Dr. D. N. Shankara Batt
ನುಡಿಯರಿಮೆಯ ಪದಗಳಿಗೆ ಕನ್ನಡದ್ದೇ ಪದಗಳು
ನುಡಿಯರಿಮೆಯ ಪದಗಳಿಗೆ ಕನ್ನಡದ್ದೇ ಪದಗಳು
Publisher - ಡಿ. ಎನ್. ಶಂಕರ ಬಟ್
- Free Shipping Above ₹250
- Cash on Delivery (COD) Available
Pages -
Type -
ಕನ್ನಡದಲ್ಲಿ ನುಡಿಯರಿಮೆಯ ಕುರಿತಾಗಿ ಬಂದಿರುವ ಬರಹಗಳು ತುಂಬಾ ಕಡಿಮೆ. ಇವುಗಳಲ್ಲಿ ಹೆಚ್ಚಿನವೂ ಇಂಗ್ಲೀಶ್ ಪದಗಳಿಗೆ ಬದಲಿಗೆ ಸಂಸ್ಕ್ರುತ ಪದಗಳನ್ನು ಇಲ್ಲವೇ ಸಂಸ್ಕ್ರುತ ಪದ ಮತ್ತು ಒಟ್ಟು(ಪ್ರತ್ಯಯ)ಗಳನ್ನು ಬಳಸಿ ಹೊಸದಾಗಿ ಉಂಟುಮಾಡಿದ ಪದಗಳನ್ನು ಬಳಸುತ್ತವೆ. ಇಂತಹ ಬರಹಗಳನ್ನು ಓದಿ ತಿಳಿದುಕೊಳ್ಳುವುದು ಕಶ್ಟ. ಇದಲ್ಲದೆ, ಇಂತಹ ಬರಹಗಳನ್ನು ಕನ್ನಡದಲ್ಲಿ ಹೊಸದಾಗಿ ಬರೆಯಬೇಕೆಂದಿರುವವರಿಗೆ ತಮಗೆ ಬೇಕಾಗುವ ಹೊಸಪದಗಳನ್ನು ಉಂಟುಮಾಡಲು ಸಂಸ್ಕ್ರುತದ ತಿಳಿವು ಬೇಕಾಗುತ್ತದೆ.
ಇಂತಹ ಬರಹಗಳಿಗೆ ಬೇಕಾಗುವ ಹೊಸಪದಗಳನ್ನು ಕನ್ನಡದಲ್ಲೇ ಉಂಟುಮಾಡಲು ಬರುತ್ತದೆ ಎಂಬುದನ್ನು ಈ ಪದನೆರಕೆ ತೋರಿಸಿಕೊಡುತ್ತದೆ, ಮತ್ತು ಅಂತಹ ಹಲವಾರು ಪದಗಳನ್ನು ಕಟ್ಟಿಕೊಡುತ್ತದೆ. ಇದಲ್ಲದೆ, ಈ ಪದಗಳ ಕುರಿತಾಗಿ ವಿವರಣೆಯನ್ನೂ ಉದಾಹರಣೆಗಳೊಂದಿಗೆ ಕೊಡುತ್ತದೆ.
Share
ಕನ್ನಡದ ತಿಳಿವನ್ನು ನಿರಂತರವಾಗಿ ಕಟ್ಟುತ್ತಿರುವ ಡಿ.ಎನ್. ಶಂಕರ ಬಟ್ ಅವರ ದುಡಿಮೆಗೆ ಶರಣು. ಈ ಹೊಸ ಪದಗಳಿಗೆ ಒಗ್ಗಲು ಕೆಲವು ಸಮಯ ಬೇಕಾಗಬಹುದು.ಕನ್ನಡ ನುಡಿಯರಿಗರು ಇದನ್ನು ಅಳವಡಿಸಿಕೊಂಡು ಮುನ್ನಡೆಯಲಿ.ಅಬಿನಂದನೆಗಳು
ನುಡಿಯರಿಮೆ ಎಂದ ಕೂಡಲೇ ಅದೊಂದು ಕಬ್ಬಿಣದ ಕಡಲೆಯಾಗಿ ಕಾಣುತ್ತದೆ. ನಮಗೆ ನಿಲುಕದು ಎಂದು ಒಂದು ಅನಿಸಿಕೆ ನನ್ನಲ್ಲಿತ್ತು ಆದರೆ ಈ ಹೊತ್ತಗೆ ನೆರವಿನಿಂದ ನುಡಿಯರಿಮೆ ಕುರಿತು ಇನ್ನು ಆಳವಾಗಿ ತಿಳಿದುಕೊಳ್ಳಲು ತುಂಬಾ ನೆರವಾಗಿದೆ, ಯಾಕೆಂದರೆ ಇಲ್ಲಿ ಇಂಗ್ಲಿಶ್ ನುಡಿಯರಿಮೆ ಪದಗಳಿಗೆ ಮಾತಿಗೆ ಹತ್ತಿರವಿರುವ ಬೇಗನೆ ತಿಳಿಯುವ ಕನ್ನಡದ್ದೇ ಪದಗಳು ನೀಡಲಾಗಿವೆ. ಕನ್ನಡದ್ದೇ ಪದಗಳು ಎಂದೆಂದಿಗು ಕೂಡಲೇ ತಿಳಿಯುತ್ತವೆ ಹಾಗು ಅದರ ನೆರವಿನಿಂದ ವಿಷಯವನ್ನು ಕೂಡ ಬೇಗ ಕಲಿಯಬಹುದು. ಇದರಿಂದ ಕನ್ನಡ ನುಡಿಯರಿಮೆಯಲ್ಲಿ ಹೆಚ್ಚೆಚ್ಚು ಕೆಲಸಗಳು ನಡೆಯಲು ಒಂದು ದಾರಿ ತೋರಿಸಿರುವ ಹೊತ್ತಗೆಯೆಂದು ನಾನು ನಂಬಿದ್ದೇನೆ.
Subscribe to our emails
Subscribe to our mailing list for insider news, product launches, and more.