Ramesh Kumar Nayak
ಮಂದಿರವಲ್ಲೇ ಕಟ್ಟಿದೆವು!
ಮಂದಿರವಲ್ಲೇ ಕಟ್ಟಿದೆವು!
Publisher - ಸ್ನೇಹ ಬುಕ್ ಹೌಸ್
- Free Shipping Above ₹300
- Cash on Delivery (COD) Available
Pages - 208
Type - Paperback
Couldn't load pickup availability
ಇಪ್ಪತ್ತನೆಯ ಶತಮಾನದ ಐತಿಹಾಸಿಕ ತಿರುವೊಂದರಲ್ಲಿ ರಾಮಜನ್ಮಭೂಮಿ ದೇವಾಲಯದ ತಾಣದಲ್ಲಿ ಕಳಂಕವಾಗಿ ನಿಂತಿದ್ದ ಬಾಬರೀ ಮಸೀದಿಯನ್ನು ಧ್ವಂಸ ಮಾಡಿದುದು "ನ ಭೂತೋ...." ಎನ್ನುವಂತಹುದು. ಈ ಕುರಿತ ಐತಿಹಾಸಿಕ ಘಟನಾವಳಿಯನ್ನು, ಹೋರಾಟವನ್ನು ಪತ್ರಕರ್ತ ರಮೇಶ್ ಕುಮಾರ್ ನಾಯಕ್ ತಮ್ಮ "ಮಂದಿರವಲ್ಲೇ ಕಟ್ಟಿದೆವು!" ಕೃತಿಯಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ. ಅವರ ಬರೆವಣಿಗೆಯ ಶೈಲಿ ಓಡಿಸಿಕೊಂಡು ಹೋಗುತ್ತದೆ. ಓದಿಸಿಕೊಂಡೂ ಹೋಗುತ್ತದೆ. ರಾಮಜನ್ಮಭೂಮಿ ಮುಕ್ತಿಗಾಗಿ ನಡೆದ ಹೋರಾಟ, ಬಲಿದಾನಗಳು ನಮ್ಮ ಮನಮುಟ್ಟುತ್ತವೆ, ಹೃದಯವನ್ನೂ ತಟ್ಟುತ್ತವೆ. ಗತ-ಇತಿಹಾಸದ ವಿಹಂಗಮ ಹಿನ್ನೋಟದ ಪರಿಪ್ರೇಕ್ಷ್ಯದಲ್ಲಿ, ನವ-ಭಾರತದ ಕಳೆದ ಎಂಟು ದಶಕಗಳ ಸಂಕ್ರಮಣ ಕಾಲದ ಇತಿಹಾಸದ ಹೆಜ್ಜೆಗುರುತುಗಳು ಇಲ್ಲಿ ಅರ್ಥಪೂರ್ಣವಾಗಿ ಪಡಿಮೂಡಿವೆ. ವಿಕೃತ ಇತಿಹಾಸವನ್ನು ಬರೆದಿಟ್ಟವರು ಚಿತ್ರಿಸಿದ "ಸೋತ ಭಾರತ'ವು, ಇದೀಗ ನಿಜಕ್ಕೂ "ವಿಜಿಗೀಷು ಭಾರತ" ಎಂಬ ಹೆಮ್ಮೆಯ ಭಾವವನ್ನು ನಮ್ಮಲ್ಲಿ ಮೂಡಿಸುವಲ್ಲಿ ಈ ಕೃತಿ ಸಫಲವಾಗಿದೆ.
- ಮಂಜುನಾಥ ಅಜ್ಜಂಪುರ(ಅಂಕಣಕಾರ, ಲೇಖಕ)
Share


Subscribe to our emails
Subscribe to our mailing list for insider news, product launches, and more.