Skip to product information
1 of 1

K. V. Tirumalesh

ಮೆಟ್ರೋದಲ್ಲಿ ಇಲಿ ಆದಿಕಾವ್ಯ - 9

ಮೆಟ್ರೋದಲ್ಲಿ ಇಲಿ ಆದಿಕಾವ್ಯ - 9

Publisher - ಅಭಿನವ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಮನೆ, ಬಯಲು, ಕಾಡು, ಶಾಲೆ, ಮರ, ಹೂವು, ಹಕ್ಕಿ ಪಕ್ಕಿ, ಪೇಟೆ ಹೀಗೆ ಎಲ್ಲೆಂದರಲ್ಲಿ ವಸ್ತು ಸಾಮಗ್ರಿಯನ್ನು ಕೊರತೆಯಿಲ್ಲದಂತೆ ತಮ್ಮ ಹಿಡಿ ಹಿಡಿ ಮಕ್ಕಳ ಕವಿತೆಗಳಿಗೆ ತಂದುಕೊಳ್ಳುವ ತಿರುಮಲೇಶ ನಮ್ಮ ತೋಂಡೀ ಪರಂಪರೆಯಲ್ಲಿರುವ, ಜನಪದೀಯ ಮಾದರಿಗಳನ್ನೇ ಹಿನ್ನೆಲೆಗೆ ಇಟ್ಟುಕೊಂಡುದು, ಅದರಲ್ಲಿಯೇ ಹೊಸಗಾಲದ ಹೊಸ ಮಕ್ಕಳಿಗೆ ಏನೆಲ್ಲವನ್ನು ನೀಡಬಹುದಾದುದಕ್ಕೆ ತುಡಿದುದು ಕಾಣುತ್ತದೆ. ಹೀಗಿರುವ ಬಂಧದಿಂದಲೇ ಇಲ್ಲಿನ ಸಾಕಷ್ಟು ರಚನೆಗಳನ್ನು ನಮ್ಮ ಗ್ರಾಮೀಣ ಚಿಣ್ಣರೂ ಅನುಭವಿಸಬಹುದಾಗಿದೆ. ಹಾಗೆ ನೋಡಿದರೆ ಗ್ರಾಮೀಣ ಪರಿಸರದ ಮಕ್ಕಳಿಗಾಗುವ, ಗ್ರಾಮೀಣ ಮತ್ತು ಶಹರದ ಎಲ್ಲ ಮಕ್ಕಳಿಗಾಗುವ ಸಾಮಾನ್ಯದ ವಸ್ತು ಪ್ರಪಂಚ ಇಲ್ಲಿನ ಪದ್ಯಗಳಲ್ಲಿ ವಿಸ್ತ್ರತವಾಗಿಯೇ ಹರಡಿಕೊಂಡಿದೆ. ಹೊಸಗಾಲದ, ಹೊಸಪ್ರಯೋಗಗಳ ಮಕ್ಕಳ ಸಾಹಿತ್ಯ ಆದಷ್ಟೂ ಶಹರದ ಮಕ್ಕಳಿಗೆ ಹೆಚ್ಚು ಸ್ಪಂದಿಸಿದ್ದನ್ನು ನೋಡಿದರೆ ತಿರುಮಲೇಶರ ಬರವಣಿಗೆ ಈ ನಿಟ್ಟಿನಲ್ಲಿ ಒಂದಿಷ್ಟು ಹೊಸ ದಾರಿ ಮಾಡಿಕೊಂಡಿದೆ ಎನ್ನಬಹುದು.

ಶೈಕ್ಷಣಿಕ ಉದ್ದೇಶಗಳಿಗೇ ನೇರಗೊಂಡ, ಭಾಷೆ, ಶಬ್ದ ಚಮತ್ಕಾರ, ಸಂಖ್ಯೆ, ವಾರಗಳ ಲೆಕ್ಕ, ಕನ್ನಡದ ಅಭಿಮಾನದಂಥ ವಸ್ತುಗಳು ತಿರುಮಲೇಶರ ರಚನೆಗಳಲ್ಲಿ ವಿಪುಲವಾಗಿವೆ. ಇಂಥಲ್ಲಿ ಸೊಗಸಿನವೂ ಇವೆ, ಈಗಾಗಲೇ ಸಾಕಷ್ಟು ಕಂಡಿರುವ ತೀರ ಸರಳ ಮಾದರಿಯವೂ ಇವೆ.

- ಆನಂದ ಪಾಟೀಲ (ಮುನ್ನುಡಿಯಿಂದ)

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)