Sunil Haleyuru
ಮನದೊಳಮಿಡಿತ
ಮನದೊಳಮಿಡಿತ
Publisher -
- Free Shipping Above ₹300
- Cash on Delivery (COD) Available
Pages - 172
Type - Paperback
Couldn't load pickup availability
ಕನ್ನಡದಲ್ಲಿ ತನಗ ಅವತರಿಸಿದ ಗಳಿಗೆ ವಿಶಿಷ್ಟವಾದದ್ದು ಎಂದು ಹೇಳಬೇಕು. ಹಲವರು ಈ ಪ್ರಕಾರದಲ್ಲಿ ಬರೆಯುತ್ತಿದ್ದಾರೆ. ಸಂಕಲನಗಳು ಬಂದಿವೆ. ಕಳೆಯ ನಡುವೆ ಬೆಳೆ ಕಾಣದಾಗುತ್ತಿದೆ ಎಂಬ ಆತಂಕವನ್ನು ಕಳೆಯುವಂತೆ ಭರವಸೆಯ ಬೆಳೆ ತೆಗೆದಿದ್ದಾರೆ ಸುನೀಲ ಹಳೆಯೂರು ಅವರು. ಓದಿದ್ದು ವಾಣಿಜ್ಯ. ವೃತ್ತಿಯಲ್ಲಿ ಸಂಸ್ಥೆಯೊಂದರ ಹಿರಿಯ ಮಾರಾಟ ವ್ಯವಸ್ಥಾಪಕ. ಒಲಿದಿದ್ದು ಕಾವ್ಯಕ್ಕೆ: ಕಾವ್ಯದ ಆಂತರ್ಯದ ಪರಿಶೋಧನೆಯಲ್ಲಿ ವಿಶೇಷ ಆಸಕ್ತಿ. ಇದು ಸುನೀಲರ ಅನನ್ಯತೆ.
ಕಾವ್ಯವನ್ನು ರಮಣೀಯವಾಗಿಸುವುದು ಅವರಿಗೆ ಮುಖ್ಯವಲ್ಲ. ಬದಲಾಗಿ ಬದುಕಿನ ತಾತ್ವಿಕತೆಯ ಶೋಧನೆಗೆ, ಪರಿಶೀಲನೆಗೆ ಅವರು ಕಾವ್ಯವನ್ನು ಬಳಸಿಕೊಳ್ಳುವಂತೆ ಕಾಣಿಸುತ್ತದೆ. ಇಲ್ಲಿನ ತನಗಗಳು ಅವರ ಈ 'ಉದ್ಯಮ'ಕ್ಕೆ ಮಾದರಿಗಳಾಗಿವೆ.
ಬಿಡಿ ತನಗಗಳನ್ನು ಬರೆಯುವುದು ಒಂದು ರೀತಿ. ತನಗೆ ಮಾಲೆಯ ರಚನೆ ಇನ್ನೊಂದು ಬಗೆ. ಸುನೀಲರ ವಿಶೇಷತೆ ಎಂದರೆ 'ತನಗ ಯುಗಳ'ದ ರಚನೆ. ಎರಡು ತನಗಗಳ ಮೂಲಕ ಅವರು ಒಂದು ಚಿಂತನೆಯನ್ನು, ಪರಿಕಲ್ಪನೆಯನ್ನು ಕಟ್ಟುತ್ತಾರೆ. ಇಲ್ಲಿನ ಎಲ್ಲ ತನಗಗಳು ಹೀಗೆ 'ಯಮಳ'ರು ಎಂದು ನನ್ನ ಅನಿಸಿಕೆ.
'ಎಲ್ಲಿಂದಲೋ ಬರುವ/ಹೊಸತನದ ಛಾಯೆ/ನಿತ್ಯವೂ ಅಚ್ಚರಿಯ/ಜಗವೊಂದು ಸೋಜಿಗ' ಎನ್ನುವ ಸುನೀಲರಿಂದ ಮತ್ತಷ್ಟು ತನಗಗಳು ಮೂಡಿಬರಲಿ. ಅಂತರಂಗದ ಪರಿಪಾಕವನ್ನು ಲಕ್ಷ್ಯವಾಗಿರಿಸಿಕೊಂಡ ಅವರ ಲೇಖನಿಗೆ ಇನ್ನಷ್ಟು ವಿಸ್ಮಯ-ವೈವಿಧ್ಯಗಳು ಒದಗಿ ಬರಲಿ ಎಂದು ಹಾರೈಸುತ್ತೇನೆ.
-ಡಾ. ಗೋವಿಂದ ಹೆಗಡೆ
ಕನ್ನಡ 'ತನಗ'ದ ಹರಿಕಾರರು
ಹುಬ್ಬಳ್ಳಿ. ಮನದೊಳಮಿಡಿತ
Share


Subscribe to our emails
Subscribe to our mailing list for insider news, product launches, and more.