Skip to product information
1 of 1

M. S. Puttana

ನೀತಿ ಚಿಂತಾಮಣಿ

ನೀತಿ ಚಿಂತಾಮಣಿ

Publisher - ವಸಂತ ಪ್ರಕಾಶನ

Regular price Rs. 95.00
Regular price Rs. 95.00 Sale price Rs. 95.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಎಳೆಯ ಮಕ್ಕಳದು ಮುಗ್ಧ ಮನಸ್ಸು, ಪೋಷಕರ, ಸಮಾಜದ ಪ್ರಭಾವಕ್ಕೆ ಒಳಗಾಗುವವರೆಗೂ ಅವರ ಮನಸ್ಸು ಒಳಿತು ಕೆಡುಕು, ಪ್ರೀತಿ ದ್ವೇಷ, ನೋವು ನಲಿವು, ನೀತಿ ಅನೀತಿ ಮುಂತಾದವುಗಳಲ್ಲಿ ವ್ಯತ್ಯಾಸ ಕಾಣದೆ ಪರಿಶುಭ್ರವಾಗಿರುತ್ತದೆ. ಹೀಗೆ ಪರಿಶುಭ್ರವಾಗಿರುವಾಗ ಜೀವನದ ಉನ್ನತ ಮೌಲ್ಯಗಳನ್ನು ಮನಗಾಣಿಸಿಕೊಡಬಲ್ಲ ಕತೆಗಳನ್ನು ಹೇಳಿದರೆ ಆ ಕತೆಗಳ ಒಟ್ಟು ಆಶಯ ಅವರ ಮನಸ್ಸಿನಲ್ಲಿ ಸ್ಥಿರವಾಗಿ ಬೇರೂರುತ್ತದೆ. ಹೀಗೆ ಬೇರೂರುವುದರಿಂದ ಅವರು ಮೌಲ್ಯಗಳನ್ನು ಕಡೆಗಣಿಸದೆ ಸನ್ಮಾರ್ಗದಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಮಕ್ಕಳಿಗೆ ಕಥಾರೂಪದಲ್ಲಿ ಮೌಲ್ಯಗಳನ್ನು ತಿಳಿಸಿಕೊಡುವ, ನೀತಿಯನ್ನು ಬೋಧಿಸುವ ಕೆಲವೇ ಕೃತಿಗಳಲ್ಲಿ 'ನೀತಿಚಿಂತಾಮಣಿ'ಯೂ ಒಂದು. ಇದನ್ನು ಬರೆದವರು ಎಂ.ಎಸ್‌. ಪುಟ್ಟಣ್ಣನವರು (೧೮೫೪-೧೯೩೦). ಅವರು ಆಧುನಿಕ ಕನ್ನಡ ಸಾಹಿತ್ಯದ ರೂವಾರಿಗಳಲ್ಲಿ ಒಬ್ಬರು. ಸುಮಾರು ೧೨೫ ವರ್ಷಗಳಷ್ಟು ಹಿಂದೆ ಅವರು ಮಕ್ಕಳಿಗೆಂದೇ ಪುರಾಣೇತಿಹಾಸಗಳ ಕತೆಗಳನ್ನು ಪುನರಚಿಸಿ ಸಿದ್ಧಪಡಿಸಿದ ಅಮೂಲ್ಯ ಕೃತಿಯೇ 'ನೀತಿಚಿಂತಾಮಣಿ' (೧೮೮೪). ನಮಗೆ ತಿಳಿದುಬಂದಿರುವಂತೆ ಈ ಪುಸ್ತಕ ಇದುವರೆಗೆ ಸುಮಾರು ಮೂವತ್ತಮೂರು ಮುದ್ರಣಗಳನ್ನು ಕಂಡಿದೆಯೆನ್ನುವದೇ ಇದರ ಜನಪ್ರಿಯತೆಗೆ ಸಾಕ್ಷಿ. ೧೬೦ಕ್ಕೂ ಹೆಚ್ಚು ಕತೆಗಳಿರುವ ಈ ಪುಸ್ತಕದ ಭಾಷೆ ಮತ್ತು ಶೈಲಿ ಇಂದು ಸ್ವಲ್ಪಮಟ್ಟಿಗೆ ಹಳತೆನ್ನಿಸುವುದು ಸಹಜ. ಆದ್ದರಿಂದ ಈ ಪುಸ್ತಕದ ಭಾಷೆಯನ್ನು ಇವತ್ತಿನ ಕನ್ನಡಕ್ಕೆ ತಕ್ಕಂತೆ ಪರಿವರ್ತಿಸಿ ಪರಿಷ್ಕರಿಸಬೇಕೆಂದು ನಮ್ಮ ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟರು. ಈಗ ನಮ್ಮ ಕೋರಿಕೆಯಂತೆ ಪ್ರಸಿದ್ಧ ಕತೆಗಾರ ಎಸ್ ದಿವಾಕರ್‌ ಈ ಪುಸ್ತಕವನ್ನು ಸೊಗಸಾಗಿ ಪರಿಷ್ಕರಿಸಿದ್ದಾರೆ. ಕತೆ ಎಂದರೆ ಕುತೂಹಲ ತಾಳುವ ಮಕ್ಕಳಿಗೂ ಅವರಿಗೆ ಕತೆ ಹೇಳುವ ಪೋಷಕರಿಗೂ ಸದಾ ಪ್ರಿಯವಾಗಬಲ್ಲ ಏಕೈಕ ಕೃತಿ ಈ' ನೀತಿಚಿಂತಾಮಣಿ'.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)