Dr. V. Ranganath
Publisher -
- Free Shipping
- Cash on Delivery (COD) Available
Couldn't load pickup availability
'ರಸಿಕಪುತ್ತಿಗೆ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ದಿವಂಗತ ಶ್ರೀ ಸುಬ್ರಹ್ಮಣ್ಯ ಆಚಾರ್ಯರವರು ಬದುಕಿದ್ದು ಕೇವಲ ಅರವತ್ತೊಂದು ವರ್ಷ ಮಾತ್ರ . ಬರೆಯಲು ಆರಂಭಿಸಿದ್ದು ಇಪ್ಪತ್ತರ ಹರೆಯದಲ್ಲಿ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆ ಸಮೀಪದ ಮುತ್ತಿಗೆ ಎಂಬ ಸಣ್ಣ ಗ್ರಾಮ ಅವರ ಹುಟ್ಟೂರು. ಅಲ್ಲಿಂದ ಅವರು "ರಸಿಕ, ಪುತ್ತಿಗೆ' ಎಂಬ ಕಾವ್ಯನಾಮದಿಂದ ಬರವಣಿಗೆ ಆರಂಭಿಸಿ, ನಂತರ 'ರಸಿಕಪುತ್ತಿಗೆ'ಯಾಗಿ ಬಹು ಭಾಷಾ ವಿಶಾರದರಾಗಿ ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಪಡೆದು 50 ಕ್ಕೂ ಮೀರಿದ ಕೃತಿಗಳನ್ನು ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ರಚಿಸಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸಾಹಿತ್ಯದ ನಾನಾ ಪ್ರಾಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಅವರ ವಿಶೇಷ ಒಲವು ಮಕ್ಕಳ ಸಾಹಿತ್ಯ. ಮಕ್ಕಳಿಗಾಗಿ ಬರೆದದ್ದೇ ಹೆಚ್ಚು. ಮಕ್ಕಳ ಸಾಹಿತಿ ಎಂದು ಗುರುತಿಸಿಕೊಳ್ಳಲು ಅವರು ಇಷ್ಟಪಡುತ್ತಿದ್ದರು. ಅವರ ಕೃತಿಗಳಲ್ಲಿ ಬಹುಪಾಲು ಲಭ್ಯವಿಲ್ಲ. ಹಾಗಾಗಿ ಅವರ ಬರವಣಿಗೆಗಳ ಸಮಗ್ರ ಶ್ರೇಣಿ ಹೊರತರುವ ಮೊದಲ ಪ್ರಯತ್ನವಾಗಿ ಈ ಕೃತಿ ನಿಮ್ಮ ಮುಂದಿದೆ.
