Shivakumara Mavali
ನೊ ಮೋರ್ ಇಂಗ್ಲಿಷ್
ನೊ ಮೋರ್ ಇಂಗ್ಲಿಷ್
Publisher - ಸಾವಣ್ಣ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 224
Type - Paperback
ಕಾಲೇಜಿನಿಂದ ನೇರವಾಗಿ ಕಾರ್ಪೊರೇಟ್ ಕೆಲಸಕ್ಕೆ ಸೇರಿದ ಆರಂಭದಲ್ಲಿ Friday Fun ಎಂಬ ಕಾರ್ಯಕ್ರಮದಲ್ಲಿ 'He is my intimate friend' ಎಂದು ಗೆಳೆಯನೊಬ್ಬನನ್ನು ಪರಿಚಯಿಸಿಕೊಟ್ಟೆ. ಅಲ್ಲಿದ್ದವರಲ್ಲಿ ಬಹುತೇಕರು ಮುಸಿಮುಸಿ ನಕ್ಕರು. ಈ ವಾಕ್ಯದಲ್ಲಿ ಏನು ತಪ್ಪಿರಬಹುದು ಎಂದು, ಇದನ್ನು ಅನೇಕ ಕಡೆ ಬಳಸುವುದನ್ನು ಕೇಳಿದ್ದರಿಂದಲೇ ಹಾಗೆ ಬಳಸಿದ್ದೆನಲ್ಲ, ಮತ್ಯಾಕೆ ಅವರೆಲ್ಲ ನಕ್ಕಿರಬಹುದು ಎಂದು ಗೊಂದಲಕ್ಕೊಳಗಾದೆ. Intimate ಎಂಬ ಪದಕ್ಕೆ Very personal or private Sexual relations ಎಂಬ ಅರ್ಥವೂ ಇದೆ ಎಂಬುದು ಎಷ್ಟೋ ದಿನಗಳ ನಂತರ ತಿಳಿಯಿತು. ಅಂದಿನಿಂದ ಪ್ರಾರಂಭವಾದ ಇಂಗ್ಲಿಷ್ ಭಾಷೆಯ ಮೇಲಿನ ಕುತೂಹಲ ಉಪನ್ಯಾಸಕನಾದ ನಂತರ ಹೆಚ್ಚಾಯಿತು. ಚಂದ್ರನ ಮೇಲೆ ಕಾಲಿಟ್ಟಾಗ 'ನೀಲ್ ಆರ್ಮ್ ಸ್ಟ್ರಾಂಗ್' ಹೇಳಿದ ವಾಕ್ಯದಲ್ಲೂ ತಪ್ಪಿತ್ತು ಎಂದು ತಿಳಿದ ಮೇಲೆ ನನ್ನದೇನು ದೊಡ್ಡ ತಪ್ಪಲ್ಲ ಬಿಡು ಎಂದುಕೊಳ್ಳುತ್ತಾ, Cut ಯನ್ನು 'ಕಟ್' ಎನ್ನುವುದಾದರೆ 'Put' ಯನ್ನು 'ಪಟ್' ಎನ್ನುವುದಿಲ್ಲ ಏಕೆ ಎಂಬ ತರಲೆಯೊಂದಿಗೆ, ಇಂಗ್ಲಿಷ್ ಭಾಷೆಯಲ್ಲಿರುವ ವಿಶೇಷತೆಗಳು, ಕೆಲವು ಆತಾರ್ಕಿಕ ಗ್ರಾಮರ್ ಅಂಶಗಳು, ಪದಗಳು ಹುಟ್ಟಿದ ಪರಿ, ಇಂಡಿಯನ್ ಇಂಗ್ಲಿಷ್ ನಲ್ಲಿ ನುಸುಳುವ ತಪ್ಪುಗಳು ಹೀಗೆ ಅನೇಕ ಸಂಗತಿಗಳ ಬಗ್ಗೆ ಅಧ್ಯಯನ ನಡೆಸುತ್ತಾ, ಜಗತ್ತಿನಲ್ಲಿರುವ ಆರು ಸಾವಿರಕ್ಕೂ ಹೆಚ್ಚಿನ ಭಾಷೆಗಳಲ್ಲಿ ಇದೊಂದು ಭಾಷೆ ಈ ಪರಿ ಮನ್ನಣೆ ಪಡೆದಿದೆ ಎಂದಾದರೆ ಅದಕ್ಕೇನು ಕಾರಣ ಎಂದು ಹುಡುಕುತ್ತಾ ಹೋದಾಗ ಈ ಪುಸ್ತಕದಲ್ಲಿರುವ ಅನೇಕ ಸಂಗತಿಗಳು ಎದುರಾದವು.
ಪೆನ್ನು, ಪೆನ್ಸಿಲ್, ನೋಟ್ ಬುಕ್ ಗಳನ್ನು ಮಾರುವ ಅಂಗಡಿಯ ಬೋರ್ಡ್ Stationary Shop ಎಂದು ಅನೇಕ ಕಡೆಗಳಲ್ಲಿ ಕಂಡಾಗ Stationery ಎಂದಾಗಬೇಕಿತ್ತಲ್ಲವೆ ಎಂದುಕೊಳ್ಳುತ್ತಿದ್ದೆ. ಆದರೆ ಆ ಬೋರ್ಡಿನಿಂದಾಗಿ ಅವನ ವ್ಯಾಪಾರ ಏನು ನಿಂತಿಲ್ಲವಲ್ಲ ಎಂದು ಅರಿವಾಗುವಾಗಲೇ, ಇಂಗ್ಲಿಷ್ ಸ್ವತಃ ಇಂಗ್ಲೆಂಡ್ ನಲ್ಲಿಯೇ Official Language ಅಲ್ಲ ಎಂಬ ವಿಷಯ ತಿಳಿಯಿತು. ಇಂಗ್ಲಿಷ್‌ನಲ್ಲಿ ಅತಿ ಹೆಚ್ಚು ಬಳಕೆಯಾಗುವ ಅಕ್ಷರವಾದ 'E' ಯನ್ನು ಒಮ್ಮೆಯೂ ಬಳಸದೆ 50 ಸಾವಿರ ಪದಗಳಿರುವ ಒಂದು ಕಾದಂಬರಿಯನ್ನು ಇಂಗ್ಲಿಷ್ ನಲ್ಲಿ ಬರೆಯಲಾಗಿದೆ ಎಂದು ತಿಳಿದಾಗ, I started to know more about English.
Now, I recommend you" Know More English"
-ಶಿವಕುಮಾರ ಮಾವಲಿ
Share
Subscribe to our emails
Subscribe to our mailing list for insider news, product launches, and more.