Sampatooru Vishwanath
ನೀತಿಗೊಂದು ಕಥೆ
ನೀತಿಗೊಂದು ಕಥೆ
Publisher - ಸಪ್ನ ಬುಕ್ ಹೌಸ್
- Free Shipping Above ₹300
- Cash on Delivery (COD) Available
Pages - 148
Type - Paperback
Couldn't load pickup availability
ಮಕ್ಕಳ ಕಲಿಕೆಯಲ್ಲಿ ಕಥೆಯ ಪಾತ್ರ ದೊಡ್ಡದು. ನೀತಿಯನ್ನು ನೇರವಾಗಿ ಹೇಳದೆ, ಸ್ವಾರಸ್ಯವೆನಿಸುವ ಘಟನೆ, ಅಥವಾ ಕಾಲ್ಪನಿಕ ಕಥೆಯ ಮೂಲಕ ಹೇಳುವುದು ಪರಿಣಾಮಕಾರಿ ವಿಧಾನ, ನೂರಾರು ವರ್ಷಗಳಿಂದ ಪ್ರಚಲಿತವಾಗಿರುವ ಈ 'ಕಥೆಯಿಂದ ಪಾಠ' ನಿಧಾನವಾಗಿ ಕಾಣೆಯಾಗುತ್ತಿದೆ.
ಈ ಕೊರತೆಯು ಈಗ ಕಾಳಜಿಯಾಗಿದೆ. ಮಕ್ಕಳಿಗೆ ಹೇಳಲು ಯೋಗ್ಯವಾದ 82 ಕಥೆಗಳ ಸಂಗ್ರಹವೇ ಸಂಪಟೂರು ವಿಶ್ವನಾಥ 'ನೀತಿಗೊಂದು ಕಥೆ,' ಶೀರ್ಷಿಕೆಯೇ ಹೇಳುವಂತೆ ಸಾರ್ಥಕ ಜೀವಿಗಳ ಬದುಕು ಮತ್ತು ದೇಶ ವಿದೇಶದ ಜಾನಪದದಿಂದ ಆರಿಸಿರುವ ಈ ಕಥೆಗಳು ಮಕ್ಕಳಿಗೆ ರುಚಿಸುವುದರಲ್ಲಿ ಸಂದೇಹವೇ ಇಲ್ಲ. ಇಲ್ಲಿರುವ 82 ಕಥೆಗಳಲ್ಲಿ ಪ್ರತಿಯೊಂದೂ ತಂದೆ ತಾಯಿ ಮತ್ತು ಶಿಕ್ಷಕರು ಪಾಠಕ್ಕೆ ಪೂರಕ ವಸ್ತುವನ್ನಾಗಿ ಬಳಸುವ ಅರ್ಹತೆಯನ್ನು ಪಡೆದಿವೆ.
'ನೀತಿಗೊಂದು ಕಥೆಯನ್ನು ಬರೆದಿರುವ ಸಂಪಟೂರು ವಿಶ್ವನಾಥ್ ಕಳೆದ 46 ವರ್ಷಗಳಿಂದ 90 ಪುಸ್ತಕಗಳನ್ನೂ, 3000ಕ್ಕೂ ಮಿಕ್ಕಿ ಲೇಖನಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದು ಪ್ರಕಟಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕೆಡಮಿ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಹಾಸ್ಯಬ್ರಹ್ಮ ಬೀಚಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ವಿಭೂಷಣ ಪ್ರಶಸ್ತಿ, ಸ್ನೇಹ ಸೇತು ಪ್ರಶಸ್ತಿ, ಸಪ್ನ ರಾಜ್ಯೋತ್ಸವ ಪ್ರಶಸ್ತಿ, ಮುಂತಾದವನ್ನು ಮುಡಿಗೇರಿಸಿಕೊಂಡಿರುವ ವಿಶ್ವನಾಥ್‌ರ 'ನೀತಿಗೊಂದು ಕಥೆ' ಸಪ್ನ ಬುಕ್ ಹೌಸ್ ಪ್ರಕಟಿಸುತ್ತಿರುವ ಲೇಖಕರ 15ನೆಯ ಕೃತಿ.
ಕನ್ನಡ ಮಕ್ಕಳ ಸಾಹಿತ್ಯ ಪ್ರಿಯರೆಲ್ಲರೂ ಕೊಂಡು ಓದಬೇಕಾದ ಕೃತಿ ಇದು.
Share

Subscribe to our emails
Subscribe to our mailing list for insider news, product launches, and more.