1
/
of
2
K. Mahantesh
ಒಡಲಾಳದ ಕಥನಗಳು
ಒಡಲಾಳದ ಕಥನಗಳು
Publisher -
Regular price
Rs. 130.00
Regular price
Rs. 130.00
Sale price
Rs. 130.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available
Pages - 156
Type - Paperback
Couldn't load pickup availability
ವಿದ್ಯಾರ್ಥಿ ಚಳುವಳಿಯ ಕಾಲದಲ್ಲೇ ಸಾಮಾಜಿಕವಾಗಿ ಕ್ರಿಯಾಶೀಲವಾದ ಮಹಾಂತೇಶ್, ಮಹಾನ್ ವ್ಯಕ್ತಿಗಳ ಕುರಿತಾದ ಆಕರ್ಷಣೆ ಜೀವಂತವಾಗಿದೆ. ಭಗತ್‌ಸಿಂಗ್, ಚೆಗೆವಾರ, ಮಹಾಡ್ ಪ್ರಕರಣದ ನಾಯಕರು, ಇವರೆಲ್ಲರ ಬಗ್ಗೆ ಅವರು ಬಹಳ ಹೃದಯ ಸ್ಪರ್ಷಿಯಾಗಿ ಬರೆದಿದ್ದಾರೆ.
ಇನ್ನು ತಮ್ಮ ಕಾರ್ಯಕ್ಷೇತ್ರವಾದ ಕಾರ್ಮಿಕ ಅಂದೋಲನಗಳ ಬಗ್ಗೆ ಬರೆಯುವಾಗ ಅವರು ಸಮರ್ಥವಾದ ವಿಶ್ಲೇಷಣೆಯನ್ನು ಮಂಡಿಸುತ್ತಾರೆ. ಹೊರಗುತ್ತಿಗೆ, ಹೊಸ ಪಿಂಚಣಿ ನೀತಿ, ಕಾರ್ಮಿಕ ಕಾನೂನು ತಿದ್ದುಪಡಿ ಇವೆಲ್ಲಾ ದುಡಿಯುವ ವರ್ಗದ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಬರೆದ ಪರಿಣಾಮಕಾರಿ ಲೇಖನಗಳು.
ವೈಯಕ್ತಿಕ ಅನುಭವಗಳ ಮೂಲಕ ಹೆಚ್ಚಿನದನ್ನು ಹೇಳಬಲ್ಲ ಸಾಮರ್ಥ್ಯ ಈ ಲೇಖಕರಿಗಿದೆ. ತಮ್ಮ ಅಗಲಿದ ನಾಯಕ, ಸಂಗಾತಿ, ಕಾರ್ಮಿಕ ಧುರೀಣ ಪ್ರಸನ್ನರಿಗೆ ಶ್ರದ್ಧಾಂಜಲಿಯಂತೆ ಬರೆದ ಲೇಖನ ಇದಕ್ಕೆ ಸಾಕ್ಷಿ. ನಾಯಕರಲ್ಲಿ ತಾವು ಇಷ್ಟಪಡುವ ಗುಣ, ಅವರ ಕುರಿತಾದ ಕಾಳಜಿ ಎಲ್ಲವೂ ಇಲ್ಲಿ ದಾಖಲಾಗಿವೆ.
ಅಸ್ಪಶ್ಯತೆಯ ಕಾರಣದಿಂದ ತಾವು ಶಾಲೆಯಿಂದ ಹೊರದೂಡಿಸಿಕೊಂಡ ಘಟನೆಯನ್ನು ಆತ್ಮಮರುಕವಿಲ್ಲದೇ, ಗುಪ್ತ ಸ್ವಪ್ರಶಂಸೆಯಿಲ್ಲದೇ ಹೇಳಿಕೊಂಡಿದ್ದಾರೆ. ನಿರ್ವಿಕಾರವಾಗಿದ್ದೂ, ನನ್ನ ಮನಸ್ಸನ್ನು ತುಂಬಾ ತಟ್ಟಿದ ಈ ಬರಹದಿಂದ ಲೇಖಕರ ಕುರಿತಾದ ನನ್ನ ಗೌರವ ಹೆಚ್ಚಾಗಿದೆ.
-ಡಾ. ಬಿ.ಆರ್.ಮಂಜುನಾಥ್

Share

Subscribe to our emails
Subscribe to our mailing list for insider news, product launches, and more.