Skip to product information
1 of 2

Nagaraja Vastare

ನಿಯುಕ್ತಿ ಪುರಾಣ

ನಿಯುಕ್ತಿ ಪುರಾಣ

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 530.00
Regular price Rs. 530.00 Sale price Rs. 530.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 448

Type - Paperback

ಐತಿಹಾಸಿಕ ಕಥನವನ್ನು ಜನಪದೀಯ ನೆಲೆಯಲ್ಲಿ ವಿಕಸನಗೊಳಿಸುತ್ತ ಕಥನಕಾಲದ ಜೊತೆಗೆ ಆಯಾ ದೇಶಕಾಲದ ಚಿತ್ರಣವನ್ನು ತೆರೆದಿಡುವ ಕಾದಂಬರಿ ಈ 'ನಿಯುಕ್ತಿಪುರಾಣ', ಕತೆಯ ಮಟ್ಟಿಗೆ ಅಗಾಧ ಅಳತೆಯ ಕ್ಯಾನ್ವಾಸ್ ಹೊಂದಿರುವ ಇದು ಸುಲಭಕ್ಕೆ ಗ್ರಹಿಸಿ ಹಿಡಿದಿಡಲು ಆಗದಷ್ಟು ದೊಡ್ಡ ಕಥನ.

ಲಾವಣಿ, ಜನಪದ ಶಬ್ದ ಭಂಡಾರ, ಕಥನ ಕುತೂಹಲಕ್ಕಾಗಿ ಏರಿಳಿತದ ಅನುಸರಣೆಯ ತಂತ್ರಗಾರಿಕೆ. ಪಾತ್ರಗಳ ಕಟ್ಟಿಕೊಡುವ ಗಟ್ಟಿತನ, ವಿಸ್ತಾರವಾದರೂ ಕೈ ತಪ್ಪದ ಸಂವಹನ ಮತ್ತು ಸಂಪರ್ಕಗಳು, ಸುತ್ತು ಬಳಸಿದರೂ ಮರೆಯದೆ ಜತೆಗೊಯ್ಯುವ ಸಂದರ್ಭದ ಹಲವು ಆವರ್ತದಲ್ಲೂ ಹದತಪ್ಪದ ನಿರೂಪಣೆ ಪುರಾಣದ ವಿಷೇಷತೆಯಾದರೆ, ಹೊಸ ಓದುಗನಿಗೆ ಮತ್ತು ಜನಪದೀಯ ರುಚಿ ಗ್ರಹಿಸದವರಿಗೆ, ಗ್ರಂಥಸ್ಥ ಭಾಷೆಯನ್ನಷ್ಟೆ ಓದುವವರಿಗೆ 'ನಿಯುಕ್ತಿಪುರಾಣ' ಕೊಂಚ ಒಗರು ಕೂಡಾ. ಆದರೆ ಪಟ್ಟು ಬಿಡದೆ ಓದಿಗೆ ಬಿದ್ದರೆ ಪಳಗಿ ಬಿಡುವ ಬರಹದ ಶೈಲಿಗೆ ಗೊತ್ತಿಲ್ಲದೆ ಆಪ್ತವಾಗಿಸುವ ಹಿಡಿತ ಇಲ್ಲಿದೆ.

ಕನ್ನಡಕ್ಕೆ ತುರ್ತು ಅಗತ್ಯದ ಸಂದರ್ಭದಲ್ಲಿ ವಿಭಿನ್ನ ರೂಪದಲ್ಲಿ ಮೈದಳೆದಿರುವ ಈ ನಿಲುವಿನ ಕಾದಂಬರಿ ಕೊಡುತ್ತಿರುವ ಮಿತ್ರ ವಸ್ತಾರೆಯ ಮೂಸೆಯಿಂದ ಇನ್ನಿಷ್ಟು ವಿಭಿನ್ನ, ಹೊಸಹೊಸ ಕೃತಿಗಳು ಬರಲಿ ಎಂಬ ಹಾರೈಕೆಯೊಂದಿಗೆ,

-ಸಂತೋಷಕುಮಾರ ಮೆಹೆಂದಳೆ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)