Koushik Koodurasthe
ನಗುಮುಖದ ಹೆಣಗಳ ಕೇಸು
ನಗುಮುಖದ ಹೆಣಗಳ ಕೇಸು
Publisher - ಸ್ನೇಹ ಬುಕ್ ಹೌಸ್
- Free Shipping Above ₹250
- Cash on Delivery (COD) Available
Pages -
Type - Paperback
Couldn't load pickup availability
ಸಮಯ ಮುಂಜಾನೆ ಆರರ ಹೊತ್ತು...
ಎಂದಿನಂತೆ ಬಾಗಿಲ ಬಳಿ ಬಂದು ನಿಂತ ಮನೆಕೆಲಸದಾಕೆ ಕಮಲಮ್ಮಳಿಗೆ ಮನೆಯ ಬಾಗಿಲನ್ನು ಬಡಿಯುವ ಜರೂರತ್ತಿರಲಿಲ್ಲ. ಬೆಳ್ಳಂಬೆಳಗ್ಗೆಯೇ ದಡಬಡ ಬಾಗಿಲು ಬಡಿದು ನಿದ್ರೆಗೆಡಿಸುವ ಕಮಲಮ್ಮಳಿಂದ ತಪ್ಪಿಸಿಕೊಳ್ಳಲು ಮನೆಯ ಮುಂದಿದ್ದ ಹೂ ಬುಟ್ಟಿಯೊಂದರಲ್ಲಿ ಮನೆಯ ಕೀಯನ್ನು ರಹಸ್ಯವಾಗಿ ಇರಿಸಲಾಗಿತ್ತು. ಅದರ ಅರಿವಿದ್ದ ಕಮಲಮ್ಮಳು ಹೂ ಬುಟ್ಟಿಯಿಂದ ಕೀಯನ್ನೆತ್ತಿಕೊಂಡು ನಂತರ ಮೆಲ್ಲಗೆ ಬಾಗಿಲನ್ನು ತೆರೆದು ಒಳಪ್ರವೇಶಿಸುತ್ತಲೇ ಎದುರಿಗಿದ್ದ ಸೋಫಾದ ಮೇಲೆ ವ್ಯಕ್ತಿಯೊಬ್ಬ ನಗುತ್ತಾ ಮಲಗಿದ್ದು ಕಾಣಿಸಿತು. ಇದು ಅವಳಲ್ಲಿ ಅಚ್ಚರಿಯನ್ನುಟ್ಟಿಸಿ, ತೀರ ಸನಿಹಕ್ಕೆ ನಡೆದು ಗಮನಿಸುತ್ತಿದ್ದಂತೆ ಅವಳೊಮ್ಮೆ ಬೆಚ್ಚಿಬಿದ್ದಳು. ಆತನ ಮೊಗವೆಲ್ಲಾ ನೀಲಿಗಟ್ಟಿತ್ತು! ತಕ್ಷಣವೇ ಅನುಮಾನಗೊಂಡು ತನ್ನ ನಡುಗುವ ಕೈಗಳನ್ನು ಆ ವ್ಯಕ್ತಿಯ ಮೂಗಿನ ಬಳಿ ಇರಿಸುತ್ತಿದ್ದಂತೆ ಅವಳ ಎದೆಬಡಿತವೊಮ್ಮೆ ನಿಂತಂತಾಯಿತು. ಆ ವ್ಯಕ್ತಿ ಸೋಫಾದ ಮೇಲೆ ಸತ್ತು ಬಿದ್ದಿದ್ದ. ಅವನ ಹೆಣ ನಗುತ್ತಲ್ಲಿತ್ತು !!!
-ಕೌಶಿಕ್ ಕೂಡುರಸ್ತೆ
Author's Interview: https://youtu.be/vgCMZwM372c
Share


ok
Subscribe to our emails
Subscribe to our mailing list for insider news, product launches, and more.