T. S. Ramananda
Publisher - ಅಭಿನವ ಪ್ರಕಾಶನ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ನಿಂಗಮ್ಮತ್ತೆ ಹಿಂದಿನ ಕಾಲದ ಹೆಣ್ಣಿನ ಕತೆ ಹೇಳುತ್ತಿದ್ದರು. ಭರಮಜ್ಜಿ ತವರುಮನೆಯ ಹೆಣ್ಣುಗಳು ಯುದ್ಧಕಾಲದಲ್ಲಿ ಶತ್ರುಸೈನಿಕರ ಅತ್ಯಾಚಾರಕ್ಕೆ ಒಳಗಾಗಿದ್ದನ್ನು ಹೇಳುತ್ತಾ ಅಷ್ಟು ಆಗಿನ ಹೆಣ್ಣುಹೆಂಗಸರಿಗೆ ಗಂಡಸರ ಬೆಂಬಲವಿರಲಿಲ್ಲ ಕಣೆ ತಾಯಿ, ಹೆಣ್ಣಿಗೆ ಸ್ವಂತಕ್ಕೆ ಯೋಚಣೆ ಮಾಡೋ ಅಷ್ಟು ಬುದ್ದೀನೂ ಇರಲಿಲ್ಲ ಕಣವ್ವ ಸತೃಗಳು ಊರು ನುಗ್ಗಿದರೆ ಗಂಡಸರೆಲ್ಲಾ ಕಾಡುಬೀಳಾರು, ಒಬ್ಬನಾದರೂ ಹೆಂಗಸರ ಗತಿಯೇನಾದೀತು ಅಂತಯೋಚಣೆ ಮಾಡತಿರಲಿಲ್ಲ. ನಮ್ಮ ಕಾಲಕ್ಕೆ ಸೋಲ್ಪಬದಲಾತು ಅನ್ನು, ಯುದ್ಧಗಳು ಕಡಿಮೆಯಾದ್ದು, ಹೊಲಮನೇಲಿ ದುಡಿಯೋ ಹೆಂಗಸರಿಗೆ ನಿಧಾನಕ್ಕೆ ವ್ಯವಾರ ಅರ್ಥಾಗಾಕೆ ಸುರುವಾತು. ಅತ್ತಾಗೆ ಪೂರ್ತಿ ಸ್ವತಂತ್ರಾನೂ ಇಲ್ಲ, ಇತ್ತಾಗಿ ಪೂರ್ತಿರಕ್ಷಣೇನೂ ಇಲ್ಲ, ಅಂತಾಕಾಲ. ಸತೃಗಳು ಬಂದು ಬಲಾತ್ಕಾರ ಮಾಡ್ತಿರಲಿಲ್ಲ ನಿಜ, ಮನೆಗಂಡಸರೇ ಅತ್ಯಾಚಾರ ಮಾಡೋರು ಕಣ್ತಾಯಿ. ಆಮೇಕೆ ಸರೋಜಮ್ಮನ ಕಾಲಕ್ಕೆ ಎಲ್ಡೂ ರೀತಿ ಉತ್ತಮ ಆತು. ಗಂಡಂದಿರುದುಡಿದ ದುಡ್ಡನ್ನೆಲ್ಲಾ ಹೆಂಡತೀರಕ್ಕೆ ಯಾಗೆ ತಂದಿಕ್ಕೊರು, ಆದರೆ ಗಂಡಸರರೀತಿನೀತಿಪ್ರಶ್ನೆ ಮಾಡಾಂಗಿರಲಿಲ್ಲ. ಮುಂದಿನ ಕಾಲದ ಹೆಣ್ಣುಹುಡಿಗೇರು ಸಾಲೀಗೆ ಹೋಗಿಕಲ್ತಿರೋದರಿಂದ ಆಗಹೆಂಗಿರತೈತೋ ಆ ಸಿದ್ದೇಶ್ವರಸ್ವಾಮೀನೇ ಬಲ್ಲ. ನೋಡು ನೋಡ್ತಿದ್ದಂಗೆ ಹೆಣ್ಣಿನ ಜೀವನಏಟು ಬದಲಾಗಿಹೋತು ಎಂದು ಅಚ್ಚರಿಪಡುವರು ನಿಂಗಮ್ಮತ್ತೆ.
