Geeta Dodmane
ನೀಲಿ ಶಾಯಿಯ ಕಡಲು
ನೀಲಿ ಶಾಯಿಯ ಕಡಲು
Publisher - ವೀರಲೋಕ ಬುಕ್ಸ್
- Free Shipping Above ₹250
- Cash on Delivery (COD) Available
Pages - 96
Type - Paperback
ಶಿರಸಿ-ಸಿದ್ಧಾಪುರದಲ್ಲಿರುವ ದೊಡ್ಮನೆ ಗೀತಾ ಅವರ ಎರಡನೇ ಕವನ ಸಂಕಲನವಿದು. 2000ನೇ ಇಸವಿಯಲ್ಲಿ ಪ್ರಕಟವಾದ ಇವರ "ಬೇಂದ್ರೆ-ಅಡಿಗ ಕಾವ್ಯ ಪ್ರಶಸ್ತಿ" ಪಡೆದ "ಅಕ್ಷರ ಚೈತನ್ಯ" ಕೃತಿಯು ಪ್ರಕಟವಾದ ಮೇಲಿನ ಸುದೀರ್ಘ ಮೌನದ ನಂತರ, ಈಗ 2024ರಲ್ಲಿ ಈ ಸಂಕಲನವು ಪ್ರಕಟವಾಗುತ್ತಿರುವುದು ಗಮನಾರ್ಹ. ಇದು ಬರೆವಣಿಗೆ ಹಾಗೂ ಪ್ರಕಟಣೆಯ ಕುರಿತಾಗಿರುವ ಅವರ ಸ೦ಯಮವನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ಅವರು ಬರೆದ ಕವಿತೆಗಳ ಪೈಕಿ ಆರಿಸಿದ ಕೆಲವು ಈ ಸಂಕಲನದಲ್ಲಿದೆ.
ಕವಿತೆಯ ಮೂಲ ಶಕ್ತಿಯಾದ ಮೌನದ ಕುರಿತು ಧ್ಯಾನಿಸಿ ಅದಕ್ಕೆ ಮಾತಿನ ರೂಪ ಕೊಡುವ ಪ್ರಯತ್ನದ ಫಲವಾಗಿ ಗೀತಾ ಅವರ ಈ ಕವಿತೆಗಳಿವೆ. ಭವದ ಭಾವ ಹಾಗೂ ಅನುಭಾವಗಳ ನಡುವೆ ಅವರ ಕವಿತೆಗಳು ಜೀಕುತ್ತಿರುತ್ತವೆ. ಇಲ್ಲಿ "ಕವಿತೆಯೆನ್ನುವುದು ತನ್ನಷ್ಟಕ್ಕೆ ಆಡಿಕೊಳ್ಳುವ ಮಗುವಿದ್ದಂತೆ'' ಎನ್ನುವ ಕವಯಿತ್ರಿಯ ಅ೦ತರ೦ಗದ, ತನಗೆ ತಾನೇ ಹೇಳಿಕೊಳ್ಳುವಂತಿರುವ ಪಿಸುನುಡಿಗಳಿವೆ. ಅಮೂರ್ತ ಭಾವಗಳನ್ನು ತನ್ನ ತೆಕ್ಕೆಗೊಗ್ಗಿಸುವ ಪ್ರಯತ್ನವಿದೆ. ನಾದಾರ್ಥಗಳ ಸಾಮರಸ್ಯದಿ೦ದ ಹೊಮ್ಮುವ ಮೋಹನ ರಾಗದ ವೇಣು ವಿಲಾಸವೂ ಇಲ್ಲಿದೆ. ಈ ಎಲ್ಲ ಕವಿತೆಗಳ ಹಿಂದಿರುವುದು, ಸುಖದುಃಖಗಳಿಗೆ ಸ್ಪಂದಿಸಬಲ್ಲ ಒಂದು ಚಿಂತನಶೀಲವೂ ಸ೦ವೇದನಾ ಶೀಲವೂ ಆದ ಸೂಕ್ಷ್ಮ ಮನಸ್ಸು. ಇದೀಗ ಗೀತಾ ಅವರು ತಮ್ಮ ಕವಿತೆಗಳ ಹಾಯಿದೋಣಿಯನ್ನು ತೇಲಿಬಿಟ್ಟಿದ್ದಾರೆ. ಅದನ್ನೇರಿ, ತೆರೆಗಳ ಲೆಕ್ಕ ಮಾಡುತ್ತಾ ವಿಹರಿಸುವುದೀಗ ಕಾವ್ಯಾಸಕ್ತರಿಗೆ ಬಿಟ್ಟದ್ದು.
- ಸುಬ್ರಾಯ ಚೊಕ್ಕಾಡಿ
Share
Subscribe to our emails
Subscribe to our mailing list for insider news, product launches, and more.