Girimane Shyamarao
Publisher - ಗಿರಿಮನೆ ಪ್ರಕಾಶನ
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಪಶ್ಚಿಮ ಘಟ್ಟದಲ್ಲಿ ಚಾರಣ ಮಾಡುವವರು ಒಂದಿಷ್ಟಾದರೂ ಅದರ ಬಗ್ಗೆ ಮೊದಲೇ ತಿಳಿದಿರಬೇಕು. ಅದರಂಚಿನಲ್ಲೇ ಹುಟ್ಟಿ ಬೆಳದ ನನಗೆ ಅದು ಹೊಸತಲ್ಲ. ಆದರೆ ಬಯಲು ಸೀಮೆಯವರಿಗೆ ಇಲ್ಲಿನ ಎಲ್ಲವೂ ಹೊಸತು ಮಾತ್ರವಲ್ಲ; ಇಲ್ಲಿನ ಮಳೆಗಾಲದ ಆರ್ಭಟ, ಪರಿಸರ, ಪ್ರಾಣಿ-ಪಕ್ಷಿ, ಕತ್ತಲು, ದಿಕ್ಕು-ದೆಸೆ ಎಲ್ಲವೂ ನಿಗೂಢ. ಕಾಡಿನೊಳಗೆ ತಪ್ಪಿಸಿಕೊಂಡರೆ ಏನು ತಿನ್ನಬಹುದು? ಹೇಗೆ ಬದುಕುಳಿಯಬಹುದು? ಎಂದು ಕೂಡ ಅವರಿಗೆ ಗೊತ್ತಿರುವುದಿಲ್ಲ. ಇಲ್ಲಿನ ಕಾಡಿನ ಲೂಟಿ, ಅನಾಚಾರಗಳ ಕಲ್ಪನೆಯೂ ಇರುವುದಿಲ್ಲ. ಹಾಗಾಗಿ ಕಾಲ್ಪನಿಕ ಕತೆಯ ಜೊತೆ ಇಲ್ಲಿನ ನೈಜ ಚಿತ್ರಣವನ್ನೂ ಇದರಲ್ಲಿ ಕೊಡುತ್ತಿದ್ದೇನೆ. ಆಸಕ್ತರಿಗೆ ಕತೆ ಓದಿಸಿಕೊಂಡು ಹೋಗುವುದರ ಜೊತೆಗೆ ಪ್ರಕೃತಿಯ ಬಗ್ಗೆ ಒಂದಿಷ್ಟು ಮಾಹಿತಿಯೂ ಇದರಲ್ಲಿ ಸಿಗಬಹುದು. ಇದು ಪಶ್ಚಿಮಘಟ್ಟದ ಅನಾವರಣದ 'ಮಲೆನಾಡಿನ ರೋಚಕ ಕತೆ'ಗಳ ಎರಡನೆಯ ಕಂತು.
