Karoleena Waal, To Kannada : Harsha Raghuram
ನನ್ನ ತಂಗಿ ಈಡಾ
ನನ್ನ ತಂಗಿ ಈಡಾ
Publisher - ಛಂದ ಪ್ರಕಾಶನ
- Free Shipping Above ₹300
- Cash on Delivery (COD) Available
Pages - 200
Type - Paperback
Couldn't load pickup availability
ನನ್ನ ತಂಗಿ ಈಡಾ
ಟಿಲ್ಡಾಳದು ಕಟ್ಟುನಿಟ್ಟಿನ ದಿನಚರಿ. ಮಾಸ್ಟರ್ ಪದವಿಯ ಓದು, ಸೂಪರ್ಮಾರ್ಕೆಟ್ನಲ್ಲಿ ಕೆಲಸ ಮತ್ತು ಅವಳ ಪುಟ್ಟ ತಂಗಿ ಈಡಾಳನ್ನು ಹಾಗೂ ಒಮ್ಮೊಮ್ಮೆ ಅವಳ ಮದ್ಯವ್ಯಸನಿ ತಾಯಿಯನ್ನೂ ನೋಡಿಕೊಳ್ಳುವುದರ ನಡುವೆ ಅವಳಿಗಾಗಿ ಸಮಯ ಸಿಗುವುದೇ ಕಡಿಮೆ, ಅವರ ಮನೆಯಲ್ಲಿ ತಂದೆ ಎನ್ನಿಸಿಕೊಂಡ ವ್ಯಕ್ತಿ ಇಲ್ಲ. ಈ ಮೂವರ ವಾಸ ಜರ್ಮನಿಯ ಸಣ್ಣದೊಂದು ಊರಿನ 'ಖುಷಿಯ ರಸ್ತೆ'ಯಲ್ಲಿ ಟಿಲ್ಡಾಳಿಗೆ ಆ ಊರಿನ ಜೀವನ ರೇಜಿಗೆ ಹುಟ್ಟಿಸುತ್ತಿದೆ. ಅವಳ ಗೆಳೆಯ ಗೆಳತಿಯರು ಊರು ಬಿಟ್ಟು ಅಮ್ರ್ಸ್ಟಡಾಮ್ ಮತ್ತು ಬರ್ಲಿನ್ನನಂತಹ ದೊಡ್ಡ ಊರುಗಳನ್ನು ಸೇರಿಕೊಂಡುಬಿಟ್ಟಿದ್ದಾರೆ. ಈಡಾಳಿಗೆ ಆಸರೆಯಾಗಲೆಂದು ಟಿಲ್ಡಾ ಆ ಸಣ್ಣ ಊರಿನಲ್ಲೇ ಉಳಿದು ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾಳೆ. ಹೀಗಿರುವಾಗ ಒಂದು ದಿನ ಬರ್ಲಿನ್ನ ದೊಡ್ಡ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಮಾಡುವ ಅವಕಾಶವೊಂದು ಟಿಲ್ಡಾಳನ್ನು ಅರಸಿ ಬರುತ್ತದೆ. ಅವಳು ತನ್ನ ಸಣ್ಣ ಊರಿನ ಜೀವನದಿಂದ ಬಿಡುಗಡೆ ಹೊಂದುವ ಕನಸನ್ನು ಕಾಣತೊಡಗುತ್ತಾಳೆ. ಇದ್ದಕ್ಕಿದ್ದಂತೆ ಯುವಕ ವಿಕ್ಟೋರ್ ಊರಿಗೆ ಮರಳುತ್ತಾನೆ. ವಿಕ್ಟೋರ್ನ ತಮ್ಮ ಈವಾನ್ ಟಿಲ್ಡಾಳ ಗೆಳೆಯನಾಗಿದ್ದ. ಟಿಲ್ಡಾಳಂತೆ ವಿಕ್ಟೋರ್ ಕೂಡ ಹೊರಾಂಗಣ ಈಜುಕೊಳದಲ್ಲಿ 22 ಸುತ್ತುಗಳನ್ನು ಈಜುತ್ತಾನೆ. ಜೀವನದಲ್ಲಿ ಎಲ್ಲವೂ ಸರಿ ಹೋಗುತ್ತಿದೆ ಎಂಬ ಭಾವನೆ ಟಿಲ್ಡಾಳಿಗೆ ಬರುತ್ತಿದ್ದಂತೆಯೇ ಮನೆಯ ಪರಿಸ್ಥಿತಿ ಕೈಮೀರಿ ಹೋಗುತ್ತದೆ.
'ನನ್ನ ತಂಗಿ ಈಡಾ' ಕಾದಂಬರಿಯಲ್ಲಿ ಜರ್ಮನಿಯ ಸಣ್ಣ ಊರಿನ ಕೌಟುಂಬಿಕ ತಲ್ಲಣಗಳ ಗಾಢ ಚಿತ್ರಣವಿದೆ. ಇಲ್ಲಿ ಜವಾಬ್ದಾರಿ ಮತ್ತು ಸ್ವಾತಂತ್ರ್ಯಗಳ ನಡುವೆ ಖುಷಿಯನ್ನು ಕಂಡುಕೊಳ್ಳುವ ತುಡಿತವಿದೆ.
Share


Subscribe to our emails
Subscribe to our mailing list for insider news, product launches, and more.