Shatavadhani Dr. R. Ganesh
ಮಣ್ಣಿನ ಕನಸು
ಮಣ್ಣಿನ ಕನಸು
Publisher - ಸಾಹಿತ್ಯ ಭಂಡಾರ
Regular price
Rs. 720.00
Regular price
Rs. 720.00
Sale price
Rs. 720.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಮಣ್ಣಿನ ಕನಸು ಸ್ವಪ್ನವಾಸವದತ್ತ ಮತ್ತು ಸ್ವಚ್ಛಕಟಕ ಎಂಬ ಸುಪ್ರಸಿದ್ಧ ಸಂಸ್ಕೃತರೂಪಕಗಳ ಇತಿವೃತ್ತವನ್ನು ಆಧರಿಸಿ ರೂಪುಗೊಂಡ ಐತಿಹಾಸಿಕ ಕಾದಂಬರಿ. ಇದು ಪ್ರೀತಿ-ವಿಶ್ವಾಸಗಳ, ರಾಜಕೀಯ ತಂತ್ರ-ಪ್ರತಿತಂತ್ರಗಳ, ಕಲೆ-ತತ್ತ್ವಗಳ ಬಣ್ಣಗಳನ್ನು ಒಳಗೊಂಡ ಚಿತ್ರ. ಸಹೃದಯರ ಚಿತ್ತವೃತ್ತಿಗಳನ್ನು ಕಾಡುವ ಹತ್ತಾರು ಪಾತ್ರಗಳು, ಸಂಕೀರ್ಣವಾದ ಘಟನೆಗಳು, ಕಾವ್ಯಮಯ ವರ್ಣನೆಗಳು, ಆಳವಾದ ಸಂವಾದಗಳು, ಅಭಿಜಾತ ಭಾಷಾಶೈಲ ಈ ಕಾದಂಬರಿಯ ಕೆಲವು ವಿಶೇಷಗಳು. ವ್ಯಕ್ತಿಗಳಿಗೆ ಕನಸುಗಳಿರುವಂತೆ ನಮ್ಮನ್ನು ತಾಳಿ ಬಾಳಿಸುವ ಈ ಮಣ್ಣಿಗೂ ಕನಸಿದ್ದರೆ ಅದು ನನಸಾಗುವ ನಲವಿನ ಹಾದಿಯನ್ನು ಹುಡುಕುವ ನೋವು ಇಲ್ಲಿದೆ.
ಸುಮಾರು ಎರಡು ಸಾವಿರದ ಐನೂರು ವರ್ಷಗಳಿಗೂ ಮುನ್ನ ಇದ್ದ ಭಾರತದ ಸಾಂಸ್ಕೃತಿಕ ಮತ್ತು ರಾಜಕೀಯ ಜೀವನದ ಎಷ್ಟೋ ವಿವರಗಳು ಈ ಕೃತಿಯ ಕಥೆ ಮತ್ತು ಪಾತ್ರಗಳ ಜೊತೆಯಲ್ಲಿ ದಟ್ಟವಾಗಿ ಹೆಣೆದುಕೊಂಡಿವೆ. ಇವುಗಳ ಅಧಿಕೃತತೆ ಮತ್ತು ಸೂಕ್ಷ್ಮತೆಗಳು ಓದುಗರ ಮನೋನೇತ್ರಗಳಿಗೆ ಆ ಕಾಲದ ಜೀವನವನ್ನು ಆಪ್ತವಾಗಿ ಒದಗಿಸಿಕೊಟ್ಟಿವೆ..

Share
Subscribe to our emails
Subscribe to our mailing list for insider news, product launches, and more.