Dr. H. S. Gopal Rao
ಮಣ್ಣೆ
ಮಣ್ಣೆ
Publisher - ಅಭಿನವ ಪ್ರಕಾಶನ
- Free Shipping Above ₹250
- Cash on Delivery (COD) Available
Pages -
Type -
....ಮಣ್ಣೆ ಆಡುಭಾಷೆಯಲ್ಲಿ ಬಳಸುವ ಒಂದು ಸ್ಥಳನಾಮ, ಶಾಸನಗಳಲ್ಲಿ ಕಂಡುಬರುವಂತೆ ಇದರ ಪೂರ್ಣನಾಮ ಮಾನ್ಯಖೇಟ ಈ ಸ್ಥಳನಾಮದ ಉತ್ತರ ಭಾಗದ ಖೇಟ ವಿಶೇಷಾರ್ಥವುಳ್ಳದ್ದು, ಇದು ಯಾವ ರಾಜ್ಯದ ರಾಜಧಾನಿಯಾಗಲೂ ಸಾಧ್ಯವಿಲ್ಲ, ಆದರೆ, ಇದು ಪ್ರದೇಶದ ಮುಖ್ಯ ವ್ಯಾಪಾರ ಸ್ಥಳವಾಗಿ ಪ್ರಸಿದ್ಧಿ ಪಡೆದಿರುತ್ತದೆ. ಈ 'ಖೇಟ' ಆಡು ಭಾಷೆಯಲ್ಲಿ 'ಖೇಡ್' ಎಂದು ಬಳಕೆಯಾಗುತ್ತದೆ. ಆರ್ಯ ಭಾಷೆಯಾಡುವ ಭಾರತದ ಎಲ್ಲ ಪ್ರದೇಶಗಳಲ್ಲಿ ಇಂತಹ ಖೇಡಗಳು ಕಂಡುಬರುತ್ತವೆ. ಅಲ್ಲದೆ, ದ್ರಾವಿಡ ಭಾಷಾ ಪ್ರದೇಶದಲ್ಲೂ ಅಪರೂಪವಾಗಿ, ಅಲ್ಲಲ್ಲಿ ಕಾಣಿಸುವುದುಂಟು. ಮಣ್ಣೆ ಅಥವಾ ಮಾನ್ಯಖೇಟ ಈ ಗುಂಪಿಗೆ ಸೇರಿದ್ದು, ಈ `ಖೇಟ' ಅಥವಾ 'ಖೇಡ'ಗಳು ಮುಖ್ಯ ವ್ಯಾಪಾರ ಸ್ಥಳವಾಗಿ, ಸಹಜವಾಗಿ ಶ್ರೀಮಂತರ ನೆಲೆವೀಡೂ ಆಗಿರುತ್ತವೆ. ರಾಜ್ಯದ ಭಂಡಾರಕ್ಕೆ ಸಾಕಷ್ಟು ತೆರಿಗೆಯನ್ನು ತುಂಬುವ ಸ್ಥಳವಾಗಿರುತ್ತದೆ. ಈ ದೃಷ್ಟಿಯಿಂದ, ಈ ಖೇಡಗಳು ರಾಜಧಾನಿಯಾಗಿ ಇರುವುದಿಲ್ಲವಾದರೂ, ರಾಜ್ಯದ ಮುಖ್ಯ ಅಧಿಕಾರಿಗಳ ನೆಲೆವೀಡಾಗಿರುತ್ತದೆ. ಮಣ್ಣೆ ಸಹ ಈ ವರ್ಗಕ್ಕೆ ಸೇರಿದ ಸ್ಥಳ.
(ಮುನ್ನುಡಿಯಿಂದ)
Share
Subscribe to our emails
Subscribe to our mailing list for insider news, product launches, and more.