Skip to product information
1 of 1

Dr. Haniyuru Chandregowda

ನೂರೊಂದು ಜನಪದ ಹಾಡುಗಬ್ಬಗಳು

ನೂರೊಂದು ಜನಪದ ಹಾಡುಗಬ್ಬಗಳು

Publisher -

Regular price Rs. 149.00
Regular price Rs. 149.00 Sale price Rs. 149.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ನೂರೊಂದು ಜನಪದ ಹಾಡುಗಬ್ಬಗಳು ಸಂಕಲನದ ಕೃತಿಯ ಸಂಗ್ರಾಹಕರಾದ ಡಾ.ಹನಿಯೂರು ಚಂದ್ರೇಗೌಡರು ನಿಜವಾಗಿ ಅಭಿನಂದನೀಯರು. 'ಹೃದಯತುಂಬಿ ಬಂದ ಹಾಡು ಕೇಳಿದವರ ಪಾಲಿಗೆ ಹೃದಯಸ್ಪರ್ಶಿಯಾಗಿರುತ್ತದೆ.' 'ಅನುಭವದ ಮಾತು ಅನುಭವ ಮಾಡಿಸುತ್ತದೆ' ಎಂಬ ವಾಸ್ತವ ವಿಚಾರವು ನಮ್ಮ ಜನಪದರ ಸೃಜನಶೀಲ ಸಾಹಿತ್ಯಕ್ಕೆ ನೂರಕ್ಕೆ ನೂರು ಒಪ್ಪುವಂತೆ 'ನೂರೊಂದು ಜನಪದ ಹಾಡುಗಬ್ಬಗಳು' ಸಂಕಲನಕ್ಕೂ ಒಪ್ಪುತ್ತದೆ, ಒಪ್ಪ ಕೊಡುತ್ತದೆ. ಹಾಗೆಯೇ “ನವನವೋನ್ವೇಷಶಾಲಿನಿ ಪ್ರತಿಭಾಮತಾ' ಎಂಬ ಕಾವ್ಯಮೀಮಾಂಸಕರ ಸೂತ್ರದಂತೆ ಈ ಸಂಕಲನದ ಪ್ರತಿಯೊಂದು ಹಾಡುಗಬ್ಬಗಳು ಚಿರನೂತನವಾಗಿವೆ. ಹಾಡಿದಷ್ಟು ಹೊಸತು ಹೊಸತಾಗಿ ಹೊಳೆಯುತ್ತದೆ. “ಯಾವ ಮಹಾಕವಿಗಳಿಗೂ, ಪ್ರತಿಭಾವಂತ ಶಿಷ್ಟಕವಿಗಳಿಗೂ ಕಡಿಮೆ ಅಲ್ಲದ ರೀತಿಯಲ್ಲಿ ನಮ್ಮ ಜನಪದರು ಆಶುಕವಿಗಳಾಗಿ ಹಾಡುಗಳನ್ನು ಕಟ್ಟಬಲ್ಲರು; ತಾವು ಕಟ್ಟಿದ್ದನ್ನು ಮನಮುಟ್ಟುವಂತೆ ಹಾಡಬಲ್ಲರು; ಹಾಡಿದ್ದನ್ನು ಪರಂಪರಾಗತ ಧ್ವನಿಭಂಡಾರಕ್ಕೆ ನೀಡಿ ಮುಂದುವರಿಯುವಂತೆ ಮಾಡಿ ತಾವು ಮಾತ್ರ ಅನಾಮಧೇಯರಾಗಿ ಉಳಿಯಬಲ್ಲರು' ಎಂಬ ಹಿರಿಮೆಗೆ ಇಲ್ಲಿಯ ಹಾಡುಗಬ್ಬಗಳು ಉತ್ತಮ ಉದಾಹರಣೆಗಳಾಗಿವೆ. ನಮ್ಮ ಜನಪದ ಹಾಡುಗಳಿಗೆ ಬೇರೆ ಎಲ್ಲ ವಿಶೇಷಣ(ಜನಪದ ಕಾವ್ಯ, ಜನಪದ ಗೀತೆ, ಹಳ್ಳಿಯ ಹಾಡು ಇತ್ಯಾದಿ)ಗಳಿಗಿಂತ ಕವಿರಾಜಮಾರ್ಗಕಾರ ಅಂದು ಉಲ್ಲೇಖಿಸಿದ 'ಹಾಡುಗಬ್ಬ' ಎಂಬ ಸಮಸ್ತಪದವನ್ನು ಶೀರ್ಷಿಕೆಯಾಗಿ ನೀಡಿರುವುದು ತುಂಬಾ ಔಚಿತ್ಯಪೂರ್ಣವಾದುದು. ನನ್ನ ತಿಳುವಳಿಕೆಯಂತೆ ಈ ಶೀರ್ಷಿಕೆಯನ್ನು ಈ ಸಂಕಲನಕಾರರೇ ಮೊತ್ತಮೊದಲನೆಯದಾಗಿ ಕನ್ನಡ ಸಾಹಿತ್ಯ ಟಂಕಸಾಲೆಯಿಂದ ತೆಗೆದು ಚಲಾವಣೆಗೆ ತಂದಿರುತ್ತಾರೆ. ನಮ್ಮ ಜನಪ್ರಿಯ ನೂರೊಂದು ಜನಪದ ಗೀತಕುಸುಮಗಳ 'ಈ ಹೊಸಬಾಸಿಗವನ್ನು' ಕನ್ನಡಿಗರು ಮುಡಿದು ಸಾರ್ಥಕಗೊಳಿಸಲಿ ಎಂದು ಹಾರೈಸುತ್ತಾ, ಜೊತೆಜೊತೆಗೆ ಇಂತಹ ಮೌಲಿಕ ಜನಪದ ಗಬ್ಬಗಳ ಸಂಗ್ರಹವನ್ನು ಸಾರಸ್ವತಲೋಕಕ್ಕೆ ನೀಡುತ್ತಿರುವ ಆತ್ಮೀಯ ಮಿತ್ರರಾದ ಡಾ. ಹನಿಯೂರು ಚಂದ್ರೇಗೌಡರನ್ನು ವಿಶೇಷವಾಗಿಯೂ ಹೃನ್ಮನಪೂರ್ಣವಾಗಿಯೂ ಅಭಿನಂದಿಸುತ್ತೇನೆ...

-ಡಾ. ಜಾನಪದ ಬಾಲಾಜಿ ಎಸ್. (ಡಾ. ಎಸ್. ಬಾಲಾಜಿ)
ರಾಜ್ಯಾಧ್ಯಕ್ಷರು ಕನ್ನಡ ಜಾನಪದ ಪರಿಷತ್‌
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)