Lakshmeesha Tholpadi
ಮಹಾಯುದ್ಧಕ್ಕೆ ಮುನ್ನ...
ಮಹಾಯುದ್ಧಕ್ಕೆ ಮುನ್ನ...
Publisher - ಅಭಿನವ ಪ್ರಕಾಶನ
- Free Shipping Above ₹300
- Cash on Delivery (COD) Available
Pages - 56
Type - Paperback
Couldn't load pickup availability
ಕೃಷ್ಣ ಗೀತೆಯ ಲೋಕ ಒಂದು ಸ್ವಯಂಪೂರ್ಣ ಲೋಕ. ಗಾಢ ಅನುಭವವೊಂದು ತೆರೆದುಕೊಳ್ಳುವ ಅನನ್ಯಲೋಕ. ಅನುಭವವನ್ನು ತೀವ್ರವಾಗಿ ಕಟ್ಟಿಕೊಡುವುದೇ ಸಾಹಿತ್ಯದ ಮೂಲಭೂತ ಲಕ್ಷಣವಾದ್ದರಿಂದ ಗೀತೆಯನ್ನು ಸಾಹಿತ್ಯ ಕೃತಿಯಾಗಿಯೂ ಅಧ್ಯಯನ ಮಾಡುವುದು ಸಾಧ್ಯ. ಹಾಗೆಯೇ, ಗೀತೆ ವೈಚಾರಿಕತೆಯಿಂದ ದಟ್ಟವಾಗಿ ಇಡಿಕಿರಿದ ಕೃತಿ. ವೇದಾಂತದ ಪರಿಭಾಷೆಯಲ್ಲಿ; ಜೀವ-ಜಗತ್ತುಗಳ ಸಂಬಂಧಗಳ ಕುರಿತು: ಕರ್ಮ-ಭಕ್ತಿ- ಜ್ಞಾನಯೋಗಗಳ ಕುರಿತು ವಿಸ್ತಾರವಾದ ವಿಶ್ಲೇಷಣೆ ಅಲ್ಲಿದೆ. ಈ ವಿಚಾರ ಪರಿಷ್ಣುತತೆಯೇ ಗೀತೆಯ ಮಹತ್ವ ಎನ್ನುತ್ತಾರೆ ಕೆಲವರು. ಆದರೆ, ಗೀತೆಯ ವೈಚಾರಿಕತೆ ಅದು ಕೊಡಮಾಡುವ ಅನುಭವವನ್ನು ಮಸಳಿಸುವುದಿಲ್ಲ ಎನ್ನುವುದು ಮಹತ್ವದ್ದು. ಕೆಲವು ಕಡೆ ಸೂಕ್ಷ್ಮ ವೈಚಾರಿಕತೆ ಅನುಭವವನ್ನು ಹಿಂದಿಟ್ಟು ತಾನೇ ಮಿಗಿಲಾಗುತ್ತದೆ. ಆದರೆ, ಒಟ್ಟಾರೆಯಾಗಿ ಮೊತ್ತದಲ್ಲಿ ಅನುಭವ ಬೀಜವನ್ನು ವಿಚಾರಭೂಮಿ ಪೋಷಿಸಿಕೊಂಡೇ ಬಂದಿದೆ. ಸಾಹಿತ್ಯಕೃತಿಯಾಗಿ ಗೀತೆಯ ಮಹತಿ ಇದೆ...
-ಒಳಗಿನ ಪುಟಗಳಿಂದ
Share


Subscribe to our emails
Subscribe to our mailing list for insider news, product launches, and more.