Skip to product information
1 of 1

Chandrashekara Kambara

ಮರವೇ ಮರ್ಮರವೇ

ಮರವೇ ಮರ್ಮರವೇ

Publisher - ಅಂಕಿತ ಪುಸ್ತಕ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಜಾನಪದವೆಂಬುದು ಒಂದು ಸಂಸ್ಕೃತಿಯು ಮುಗಿದು ಪೂರ್ತಿಯಾದ ಅವಸ್ಥೆಯಲ್ಲ. ಜೀವಂತವಾಗಿರುವ ಅವಸ್ಥೆ. ಒಬ್ಬ ಜನಪದ ಕಲಾವಿದ ಏಕಕಾಲದಲ್ಲಿ ಹಾಡು ಹೇಳುತ್ತಿದ್ದಾನೆಂದರೆ ಆತ ಎರಡು ಕೆಲಸ ಮಾಡುತ್ತಿರುತ್ತಾನೆ. ಒಂದು, ಹಾಡುತ್ತಾ ಹಾಡಿನ ಪರಂಪರೆಯನ್ನು ಉಳಿಸುವ ಕೆಲಸ ಮಾಡುವುದು. ಎರಡನೆಯದು ಅದೇ ಕಾಲಕ್ಕೆ ಹಿಂದಿನವರ ಹೊಸ ಅಂಶಗಳನ್ನು ಸೃಷ್ಟಿಸುವ ಕೆಲಸ ಎಂದು ಕಂಬಾರರು ಹೇಳುತ್ತಾರೆ.

ಜಾನಪದ ಕಥೆ ಎಂದರೆ ಅವು ರಂಗದ ಮೇಲೆ ಬರುವಂಥವು. ಕಾವ್ಯ ಎಂದರೆ ಹಾಡುವುದೇ ಎಂದು ತಿಳಿದು ತಾವು ಸೃಷ್ಟಿಸಿದ್ದನ್ನು ಜೀವಂತ ಸ್ವರೂಪದಲ್ಲಿಡಲು ಕಂಬಾರರು ನಿರಂತರವಾಗಿ ಪ್ರಯತ್ನಿಸಿದವರು. ಹೀಗೆ ಜಾನಪದ ಮೂಲ ಸಂಗತಿಗಳನ್ನು ತಮ್ಮ ಮನೋವಲಯಕ್ಕೆ ತಂದುಕೊಂಡು ಅದಕ್ಕೆ ಬೇರೆಯದೇ ರೂಪ ಕೊಟ್ಟು, ಅದನ್ನು ಕೇಳುಗರು ಮತ್ತು ಪ್ರೇಕ್ಷಕ ವರ್ಗದ ಮುಂದೆ ಇಟ್ಟವರಲ್ಲಿ ಕಂಬಾರರು ಮೊದಲಿಗರು. ಈ ದೃಷ್ಟಿಯಿಂದ ಇವರು ಜಾನಪದ ಚಿಂತನೆ ಮತ್ತು ಸಂಗ್ರಹ ಜಗತ್ತಿನ ಹರಿಕಾರರು.

ಮಕ್ಕಳಿಗಾಗಿಯೇ ಕಂಬಾರರು ವಿಶೇಷವಾಗಿ ರಚಿಸಿರುವ ಹದಿಮೂರು ಜನಪದ ಕಥೆಗಳು ಇಲ್ಲಿವೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)