B. R. Lakshman Rao
ನವೋನ್ಮೇಷ
ನವೋನ್ಮೇಷ
Publisher - ಅಂಕಿತ ಪುಸ್ತಕ
- Free Shipping Above ₹250
- Cash on Delivery (COD) Available
Pages - 140
Type - Paperback
ಕನ್ನಡದ ಮಹತ್ವದ ಕವಿಗಳಲ್ಲೊಬ್ಬರಾದ ಶ್ರೀ ಬಿ.ಆರ್. ಲಕ್ಷ್ಮಣರಾವ್ ಅವರ ಒಂಬತ್ತನೆಯ ಕವನ ಸಂಕಲನವಿದು. ನವನವೋನ್ಮೇಷ, ಹೊಸತು ಹೊಸತಾಗಿ ಅರಳುವುದು, ಹೊಸ ಹೊಳಹು, ಹೊಸ ಹೊಸ ಭಾವಗಳನ್ನು ಸಂತತವಾಗಿ ಕಾಣುವುದು. ಕಟ್ಟುವುದು, ಪ್ರತಿಭೆಯ ಮುಖ್ಯ ಲಕ್ಷಣವೆಂದು ಕಾವ್ಯಮೀಮಾಂಸಕರು ಗುರುತಿಸಿದ್ದಾರೆ. ಆರಂಭದಿಂದಲೂ ಅದು ಈ ಕವಿಯ ಕಾವ್ಯದ ಗುಣವಾಗಿದೆ. ಈ ನವನವೀನತೆಯೇ ಅವರಿಗೆ ಪ್ರಸಿದ್ದಿಯನ್ನು ತಂದುಕೊಟ್ಟಿದೆ. ಪ್ರಸ್ತುತ ಸಂಕಲನವೂ ಅವರ ಕಾವ್ಯಪ್ರತಿಭೆಯ ನವೋನ್ಮೇಷಕ್ಕೆ ಸಾಕ್ಷಿಯಾಗಿದೆ. "ಆನು ಒಲಿದಂತೆ ಹಾಡುವೆ" ಇದು ಬಿ.ಆರ್. ಲಕ್ಷ್ಮಣರಾವ್ ಅವರ ಕಾವ್ಯದೃಷ್ಟಿ, ಅವರ ಸಂವೇದನೆಗಳ ಸಾಚಾತನ ಮತ್ತು ಅನುಭವಗಳ ಪ್ರಾಮಾಣಿಕತೆ ನಿಸ್ಸಂದೇಹವಾದುದು. ಅದು ಆತ್ಮವಂಚನೆಯನ್ನೊಲ್ಲದು. ಹಾಗಾಗಿ ಅವರ ಕಾವ್ಯದಲ್ಲಿ ಕಪಟದ ಸಾಲುಗಳಿಲ್ಲ. ಕಳೆದ ಐವತ್ತು ವರ್ಷಗಳಿಂದ ಅವರು ಕಾವ್ಯಸೃಷ್ಟಿಯಲ್ಲಿ ತೊಡಗಿದ್ದಾರೆ. ಅವರನ್ನು ಸೀಮಿತ ಆಶಯಗಳ ಕವಿ ಎಂದವರಿದ್ದಾರೆ. ಅಂಥ ಸಂದರ್ಭಗಳಲ್ಲಿ ಕವಿ ಅತ್ಯಂತ ವಿನಮ್ರವಾಗಿ ತಮ್ಮದು ಒಂದು ಪುಟ್ಟ ಕೈತೋಟ ಎಂದು ಹೇಳಿಕೊಂಡಿದ್ದಾರೆ. ಪುರುಷೋತ್ತಮನ ರೂಪ ರೇಖೆಯಲ್ಲ, ಮಧ್ಯಮವರ್ಗದ ಶ್ರೀಸಾಮಾನ್ಯ ಪಟ್ಟ ಪಾಡು, ಅವನ ಹುಟ್ಟುಹಾಡು ಲಕ್ಷ್ಮಣರಾಯರ ಕಾವ್ಯ
- ಚಿಂತಾಮಣಿ ಕೊಡ್ಲೆಕೆರೆ
Share
Subscribe to our emails
Subscribe to our mailing list for insider news, product launches, and more.