Dr. Mahabaleshwar Rao
ನಾವು ಶಿಕ್ಷಕರು ಬದಲಾಗೋಣ
ನಾವು ಶಿಕ್ಷಕರು ಬದಲಾಗೋಣ
Publisher -
- Free Shipping Above ₹250
- Cash on Delivery (COD) Available
Pages - 174
Type - Paperback
ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ ಕ್ಷೇತ್ರದ ವಿವಿಧ ಸಮಸ್ಯೆಗಳು ಹಾಗೂ ಒಲವುನಿಲುವುಗಳ ಬಗ್ಗೆ ಅನನ್ಯವಾದ ರೀತಿಯಲ್ಲಿ ಬರವಣಿಗೆ ಮತ್ತು ಸಾರ್ವಜನಿಕ ಸಂಕಥನಗಳಲ್ಲಿ ನಾಡಿನ ಹೆಸರಾಂತ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ, ಪಠ್ಯಪುಸ್ತಕಗಳ ರಚನೆ, ಶಿಕ್ಷಕರ ಶಿಕ್ಷಣ, ಮೌಲ್ಯ ಶಿಕ್ಷಣ, ಡಿಜಿಟಲ್ ಮಾಧ್ಯಮ ಇವೇ ಮೊದಲಾದ ಚರ್ಚಾರ್ಹ ವಿಚಾರಗಳಿಗೆ ಅಭಿಮುಖವಾಗಿ ಏನಾಗಿದೆ? ಏನಾಗಬೇಕಾಗಿದೆ ಎಂಬುದನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿ ಅತ್ಯಂತ ಖಚಿತವಾಗಿ ತಮ್ಮ ನಿಲುವುಗಳನ್ನು ಡಾ.ರಾವ್ ಇಲ್ಲಿ ಮಂಡಿಸಿದ್ದಾರೆ. ನಾವು ಅಷ್ಟಾಗಿ ಗಮನ ಕೊಡದ ಜಿಡ್ಡು ಕೃಷ್ಣಮೂರ್ತಿ, ಡಾ. ಅಂಬೇಡ್ಕರ್, ಡಾ. ಜೆಪಿ ನಾಯ್ಕ ಮುಂತಾದ ಚಿಂತಕರ ಶಿಕ್ಷಣ ದರ್ಶನಗಳ ಮೇಲೆ ವಿಶ್ಲೇಷವಾದ ಬೆಳಕು ಚೆಲ್ಲಿ ಸದ್ಯದ ಸಂದರ್ಭದಲ್ಲಿ ಅವರ ಮಹತ್ತ್ವವನ್ನು ಮನಗಾಣಿಸಿದ್ದಾರೆ. ಆಧುನಿಕೋತ್ತರ ಸಂದರ್ಭದಲ್ಲಿ ನಾಡಿನ ಶೈಕ್ಷಣಿಕಪ್ರಗತಿ ಹೇಗಾಗಬೇಕು, ಬೋಧನೆ ಕಲಿಕೆ ಹೇಗೆ ಉತ್ಕೃಷ್ಟಗೊಳ್ಳಬೇಕು ಮತ್ತು ಬಹಳ ಮುಖ್ಯವಾಗಿ ಶೈಕ್ಷಣಿಕ ಪ್ರಕ್ರಿಯೆಯ ಹೃದಯವೇ ಆಗಿರುವ ಶಿಕ್ಷಕರು ಹೇಗೆ ಬದಲಾಗಬೇಕು ಎಂಬುದನ್ನು ಡಾ. ರಾವ್ ಈ ಸಂಕಲನದ ಲೇಖನಗಳಲ್ಲಿ ಮಾರ್ಮಿಕವಾಗಿ ಪ್ರತಿಪಾದಿಸಿದ್ದಾರೆ. ಅಪಾರ ಅನುಭವ ಮತ್ತು ಅಧ್ಯಯನದ ಸಂಗಮವಾದ ಈ ಕೃತಿ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಅದರಲ್ಲೂ ಪ್ರಮುಖವಾಗಿ ಶಿಕ್ಷಕರ ಮತ್ತು ಶಿಕ್ಷಣದ ವಿದ್ಯಾರ್ಥಿಗಳ ಕಣ್ಣು ತೆರೆಸುವ ಬೆಳಕಿನ ಹಾದಿ.
Share
Subscribe to our emails
Subscribe to our mailing list for insider news, product launches, and more.