಲ್ಲರ ಪ್ರೀತಿ ಅಭಿಮಾನಗಳಿಗೆ ಶಿರಬಾಗುತ್ತೇನೆ.
Share


Subscribe to our emails
Subscribe to our mailing list for insider news, product launches, and more.