Mahabala Seethalabhavi
Publisher - ಅಂಕಿತ ಪುಸ್ತಕ
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಮಹಾಬಲ ಅವರ ಸೂಕ್ತಿಗಳನ್ನು ಮೊದಲು ಓದಿದಾಗ ಅವರು ಸುಮಾರು ಎಂಬತ್ತು ವಯಸ್ಸಿನವರು ಅಂದು ಕೊಂಡಿದ್ದೆ. ಅಷ್ಟೊಂದು ಜೀವನಾನುಭವ ಅದರಲ್ಲಿ ಕಾಣಿಸುತ್ತಿತ್ತು. ಆಮೇಲೆ ಅವರು ಇಪ್ಪತ್ತನಾಲ್ಕರ ತರುಣ ಅನ್ನುವುದು ಗೊತ್ತಾಯಿತು. ಸೂಕ್ತಿಗಳ ಆಯ್ಕೆ, ವೈವಿಧ್ಯ, ವಿಶ್ಲೇಷಣೆ ಮತ್ತು ನಿರೂಪಣೆಯಲ್ಲಿ ಅವರು ಅಪ್ಪಟ ಹೊಸತನವನ್ನು ರೂಢಿಸಿಕೊಂಡವರು. ಜೀವನಕ್ಕೆ ಹತ್ತಿರವಾಗುವಂಥ ಸುಭಾಷಿತಗಳನ್ನು ಆರಿಸಿ, ಅದನ್ನು ನಮ್ಮ ದೈನಿಕದ ಸಂಗತಿಗಳ ಜೊತೆ ಅನ್ವಯಿಸಿ ಬರೆಯಬಲ್ಲ ಜಾಣ್ಮೆ ಅವರಿಗೆ ಸಿದ್ಧಿಸಿದೆ.
ನಾನು ಧಾರವಾಹಿಗಳಿಗೆ ಬರೆಯುವ ಹೊತ್ತಿಗೆ ನನಗೆ ಇಂಥ ಸುಭಾಷಿತಗಳು ಬೇಕಾಗುತ್ತವೆ. ಎಲ್ಲಿ ಹುಡುಕುವುದು ಎಂದುಕೊಳ್ಳುತ್ತಿರುವ ಹೊತ್ತಿಗೆ, ಮಹಾಬಲ ಸುಭಾಷಿತಗಳ ಸಂಕಲನ ಕೈಗಿಡುತ್ತಿದ್ದಾರೆ.
ಕನ್ನಡಪ್ರಭ ಪತ್ರಿಕೆಯಲ್ಲಿ ಮುಖ್ಯ ಸುದ್ದಿ ಓದಿದ ತಕ್ಷಣವೇ ಹೊರಳುವುದು ಸುಭಾಷಿತದ ಕಡೆಗೆ, ಅಂಥ ಆಸಕ್ತಿ ಹುಟ್ಟಿಸಿದ್ದು ಮಹಾಬಲ ಸೀತಾಳಭಾವಿ.
-ಟಿ. ಎನ್. ಸೀತಾರಾಮ್
