N. Sandhya Rani
ನಾತಿಚರಾಮಿ
ನಾತಿಚರಾಮಿ
Publisher - ವೀರಲೋಕ ಬುಕ್ಸ್
- Free Shipping Above ₹250
- Cash on Delivery (COD) Available
Pages - 116
Type - Paperback
ಎನ್ ಸಂಧ್ಯಾರಾಣಿ
'ನಾತಿಚರಾಮಿ' ನಿನ್ನ ಹೊರತಾಗಿ ಅಲ್ಲ ಎನ್ನುವ ಮಾತು ಮದುವೆಯ ಪ್ರಮಾಣದಲ್ಲಿ ಧರ್ಮ, ಅರ್ಥ, ಮೋಕ್ಷಗಳ ಜೊತೆಯಲ್ಲಿ ಕಾಮಕ್ಕೂ ಅನ್ವಯವಾಗುತ್ತದೆ. ನಂಬಿಕೆ, ಭರವಸೆ ಆಗಬೇಕಿದ್ದ ಈ ಪ್ರಮಾಣ ಗೌರಿಯ ಪಾಲಿಗೆ ಒಂದು ಅಗೋಚರ ಬಂಧನವೂ ಆಗಿರುತ್ತದೆ. ಆ ಬಂಧನ ಕೇವಲ ಮಾಡಿದ ಆ ಪ್ರಮಾಣದ್ದಲ್ಲ, ಬಾಲ್ಯದಿಂದಲೂ ಸಮಾಜದಿಂದ ಕಲಿಸಲ್ಪಟ್ಟ ಸೋ ಕಾಲ್ಡ್ ಮೌಲ್ಯಗಳದ್ದು, ನಂಬಿಕೆಗಳದ್ದು, ನಿರೀಕ್ಷೆಗಳದ್ದು. ಗಂಡ ಬಿಟ್ಟುಹೋದಮೇಲೆ ಸಹ ದಾಂಪತ್ಯದ ಈ ಪ್ರಮಾಣವನ್ನು ಕಳಚಿಕೊಳ್ಳುವುದು ಗೌರಿಗೆ ಸಲೀಸಲ್ಲ. ಇದು, ಗೌರಿ ಅವುಗಳನ್ನು ದಾಟುವ ಕಥೆ, ಆ ಮೂಲಕ ಬದುಕಿನ ಸಮೀಕರಣದಲ್ಲಿ ತನ್ನನ್ನು ತಾನು ಪಡೆದುಕೊಳ್ಳುವ ಕಥೆ.
ಮೊದಲ ನೋಟಕ್ಕೆ ಇದು ಗೌರಿಯ ಕಥೆ ಅನ್ನಿಸಿದರೂ, ಗಂಡ ಹೆಂಡತಿಯ ನಡುವಣ ಈ ಗಂಡು ಹೆಣ್ಣಿನ ಸಂಬಂಧದ ಸಿಕ್ಕನ್ನು ಸುಮಾ ಮತ್ತು ಲಕ್ಷ್ಮಮ್ಮ ಸಹ ತಮಗೆ ತೋಚಿದ ಹಾದಿಯಲ್ಲಿ ಬಿಡಿಸಿಕೊಳ್ಳಲು ಹೋರಾಡುತ್ತಿರುತ್ತಾರೆ. ಹಾಗಾಗಿಯೇ ಇದು ಗೌರಿ, ಸುಮಾ ಮತ್ತು ಲಕ್ಷ್ಮಮ್ಮನ ಕಥೆಯೂ ಹೌದು. ಮತ್ತು ಪ್ರತಿ ಹೆಣ್ಣಿನಲ್ಲೂ ಇರಬಹುದಾದ ಗೌರಿ, ಸುಮಾ ಮತ್ತು ಲಕ್ಷ್ಮಮ್ಮನ ಕಥೆಯೂ ಹೌದು.
Share
Subscribe to our emails
Subscribe to our mailing list for insider news, product launches, and more.