Nagesh Hegde
ನಮ್ಮೊಳಗಿನ ದುಂದುಮಾರ
ನಮ್ಮೊಳಗಿನ ದುಂದುಮಾರ
Publisher - ಭೂಮಿ ಬುಕ್ಸ್
Regular price
Rs. 120.00
Regular price
Rs. 120.00
Sale price
Rs. 120.00
Unit price
/
per
- Free Shipping Above ₹250
- Cash on Delivery (COD) Available
Pages - 154
Type - Paperback
ಜೀವಲೋಕದ ಧ್ವಂಸಾಸುರ
ದುಂದುಮಾರ
'ಬ್ರಹ್ಮಪುರಾಣ'ದಲ್ಲಿ ಒಂದು ಕತೆ ಬರುತ್ತದೆ. ನೆಲದೊಳಗೆ 'ದುಮ್‌ದುಮ್' ಹೆಸರಿನ ಒಬ್ಬ ದೈತ್ಯನಿದ್ದಾನೆ. ಆತ ಚಲಿಸಿದರೆ ಭೂಕಂಪನವೇ ಆಗುತ್ತದೆ. ಫೂತ್ಕರಿಸಿದರೆ ಜ್ವಾಲಾಮುಖಿಯೇ ಚಿಮ್ಮುತ್ತದೆ. ಋಷಿಮುನಿಗಳು ಈ ದೈತ್ಯನ ವಿಲಕ್ಷಣ ಶಕ್ತಿಯ ಬಗ್ಗೆ ಕುವಲಯಾಶ್ವ ಹೆಸರಿನ ರಾಜನಿಗೆ ವರದಿ ಮಾಡುತ್ತಾರೆ.
ರಾಜ ಈ ಭೂಗತ ದೈತ್ಯನ ಬಗ್ಗೆ ಅಚ್ಚರಿಪಟ್ಟು ಸುಮ್ಮನಿರಬೇಡವೆ? ದೈತ್ಯನನ್ನು ಹೊರಕ್ಕೆಳೆಯುವಂತೆ ತನ್ನ ನೂರು ಮಕ್ಕಳಿಗೆ ಆಜ್ಞಾಪಿಸುತ್ತಾನೆ. ಗುದ್ದಲಿ, ಸನಿಕೆಗಳ ಗದ್ದಲ ನೋಡಿ ಹೊರಬಂದ ರಾಕ್ಷಸ ತನ್ನ ಶಾಂತಿಭಂಗ ಮಾಡಿದ್ದಕ್ಕೆ ಅಬ್ಬರಿಸಿ ಸಿಡಿದೆರಗಿ ರಾಜನ 97 ಮಕ್ಕಳನ್ನು ಹೊಸಕಿ ಹಾಕುತ್ತಾನೆ. ರಾಜ ಧಾವಿಸಿ ಹೋಗಿ ಅಹರ್ನಿಶಿ ಹೋರಾಡಿ ಕೊನೆಗೂ ದೈತ್ಯನನ್ನು ಮಣ್ಣುಮುಕ್ಕಿಸಿ 'ದುಂದುಮಾರ' ಎಂಬ ಬಿರುದು ಗಳಿಸುತ್ತಾನೆ.
ಇಷ್ಟೆಲ್ಲ ಮಾಡಿದ್ದಕ್ಕೆ ರಾಜನಿಗೆ ಸಿಕ್ಕಿದ್ದೇನು? ಬರೀ ಬಿರುದು ಮಾತ್ರ! ಇಂದಿನ ಕಾರ್ಪೊರೇಟ್ ಯುಗದ ಮನುಷ್ಯನದೂ ಅದೇ ಕತೆಯಾಗುತ್ತಿದೆ. ತನ್ನ ತೀಟೆ ತೀರಿಸಿಕೊಳ್ಳಲೆಂದು ಭೂಮಿಯೊಳಗಿನ ಏನೇನನ್ನೆಲ್ಲ ಹೊರಕ್ಕೆಳೆದು ಹೊಸಕಿ ಹಾಕುತ್ತ ಜೀವಲೋಕಕ್ಕೇ ಪ್ರಳಯಾಂತಕನಾಗುತ್ತಿರುವ ಸತ್ಯಕತೆಗಳು ಈ ಕೃತಿಯಲ್ಲಿವೆ.

Share
Subscribe to our emails
Subscribe to our mailing list for insider news, product launches, and more.