1
/
of
1
Dadapeer Jyman
ನೀಲಕುರಿಂಜಿ
ನೀಲಕುರಿಂಜಿ
Publisher -
Regular price
Rs. 120.00
Regular price
Rs. 120.00
Sale price
Rs. 120.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available
Pages -
Type -
Couldn't load pickup availability
ವಿವಿಧ ಸಮುದಾಯಗಳಿಗೆ ಸೇರಿದ ಹೊಸ ತಲೆಮಾರಿನ ತಾರುಣ್ಯವು ಸೃಷ್ಟಿಸುತ್ತಿರುವ ಇಂದಿನ ಕನ್ನಡ ಸಾಹಿತ್ಯವು ಹೊಸ ಬೈಗಿನ ನವಿರು ಬಿಸಿಅನ ಬೆಳಗಿನಂತೆ ಗೋಚರಿಸುತ್ತಿದೆ. ಇದೀಗ, ಮುಕ್ತ ಛಂದಸ್ಸಿನ ಕಾಲ. ಒಣ ಬೌದ್ಧಿಕತೆ ಹುಟ್ಟು ಹಾಕುವ ಸಿದ್ಧಾಂತಗಳ ಭಾರ; ಕೃತಕ ತಾರ್ಕಿಕ ಅಂತ್ಯಗಳನ್ನು ಬಯಸುವ ಸಾಹಿತ್ಯದಿಂದ ನಿಧಾನಕ್ಕೆ ಕಳಚಿಕೊಳ್ಳುತ್ತಿರುವ ಕಾಲವೂ ಇದಾಗಿದೆ. ಹಾಗೆಂದು, ಬರಹಗಾರರಲ್ಲಿ ರಾಜಕೀಯ ನಂಬಿಕೆ-ಬದ್ಧತೆ, ಬದಲಾವಣೆಯ ಕನಸು ಕಾತರ, ಭವಿಷ್ಯದ ಕುರಿತು ಅಪಾರ ಭರವಸೆ ಕಾಣ್ಕೆಗಳೇನೂ ಬದುಕಿನಿಂದ ದೂರ ಸರಿವಿಲ್ಲ.
ದಾದಾಪೀರ್ ಜೈಮನ್ ಮತ್ತು ಅವರಂಥ ಒಬ್ಬಿಬ್ಬರು ಲೇಖಕರನ್ನು ಈ ಹೊಸ ಕಥನಮಾರ್ಗದ ಭರವಸೆಯ ಲೇಖಕರು ಎಂದು ನಾನು ತಿಳಿದಿದ್ದೇನೆ. ಕಥಾವಸ್ತು. ಒಟ್ಟಾರೆ ಕಟ್ಟೋಣದಲ್ಲಿ ಸಾಧಿಸುತ್ತಿರುವ ಪರಿಣತಿ, ಬದುಕಿನ ಕುರಿತು ರೂಢಿಸಿಕೊಳ್ಳುತ್ತಿರುವ ಹದವಾದ ದೃಷ್ಟಿಕೋನವನ್ನು ಆಯಾ ಕಥೆಗಳಲ್ಲಿ ಸಾಧಿಸುತ್ತಿರುವ ಕೊಂಚ ಮಾತ್ರದ ಪಕ್ವತೆಗಳು ಇಂತಹ ಮಾತುಗಳನ್ನು ಬರೆಯಲು ಪ್ರೇರೇಪಿಸುತ್ತಿವೆ. ಇಂಥ ಲೇಖಕರ ಈವರೆಗಿನ ಬೆರಳೆಣಿಕೆಯ ಕಥೆಗಳು ಕಥನಮಾರ್ಗ ಮುಂದೆ ಪಡೆದುಕೊಳ್ಳಬಹುದಾದ ನಡಿಗೆಯನ್ನೂ ಸೂಚಿಸುತ್ತಿರುವಂತಿದೆ. 'ನೀಲಕುರಿಂಜಿ' ಸಂಕಲನದಲ್ಲಿ ಕಥೆಗಳಲ್ಲಿ ವಸ್ತು ವಿಷಯ ವೈವಿಧ್ಯತೆ, ಸಂಯಮಪೂರ್ಣ ನಿರೂಪಣೆ, ತಾರ್ಕಿಕವಾಗಿಯಲ್ಲದೆ ಆ ಕ್ಷಣಕ್ಕಷ್ಟೇ ಮುಗಿದು ಓದುಗನಲ್ಲಿ ಬೆಳೆಯಬಹುದಾದ ಅಂತ್ಯಗಳು ತಟ್ಟನೆ ಗಮನ ಸೆಳೆಯುತ್ತವೆ. ಅವರ ಕಥೆಗಳಲ್ಲಿ ಭಾವತೀವ್ರತೆ ಇಣುಕಿದರೂ ವಾಸ್ತವ ಮಾರ್ಗದ ನಿರೂಪಣಿಗೆ ಹೆಚ್ಚು ಒತ್ತು. ಪಾತ್ರಗಳನ್ನು ಜತನದಿಂದ ಕಟ್ಟುವಾಗ ಪೂರ್ವಗ್ರಹಗಳಿಂದ ಮುಕ್ತವಾಗಿ ಅವನ್ನು ಮನುಷ್ಯ ಗೊಂಬೆಗಳು ಎಂಬಂತೆ ನೋಡುವುದು ಕೂಡ ಗಮನಾರ್ಹ ಅಂಶವೇ.
ಕನ್ನಡದ ಓದುಗರು ಈ ಹೊಸ ಲೇಖಕನ ಕಥಾ ಸಂಕಲನವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಲಿ. ಅದು ಬದಲಾಗುತ್ತಿರುವ ಕನ್ನಡ ಕಥಾಲೋಕಕ್ಕೆ ನಾವು ತೋರಿಸಬಹುದಾದ ಅರ್ಥಪೂರ್ಣ ಪ್ರತಿಕ್ರಿಯೆ.
-ಕೇಶವ ಮಳಗಿ

Share

Subscribe to our emails
Subscribe to our mailing list for insider news, product launches, and more.