Vidhyabhushana
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
ವಿದ್ಯಾಭೂಷಣರೆಂದರೆ ದಾಸರಪದಗಳ ಗಾಯಕರಾಗಿ ಬಹುತೇಕರಿಗೆ ಪರಿಚಿತರು. ಕುಕ್ಕೆ ಸುಬ್ರಹ್ಮಣ್ಯ ಮಠದ ಸ್ವಾಮಿಗಳಾಗಿ ಹದಿನಾರನೇ ವಯಸ್ಸಿನಲ್ಲಿ ಒಲ್ಲದ ಮನಸ್ಸಿನಿಂದ ಸನ್ಯಾಸ ಸ್ವೀಕರಿಸಿದರೂ ಆ ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದು ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಲೋಕದ ರೂವಾರಿಯಾಗಿ ಬೆಳೆದ ಪರಿಯೇ ಅನನ್ಯ.
ಮನುಷ್ಯ ಸಹಜ ಆಕಾಂಕ್ಷೆಗಳಿಗೆ ಕಠೋರಪ್ರಾಯವಾಗಿರುವ ಬಾಲಸನ್ಯಾಸದ ಪದ್ಧತಿಯನ್ನು ಅಂತ್ಯಗೊಳಿಸಬೇಕಾದ ಕಾಲವಿದು. ಪೀಠದಲ್ಲಿದ್ದಾಗ, ಅದನ್ನು ತೊರೆಯುವ ಸಂದರ್ಭದಲ್ಲಿ ಅನುಭವಿಸಿದ ಮಾನಸಿಕ ತುಮುಲಗಳನ್ನು ಮುಕ್ತವಾಗಿ ಹಂಚಿಕೊಂಡಿರುವ ಶ್ರೀಯುತರು ನಮ್ಮ ಗೌರವಕ್ಕೆ ಪಾತ್ರರಾಗುತ್ತಾರೆ.
ಧರ್ಮಕರ್ಮಗಳ ಜಿಜ್ಞಾಸೆ ಮಾಡುವ ಪ್ರತಿಯೊಬ್ಬರೂ ಓದಲೇ ಬೇಕಾದ ಜೀವನ ಕಥನವಿದು.
