Someshwara Gurumata
ಮಿಸ್ಟರ್. A
ಮಿಸ್ಟರ್. A
Publisher - ಸ್ನೇಹ ಬುಕ್ ಹೌಸ್
- Free Shipping Above ₹250
- Cash on Delivery (COD) Available
Pages - 160
Type - Paperback
ಆಡಿಯೊ ವಿಶುವಲ್ ಪದವೀಧರರಾದಂಥ ಶ್ರೀ ಸೋಮೇಶ್ವರ ಗುರುಮಠರವರು ನಾಡು, ನುಡಿ, ದೇಶ, ಭಾಷೆ ಹಾಗೂ ಜಗತ್ತು ಇವುಗಳ ಬಗ್ಗೆ ತಮ್ಮ ಕನಸಿನ ಮೂಲಕ ಈ ಕಾದಂಬರಿಯಲ್ಲಿ ತಮ್ಮ ಭಾವನೆಗಳನ್ನು ಹೊರಹಾಕಿದ್ದಾರೆ. ಕನಸು ಕಾಣುವುದು ನಮ್ಮ ನಿಮ್ಮಂಥವರಿಂದ ಸಾಧ್ಯವಿಲ್ಲ. ಕನಸು ಕಾಣುವುದು ಆದರ್ಶದಿಂದ ಕೂಡಿದ ಧೈರ್ಯವಂತ ಯುವಕರಿಂದ ಮಾತ್ರ ಸಾಧ್ಯ. ಕನಸು ಎಂದರೆ, ನಾವು ನೀವು ಕಾಣುವಂಥ ಹಗಲುಗನಸುಗಳು ಅಲ್ಲ. ಹಳವಂಡಗಳೂ ಅಲ್ಲ. ತನಗಾಗಿ ತನ್ನ ಜಗತ್ತು ಹೇಗಿರಬೇಕು? ಎಂದು ಆದರ್ಶ ಯುವಕನೊಬ್ಬನ 'ಚಿಂತನೆ ಅಥವಾ ಕನಸು' ಅದೇ ಈ ಕಾದಂಬರಿಯ ತಿರುಳು.
ಈ ಕಾದಂಬರಿ ವೈಚಾರಿಕ, ಆಧ್ಯಾತ್ಮಿಕ ಹಾಗೂ ಸೃಜನಾತ್ಮಕ ತಳಹದಿಯ ಮೇಲೆ ನಿಂತಿದೆ. ಯುವಕನೊಬ್ಬ ಈ ಜಗತ್ತಿನ ಆಗು ಹೋಗುಗಳ ತೊಳಲಾಟದಲ್ಲಿ ಮುಳುಗಿ ತೇಲುವುದೇ ಒಂದು ಚಿಂತನೆ. ಅಂಥ ಚಿಂತನೆಯಲ್ಲಿ ಮುಳುಗಿ ತೇಲುವುದು ಸೋಮೇಶ್ವರರಂಥಹ ಗಟ್ಟಿಗರಿಂದ ಮಾತ್ರ ಸಾಧ್ಯ. ಈ ಕಾದಂಬರಿಯಲ್ಲಿ ಲೇಖಕರೇ ಮಿ॥ Aನ ಪಾತ್ರವನ್ನು ಧಾರಣ ಮಾಡಿ ಈ ಪ್ರಪಂಚ ಸುಳ್ಳಿನ ಹಳಿಗಳ ಮೇಲೆ ಓಡುತ್ತಿರುವ ಒಂದು ರೈಲು ಎನ್ನುವುದನ್ನು ಪ್ರತಿಪಾದಿಸಿ ಅನೇಕ ಜಾಗತಿಕ ಸಮಸ್ಯೆಗಳನ್ನು ಅನಾವರಣಗೊಳಿಸಿದ್ದಾರೆ.
'ಕನಸು ನಿನ್ನದೆ, ಕರ್ತೃವೂ ನೀನೆ, ಅಂತ್ಯಕ್ಕೆ ನಾಂದಿಯನ್ನು ಹಾಡಬಲ್ಲ ಶಕ್ತಿಯೂ ನೀನೆ' ಎಂಬ ಮಾತುಗಳು ಕಾದಂಬರಿಯ ತಿರುಳನ್ನು ಓದುಗನಿಗೆ ಉಣಬಡಿಸುತ್ತದೆ.
ಭಾಷಾ ಸಮಸ್ಯೆ, ಜಾತಿ ಸಮಸ್ಯೆ, ನೀರಿನ ಸಮಸ್ಯೆ ರೋಗರುಜಿನ ವೈರಸ್‌ಗಳ ಮೇಲಾಟ, ಲಿಂಗಾನುಪಾತ, ರೋಗರುಜಿನಗಳ ಔಷಧಿಗಾಗಿ ಪೈಪೋಟಿ, ಪೇಟೆಂಟ್ ಪಡೆಯಲು ಸ್ಪರ್ಧೆ, ಪರಿಸರನಾಶ ಹಾಗೂ ಪ್ರಕೃತಿಯ ಮುನಿಸು ಹೀಗೆ ಒಂದೇ ಎರಡೇ ಜಗತ್ತಿನ ಅನೇಕ ಸಮಸ್ಯೆಗಳನ್ನು ಲೇಖಕರು ಈ ಕಾದಂಬರಿಯಲ್ಲಿ ಅನಾವರಣಗೊಳಿಸಿದ್ದಾರೆ. ಜಗತ್ತಿನಲ್ಲಿ ದೊಡ್ಡಣ್ಣ ಎಂದು ಎನಿಸಿಕೊಂಡವರ ಕಣ್ಣಾಮುಚ್ಚಾಲೆ ಆಟದ ಬಗ್ಗೆ ಲೇಖಕರು ಈ ಕಾದಂಬರಿಯಲ್ಲಿ ನಿವೇದಿಸಿಕೊಂಡಿದ್ದಾರೆ.
ಲೇಖಕರು ಕಾಣುವ ಕನಸು ಇಲ್ಲಿಗೆ ಕೊನೆಯಾಗದೆ, ಮುಂದುವರೆಯುವುದು ಎಂಬ ಆಶಾಭಾವನೆಯೊಂದಿಗೆ ಈ ಕಾದಂಬರಿ ಮುಕ್ತಾಯವಾಗುವುದು. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ, ಶ್ರೀ ಗುರುಮಠರವರಿಗೆ ಒಳ್ಳೆಯ ಯಶಸ್ಸು ಸಿಗಲಿ ಎಂದು ಹಾರೈಸುತ್ತಾ ನಾಡದೇವಿಯ ರೂಪ ಧರಿಸಿರುವ ತಾಯಿ ಚಾಮುಂಡೇಶ್ವರಿ ಸೋಮೇಶ್ವರರಿಗೆ ಆಶೀರ್ವದಿಸಲಿ ಎಂದು ಹಾರೈಸುವ,
ಎಸ್.ಎಂ.ಹಿರೇಮಠ
ನಿವೃತ್ತ ಕನ್ನಡ ಉಪನ್ಯಾಸಕರು
Share
Subscribe to our emails
Subscribe to our mailing list for insider news, product launches, and more.