Skip to product information
1 of 1

Dr. C. R. Chandrashekar

ಮಕ್ಕಳಿಗೆ ಕಲಿಸಿ ಜೀವನ ಕೌಶಲಗಳು

ಮಕ್ಕಳಿಗೆ ಕಲಿಸಿ ಜೀವನ ಕೌಶಲಗಳು

Publisher - ಸಪ್ನ ಬುಕ್ ಹೌಸ್

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 143

Type - Paperback

ನಿಮ್ಮ ಮಗ ಅಥವಾ ಮಗಳು ಇಪ್ಪತ್ತನೇ ವಯಸ್ಸಿಗೆ ಬಂದಾಗ ಅವರು ಶಾರೀರಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ, ಪ್ರಬುದ್ಧರಾಗಬೇಕು. ಸ್ವಾವಲಂಬಿಗಳಾಗಿ ಬದುಕಬೇಕು. ಆರೋಗ್ಯವಾಗಿರಬೇಕು. ಕಾಯಿಲೆಗಳು ಬರದಂತೆ ಮುಂಜಾಗ್ರತೆ ವಹಿಸಬೇಕು. ಮನೆಯವರೊಂದಿಗೆ ಮತ್ತು ಹೊರಗಿನವರೊಂದಿಗೆ ಹೊಂದಿಕೊಳ್ಳಬೇಕು. ಸ್ವಾಭಿಮಾನಿಗಳಾಗಿ ಬದುಕಬೇಕು. ಕಷ್ಟನಷ್ಟ ಸೋಲು ಅವಮಾನಗಳಾದಾಗ ಸ್ಥಿತಪ್ರಜ್ಞತೆಯಿಂದ ಅವನ್ನು ನಿಭಾಯಿಸಬೇಕು. ಮೂಢನಂಬಿಕೆ-ಕಂದಾಚಾರಗಳನ್ನು ಬಿಟ್ಟು, ಸದಾಚಾರಸಂಪನ್ನರಾಗಿರಬೇಕು. ವಾಸ್ತವಿಕ ಪ್ರಜ್ಞೆಯನ್ನು ಹೊಂದಿರಬೇಕು. ವೈಜ್ಞಾನಿಕ ಮನೋಭಾವ ಉಳ್ಳವರಾಗಿರಬೇಕು. ಸಮಸ್ಯೆಗಳು ಎದುರಾದಾಗ, ಪರಿಹಾರೋಪಾಯಗಳನ್ನು ಕಂಡುಹಿಡಿದು ಮುನ್ನಡೆಯಬೇಕು. ಒಳ್ಳೆಯ ನಡೆ-ನುಡಿಗಳನ್ನು ಹೊಂದಿ, ತಮ್ಮ ಸೌಜನ್ಯತೆ-ಗುಣ ವಿಶೇಷಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಬೇಕು. ತಮ್ಮ ಯೋಗ್ಯತೆಗೆ ತಕ್ಕಂತಹ ಸ್ಥಾನಮಾನ ಗೌರವಗಳನ್ನು ಸಂಪಾದಿಸಬೇಕು. ನೈತಿಕ ಮೌಲ್ಯಗಳ ಪಾಲಕರಾಗಬೇಕು. ಸದ್ಗುಣಿಗಳಾಗಿರಬೇಕು. ಸೂಕ್ತ ಗುರಿಗಳನ್ನು ಆಯ್ದುಕೊಂಡು, ಸಕ್ರಮ ಮಾರ್ಗದಲ್ಲಿ ಅವನ್ನು ತಲುಪಬೇಕು, ಸಾಧಕರಾಗಬೇಕು. ಇವಕ್ಕೆ ಬೇಕಾದ ಜ್ಞಾನ-ಕೌಶಲಗಳನ್ನು ಅವರು ಸಂಪಾದಿಸುವಂತೆ ಶಿಕ್ಷಕರೂ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮವಾಗಿ ಜೀವನ ನಡೆಸುವ ವಿಧಾನವನ್ನು ತಿಳಿಸುವ ಉಪಯುಕ್ತ ಮಾಹಿತಿಯನ್ನು ಹೆಸರಾಂತ ಮನೋವೈದ್ಯರಾದ ಡಾ. ಸಿ. ಆರ್. ಚಂದ್ರಶೇಖರ್‌ರವರು ರಚಿಸಿರುವ ಈ ಪುಸ್ತಕ ನೆರವಾಗಬಹುದು.

-ಪ್ರಕಾಶಕರು
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)