Skip to product information
1 of 1

Dr. N. Mogasale

ನೀರಿನೊಳಗಿನ ಮಂಜು

ನೀರಿನೊಳಗಿನ ಮಂಜು

Publisher - ಅಂಕಿತ ಪುಸ್ತಕ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

'ನೀರಿನೊಳಗಿನ ಮಂಜು' ಕಾದಂಬರಿಯ ವಿಶೇಷ ಇರುವುದು ಅದರ ಮದ್ದಿನ ಗುಣದಲ್ಲಿ, ಕೇಡು ಮಾಡುವ ಮದ್ದೂ ಉಂಟಷ್ಟೇ. ಇಲ್ಲಿನ ಮದ್ದು ವ್ಯಕ್ತಿ ಮತ್ತು ಸಮಷ್ಟಿಯ ಆರೋಗ್ಯಕ್ಕೆ ಹಿತಕರವಾದುದು. ಗೊಂದಲಕ್ಕೊಳಗಾದ ಮನಸ್ಸನ್ನು ತಿಳಿಯಾಗಿಸುವ ಸಾಧ್ಯತೆಗಳ ಕುರಿತು ಚರ್ಚಿಸುವ ಕಾದಂಬರಿ, ಸಮಷ್ಟಿಯೊಂದಿಗೆ ಹೆಣೆದುಕೊಳ್ಳುತ್ತಿರುವ ಕೇಡಿನ ಸ್ವರೂಪದ ಬಗ್ಗೆಯೂ ಗಮನಸೆಳೆಯುತ್ತದೆ. 'ನೀರಿನೊಳಗಿನ ಮಂಜು' ಎನ್ನುವುದು ಅಂತರಂಗದ ಜೊತೆಗೆ ಸಮಾಜದ ಒಳಸುಳಿಗಳನ್ನೂ ಅರ್ಥ ಮಾಡಿಕೊಳ್ಳಲು ಒದಗಿಬರುವ ರೂಪಕವಾಗಿದೆ. ಅಭಿಪ್ರಾಯಭೇದಗಳು ಉಂಟು ಮಾಡುತ್ತಿರುವ ಅಸಹನೆ-ದ್ವೇಷಭಾವನೆ ಹಾಗೂ ಅದನ್ನು ಎದುರಿಸಲು ಅಗತ್ಯವಾದ ನೈತಿಕ ಮಾರ್ಗವನ್ನು ಸೂಚಿಸುವ ಕಾದಂಬರಿ, ಲೈಂಗಿಕತೆಯ ಬಗ್ಗೆ ವಿದ್ಯಾವಂತರಲ್ಲೂ ಇರುವ ಮೂಢನಂಬಿಕೆ ಅವಜ್ಞೆಯನ್ನು ತಿಳಿಗೊಳಿಸುವ ಆಪ್ತ ಸಮಾಲೋಚನೆಯ ಕೆಲಸವನ್ನೂ ಮಾಡುತ್ತದೆ. ಪ್ರಬುದ್ಧತೆ, ಪ್ರಾಂಜಲ ಸ್ನೇಹದ ನಡುವೆಯೂ ಗಂಡಿನಲ್ಲಿ ಕಾಮದ ಭಾವನೆಗಳು ಉಂಟಾದಾಗ, ಅದನ್ನು ಹೆಣ್ಣು ಚಿತ್ತಸ್ವಾಸ್ಥ್ಯ ಕಳೆದುಕೊಳ್ಳದೆ ನಿಭಾಯಿಸುವ ಚಿತ್ರಣ ಆ ಪಾತ್ರದ ಬಗ್ಗೆಯಷ್ಟೇ ಅಲ್ಲ, ಅದನ್ನು ಚಿತ್ರಿಸಿರುವ ಕಾದಂಬರಿಕಾರರ ಬಗ್ಗೆಯೂ ಗೌರವ ಮೂಡಿಸುವಂತಿದೆ. “ನೀರಿನೊಳಗಿನ ಮಂಜು' ಕಥನದಲ್ಲಿನ ಮಥನದ ಕೇಂದ್ರದಲ್ಲಿ ಮೇಷ್ಟ್ರು ಹಾಗೂ ವೈದ್ಯರಿದ್ದಾರೆ. ಇಬ್ಬರದೂ ಸಮಾಜಕ್ಕೆ ಮದ್ದು ನೀಡುವ ಕೆಲಸ. ಈ ಮೇಷ್ಟ್ರು-ವೈದ್ಯರ ಜುಗಲಬಂದಿ ನಾ. ಮೊಗಸಾಲೆ ಅವರ ವ್ಯಕ್ತಿತ್ವದಲ್ಲೂ ಇದೆ. ವೃತ್ತಿಯಿಂದ ಅವರು ವೈದ್ಯರು, ಸಾಹಿತ್ಯ ಪರಿಚಾರಿಕೆಯಿಂದಾಗಿ ಮೇಷ್ಟ್ರು ಕನ್ನಡ ಕಟ್ಟುವ, ಕನ್ನಡದ ಮೂಲಕ ಸಮಾಜವನ್ನು ಕಟ್ಟುವ ಕೆಲಸದಲ್ಲಿ ನಿರತರು. ಕಾದಂಬರಿಕಾರರ ವ್ಯಕ್ತಿತ್ವದಲ್ಲಿನ ಮೇಷ್ಟ್ರು-ವೈದ್ಯರ ಹಿತವಾದ ಸಮೀಕರಣ ಕಾದಂಬರಿಯಲ್ಲೂ ಇದೆ. ಕನ್ನಡ ಕಾದಂಬರಿ ಪ್ರಕಾರ ತನ್ನ ಗತವೈಭವವನ್ನು ಪಡೆಯಲು ಹಂಬಲಿಸುತ್ತಿರುವ ಸಾಹಿತ್ಯಕ ಸಂಕ್ರಮಣದ ಸಂದರ್ಭದಲ್ಲಿ, ಬದುಕಿನ ಶೋಧನೆಗೆ ಕಾದಂಬರಿ ಪ್ರಕಾರವನ್ನೇ ಪ್ರಮುಖವಾಗಿ ಆರಿಸಿಕೊಂಡಿರುವ ಪ್ರಮುಖ ಕಾದಂಬರಿಕಾರರಲ್ಲಿ ಮೊಗಸಾಲೆಯವರೂ ಒಬ್ಬರು. ಅವರ ಕಾದಂಬರಿಗಳ ಬೃಹತ್ ಶ್ರೇಣಿಯಲ್ಲಿ, 'ನೀರಿನೊಳಗಿನ ಮಂಜು' ಕೃತಿ ಪುಟ್ಟದಾದರೂ ಮೋಹಕವಾದುದು.

-ರಘುನಾಥ ಚ.ಹ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)