Skip to product information
1 of 2

Dr. Hi. Chi. Borelingaiah

ನಮ್ಮೊಳಗೊಂದು ಪುಟ್ಟ ಆಫ್ರಿಕಾ

ನಮ್ಮೊಳಗೊಂದು ಪುಟ್ಟ ಆಫ್ರಿಕಾ

Publisher - ಸಪ್ನ ಬುಕ್ ಹೌಸ್

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 128

Type - Paperback

ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ಕಳೆದ ನಾಲ್ಕು ದಶಕಗಳಿಂದಲೂ ಸತತವಾಗಿ ಬುಡಕಟ್ಟು ಸಮುದಾಯಗಳ ಸಾಹಿತ್ಯ, ಸಂಸ್ಕೃತಿ, ಕಾವ್ಯಸಂಗ್ರಹ, ಕಲೆ, ವಿಶ್ಲೇಷಣೆ ಕುರಿತು ಅಧ್ಯಯನ ಮಾಡುತ್ತಾ ಬಂದಿದ್ದಾರೆ. ಬುಡಕಟ್ಟು ಸಮುದಾಯಗಳ ನಿತ್ಯ ಬದುಕಿನ ಹೋರಾಟ ಹಾಗೂ ಅವರ ಸಾಂಸ್ಕೃತಿಕ ಅನನ್ಯತೆಯನ್ನು ಕುರಿತು ಕಾಲಕಾಲಕ್ಕೆ ಹತ್ತಾರು ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ.

ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ಪ್ರಸ್ತುತ 'ನಮ್ಮೊಳಗೊಂದು ಪುಟ್ಟ ಆಫ್ರಿಕಾ' ಕೃತಿಯ ಮೊದಲನೆಯ ಭಾಗದಲ್ಲಿ ಉತ್ತರ ಕನ್ನಡದ ಕಾಡೊಳಗೆ ಇರುವ 'ಸಿದ್ದಿ ಜನಾಂಗ'ದ ಮೂಲ, ವಸಾಹತು, ಅವರ ಬದುಕು ಹಾಗೂ ಸಂಸ್ಕೃತಿಯ ವಾಸ್ತವ ನಿರೂಪಣೆಯಿದ್ದರೆ, ಎರಡನೆಯ ಭಾಗದಲ್ಲಿ ಮಲೆನಾಡಿನ ಘಟ್ಟಗಳ ಅರಣ್ಯದಲ್ಲಿ ವಾಸವಾಗಿರುವ ಬುಡಕಟ್ಟು ಜನಾಂಗಗಳು ದಿನನಿತ್ಯ ಎದುರಿಸುತ್ತಿರುವ ತಮ್ಮ ಬದುಕಿನ ಅಸ್ತಿತ್ವಕ್ಕಾಗಿ ಹೋರಾಟ, ಸಾಮಾಜಿಕ ಹಾಗೂ ರಾಜಕಾರಣದ ಆಕ್ರಮಣಗಳನ್ನು ಕುರಿತು ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಿದ್ದಾರೆ. ಆದರೆ ಈ ಎರಡೂ ಭಾಗಗಳು ಬೇರೆ ಬೇರೆ ಅಲ್ಲ. ಕೃತಿಯ ಮೂಲಸಾಂದ್ರತೆಯನ್ನು ಪರಸ್ಪರ ಪೂರಕವಾಗಿ ಬೆಸೆಯುವ ಭಾಗಗಳೇ ಆಗಿದ್ದು, ಒಂದರೊಡನೆ ಒಂದು ವಿಲೀನಗೊಂಡ ಸಮಗ್ರವಾದ ಅಧ್ಯಯನವಾಗಿದೆ.

ಕಾಡು ಸೃಷ್ಟಿಸುವ ಪ್ರಾಕೃತಿಕ ಸಂಪತ್ತು ಇವತ್ತು ಬುಡಕಟ್ಟುಗಳ ಅಗತ್ಯಗಳನ್ನು ಪೂರೈಸುವ ಬದಲಾಗಿ ಭೋಗಿಗಳ ವಸ್ತುಸಂಸ್ಕೃತಿಯಾಗಿದೆ. ಹಾಗಾಗಿ ಬುಡಕಟ್ಟುಗಳ ಹಾಗೂ ಅರಣ್ಯದ ಅಭಿವೃದ್ಧಿಯ ಪರಿಕಲ್ಪನೆಯೇ ಬದಲಾಗಬೇಕು ಎಂದು ಲೇಖಕರು ಇಲ್ಲಿನ ಲೇಖನಗಳಲ್ಲಿ ಮತ್ತೆ ಮತ್ತೆ ಸೂಚಿಸುತ್ತಿರುವುದು ಸಮಂಜಸವಾಗಿಯೇ ಇದೆ. ಅಭಿವೃದ್ಧಿಯ ಕಲ್ಪನೆಯ ಬಗ್ಗೆ ಇಂದಿನ ದಿನಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಉಂಟಾಗಿರುವ ವಾದ, ವಿವಾದ, ವಾಗ್ವಾದ, ಕಾನೂನು ಕಟ್ಟಳೆಗಳು, ಹೋರಾಟಗಳು ಇದರ ಬಗ್ಗೆಯೆಲ್ಲಾ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ಇಲ್ಲಿನ ಲೇಖನಗಳಲ್ಲಿ ಸಲಹೆ ಮಾಡುವುದು ಸೂಕ್ತವಾಗಿಯೇ ಇದೆ. (ಮುನ್ನುಡಿಯಿಂದ)

-ಡಾ. ಕರೀಗೌಡ ಬೀಚನಹಳ್ಳಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)