Sudha Murthy
ಮನದ ಮಾತು - ಕಾದಂಬರಿ
ಮನದ ಮಾತು - ಕಾದಂಬರಿ
Publisher - ಸಪ್ನ ಬುಕ್ ಹೌಸ್
- Free Shipping Above ₹250
- Cash on Delivery (COD) Available
Pages - 176
Type - Paperback
Couldn't load pickup availability
ಸಂಕೀರ್ಣ ಸ್ವರೂಪಿ ಬದುಕು ಅನೇಕ ಅನುಭವಗಳ ಆಗರ. ಅನುಭವ ಸುಖ ದುಃಖಗಳ ಸಮಿಶ್ರಣ. ಅದಕ್ಕೆ ಸಂಸ್ಕಾರವಿತ್ತು ಸಹ್ಯವಾಗಿಸುವ ಸಾಮರ್ಥ್ಯ ಸಾಹಿತ್ಯಕ್ಕೆ ಮಾತ್ರ ಇದೆ. ಅದು ಜೀವನದ ವ್ಯಥೆಯನ್ನು ಕಥೆಯಾಗಿಸುತ್ತದೆ ; ಶೋಕವನ್ನು ಶ್ಲೋಕವಾಗಿಸುತ್ತದೆ : ರಾಗವನ್ನು ರಸವಾಗಿಸುತ್ತದೆ ; ಅಸಹ್ಯವನ್ನೂ ಸಹ್ಯವಾಗಿಸುವ ಮೋಡಿ ಅದಕ್ಕೆ ಚೆನ್ನಾಗಿ ಗೊತ್ತು. ಈ ಗುಟ್ಟನ್ನರಿತ ಕವಿಗಾರುಡಿಗ "ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು' ಎಂದಿದ್ದಾನೆ. ಅಹುದು., ಯಾವುದೇ ದುಃಖ ತುಂಬಾ ಕಹಿ. ಆದರದನ್ನು ಸುಖದ ದಿನಗಳಲ್ಲಿ ನೆನಪಿಸಿಕೊಂಡು ಮೆಲುಕು ಹಾಕಿದಾಗ ಸವಿ, ಬಲು ಸವಿ, ಬಾಳ ಹಾದಿಯೂ ಅಷ್ಟೆ. 'ಯೌವನದಲ್ಲಿ ಬಾಲ್ಯ ಸುಂದರ, ವೃದ್ಧಾಪ್ಯದಲ್ಲಿ ಯೌವನ ಸುಂದರ, ಕಳೆದು ಹೋದ ದಿನಗಳು ಯಾವತ್ತೂ ಸುಂದರ ಎಂಬ ಮಾತು ಸತ್ಯ.
ಶ್ರೀಮತಿ ಸುಧಾಮೂರ್ತಿಯವರದು ಅಪರೂಪದ ವ್ಯಕ್ತಿತ್ವ ಸರಳ ಜೀವನ, ಶ್ರೀಮಂತ ಚಿಂತನ ಇದು ಅವರ ಜೀವನ ಮನೀಷೆ, ಅವರ ಮನಸ್ಸು ಹೇಗೋ ಅವರ ಬರಹವೂ ಹಾಗೆ ಕ್ಲೀಷೆ ಎನಿಸದಿದ್ದರೆ ಒಂದು ಮಾತು:
ಮನದ ಮಾತು' ಆಣಿ ಮುತ್ತು !
-ಸಾ. ಶಿ. ಮರುಳಯ್ಯ
ಪ್ರಕಾಶಕರು - ಸಪ್ನ ಬುಕ್ ಹೌಸ್
Share

a good book to read
Subscribe to our emails
Subscribe to our mailing list for insider news, product launches, and more.