1
/
of
2
DR. NE. Bha. Ramalinga Shetty
ಮಣ್ಣಿನ ಮಗ
ಮಣ್ಣಿನ ಮಗ
Publisher - ಸ್ನೇಹ ಬುಕ್ ಹೌಸ್
Regular price
Rs. 390.00
Regular price
Rs. 390.00
Sale price
Rs. 390.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available
Pages -
Type - Paperback
Couldn't load pickup availability
ಸನ್ಮಾನ್ಯ ಶ್ರೀ ಎಚ್. ಡಿ. ದೇವೇಗೌಡರು ಸರಳತೆಗೆ, ಸೌಜನ್ಯತ್ತೆಗೆ, ಕ್ರಿಯಾಶೀಲತೆಗೆ ಹಾಗೂ ದೃಢ ನಿಲುವಿಗೆ ಖ್ಯಾತನಾಮರು. ಜನಸಾಮಾನ್ಯರ ಬದುಕು ಬವಣೆಗಳನ್ನು ಸ್ವತಃ ಅನುಭವಿಸಿ ಜೀವನಾನುಭವ ಹೊಂದಿರುವ ಗೌಡರು ಜನಸಾಮಾನ್ಯರ ಕ್ಷೇಮಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟು ಜನನಾಯಕರೆನಿಕೊಂಡವರು. ನಾಡು, ನುಡಿ, ನೆಲ, ಜಲ ರಕ್ಷಣೆಯ ವಿಷಯದಲ್ಲಿ ಗೌಡರದು ನಿಲ್ಲದ ಪಯಣ. ಮೊದಲ ಬಾರಿಗೆ ಮಹಿಳಾ ಮೀಸಲಾತಿಯನ್ನು ಜಾತಿಗೆ ತಂದ ಕೀರ್ತಿ ದೇವೇಗೌಡರದು. ಸನ್ಮಾನ್ಯ ಶ್ರೀ ದೇವೇಗೌಡರನ್ನು ಕುರಿತು ಈಗಾಗಲೇ ಹಲವು ಕೃತಿಗಳು, ಅಭಿನಂದನಾ ಗ್ರಂಥಗಳು ಪ್ರಕಾಶಿತಗೊಂಡಿವೆ. ಪ್ರಸ್ತುತ ವಿವಿಧ ಸಂಘ ಸಂಸ್ಥೆಗಳಲ್ಲಿ ಹಾಗು ಸೇವಾಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಲೇಖಕರಾದ ಶ್ರೀಯುತ ನೇ. ಭ. ರಾಮಲಿಂಗಶೆಟ್ಟಿ ಅವರು ಶ್ರೀಯುತ ಎಚ್. ಡಿ. ದೇವೇಗೌಡರ ಜೀವನ ಹಾಗೂ ಸಾಧನೆಯನ್ನು ದಾಖಲಿಸುವ ನಿಟ್ಟಿನಲ್ಲಿ 'ಮಣ್ಣಿನ ಮಗ' ಎಂಬ ಕೃತಿಯನ್ನು ರಚಿಸಿರುವುದು ಸ್ತುತ್ಯರ್ಹ. ಗೌಡರ ಬದುಕುನ ಸಾರವನ್ನು ಹಾಗೂ ಅವರ ಸಾಧನೆ ಸಿದ್ಧಿಗಳನ್ನು ತನ್ನೊಡಲಿನೊಳಗೆ ಇರಿಸಿಕೊಂಡಿರುವ ಈ ಕೃತಿಯು ಮುಂದಿನ ತಲೆಮಾರಿನ ಹೃನ್ಮದಲ್ಲಿ ಗೌಡರ ಜೀವನಾದರ್ಶವನ್ನು ಬಿತ್ತಲು ಸಹಕಾರಿಯಾಗಲಿ. ಜನತೆ ಈ ಕೃತಿಯನ್ನು ಆದರಿಂದ ಸ್ವೀಕರಿಸಲೆಂದು, ಶ್ರೀಯುತರಿಂದ ಮತ್ತಷ್ಟು ಮೌಲಿಕವಾದ ಕೃತಿಗಳು ಹೊರಬರಲೆಂದು ಆಶಿಸುತ್ತಾ, ಶ್ರೀಯುತ ಎಚ್. ಡಿ. ದೇವೇಗೌಡರಿಗೆ ಭಗವಂತನು ಆಯುರಾರೋಗ್ಯದಿ ಸಕಲ ಸನ್ಮಂಗಳಗಳನ್ನು ಕರುಣಿಸಲೆಂದು ತುಂಬು ಹೃದಯದಿಂದ ಹಾರೈಸುತ್ತೇನೆ.
ಇಂತು ಭಗವತ್ಸೇವೆಯಲ್ಲಿ,
ಡಾ|| ನಿರ್ಮಲಾನಂದನಾಥ ಸ್ವಾಮೀಜಿ
ಪೀಠಾಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ.
ಇಂತು ಭಗವತ್ಸೇವೆಯಲ್ಲಿ,
ಡಾ|| ನಿರ್ಮಲಾನಂದನಾಥ ಸ್ವಾಮೀಜಿ
ಪೀಠಾಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ.
Share


Subscribe to our emails
Subscribe to our mailing list for insider news, product launches, and more.