Skip to product information
1 of 2

Gangavathi Pranesh

ನುಡಿ ಪಡಿ

ನುಡಿ ಪಡಿ

Publisher - ಸಾವಣ್ಣ ಪ್ರಕಾಶನ

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 148

Type - Paperback

ಗಂಗಾವತಿ ಬೀಚಿ ಎಂದೇ ಖ್ಯಾತರಾದ ಗೆಳೆಯ ಪ್ರಾಣೇಶ್ 'ನುಡಿ ಪಡಿ'ಯಲ್ಲಿ ಸತ್ಯಕ್ಕೇ ಹೆಚ್ಚು ಒತ್ತು ನೀಡಿರುವುದು ಕಟ್ಟೆಯ ಕಲ್ಲು ಕಟ್ಟೆಗೆ ಸೇರಿದಂತಾಗಿದೆ.

'ಮಾತೆಂಬುದು ಜ್ಯೋತಿರ್ಲಿಂಗ'' ಎಂದರು ಜಗಜ್ಯೋತಿ ಬಸವಣ್ಣನವರು. ಮಾತು ಜ್ಯೋತಿರ್ಲಿಂಗವಾಗಬೇಕಾದರೆ ಆಲೋಚನೆಗಳ ಹಣತೆಯಲ್ಲಿ ಅಧ್ಯಯನದ ತೈಲವನ್ನೆರೆದು ಸುಜ್ಞಾನದ ಬತ್ತಿಯನ್ನಿರಿಸಿ ಸುಬೋಧೆಯ ಕಿಡಿಯನ್ನು ತಾಗಿಸಿದರೆ ಮಾತ್ರ ಸಾಧ್ಯ.

ಪ್ರಾಣೇಶರ ಈ ಪುಸ್ತಕದಲ್ಲಿ ಹಲವಾರು ಪ್ರಖರ ವಿಷಯಗಳನ್ನು ಕುರಿತಾದ ಲೇಖನಗಳಿವೆ. ಇಂದಿನ ಜನಜೀವನದ 'ಅತಿ'ಗಳನ್ನು ಹಿಂದಿನ ಕಾಲಘಟ್ಟದ 'ಹಿತ'ಕ್ಕೆ ಹೋಲಿಸುವ ಪರಿಯು ಹಿಂದಿನ ಪೀಳಿಗೆಗೆ ಮುದವನ್ನೂ, ಇಂದಿನ ಪೀಳಿಗೆಗೆ ಎಚ್ಚರಿಕೆಯನ್ನೂ, ಮುಂದಿನ ಪೀಳಿಗೆಗೆ ಗತವೈಭವದ ಮೆಲುಕನ್ನೂ ನೀಡುವಲ್ಲಿ ಈ ಲೇಖನಗಳು ಸಫಲವಾಗಿವೆ.

“ನುಡಿ ಪಡಿ' ಪುಸ್ತಕದ ಹೆಸರೇ ಸೂಚಿಸುವಂತೆ ಇದು ನುಡಿಗಳ ಸೋಪಾನ. ಮಧ್ವರ ಬೋಧನೆಗಳಿಂದ ಹಿಡಿದು ಹೊರದೇಶದ ಆಚಾರ-ವಿಚಾರಗಳವರೆಗೆ ಹಬ್ಬಿರುವ ಈ ಸೋಪಾನದ ಮೆಟ್ಟಿಲುಗಳಲ್ಲಿ ಅನೇಕ ಬೋಧಪ್ರದ ವಿಷಯಗಳಿವೆ. ಹಳೆಯ ಚಿತ್ರಗೀತೆಗಳ ಸುಮಧುರ ಜಾಡಿನಲ್ಲಿ ದೊರಕುವ ಆನಂದದ ಪಲುಕುಗಳಿವೆ. ಪ್ರಾಣೇಶನೆಂಬ ಮಾಗಿದ ಮರವು ಬಿಟ್ಟಿರುವ ಈ ''ನುಡಿ ಪಡಿ'' ಎಂಬ ಫಲವು ರುಚಿಕರವಾಗಿದೆ, ಮೆಲ್ಲಲು ಯೋಗ್ಯವಾಗಿದೆ, ಚರ್ವಿತಚರ್ವಣಕ್ಕೆ ಗ್ರಾಸವಾಗಲು ಶಕ್ತವಾಗಿದೆ.

-ಎನ್. ರಾಮನಾಥ್
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)