Skip to product information
1 of 1

Devudu

ಮಹಾದರ್ಶನ

ಮಹಾದರ್ಶನ

Publisher - ಹೇಮಂತ ಸಾಹಿತ್ಯ

Regular price Rs. 350.00
Regular price Rs. 350.00 Sale price Rs. 350.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಮಹಾದರ್ಶನ

ಕನ್ನಡ ವಾಚಕವೃಂದಕ್ಕೆ ದೇವುಡು ಸುಪರಿಚಿತರು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಪ್ರಪ್ರಥಮವಾಗಿ ಕೈಯಾಡಿಸಿ ದೇವುಡು ಮುಟ್ಟದ ವಿಷಯವಿಲ್ಲ ಎನ್ನಿಸಿಕೊಂಡ ವಿಚಾರಶೀಲರು, ಕಥೆ, ಕಾದಂಬರಿ, ಲಲಿತಪ್ರಬಂಧ ನಾಟಕಗಳಂತೆ ತರ್ಕ ಮಿಮಾಂಸಾದಿ ವೈಚಾರಿಕ ಗ್ರಂಥಗಳೂ ಅವರ ಹೊಸ ದೃಷ್ಟಿಯ ಮೂಸೆಯಲ್ಲಿ ಹೊಸ ಸೃಷ್ಟಿಯಾಗಿ ಮೈದೋರಿದೆ, ವಸ್ತು, ಪರಿಸರ, ಕಾಲ, ದೇಶವಲ್ಲದೆ ಲೋಕ ಲೋಕಾಂತರಗಳ ಇತಿ ಮಿತಿಯನ್ನೂ ಮೀರಿ ಮನೋಮಂಡಲದಲ್ಲಿ ವಿಹರಿಸುವ ಅವರ ಮಹಾಬ್ರಾಹ್ಮಣ, ಮಹಾಕ್ಷತ್ರಿಯ, ಮಹಾದರ್ಶನ ಕನ್ನಡ ಸಾರಸ್ವತ ಲೋಕಕ್ಕೆ ದೇವುಡು ನೀಡಿರುವ ಲೋಕಪ್ರಿಯ ಅಮರ ಕೃತಿಗಳು.

ಮಹಾದರ್ಶನದ ಕಥೆ, ಒಂದು ವೇದ, ಒಂದು ಬ್ರಾಹ್ಮಣ, ಒಂದು ಉಪನಿಷತ್ತು ತಂದುಕೊಟ್ಟು ಇನ್ನೊಂದು ಉಪನಿಷತ್ತಿಗೆ ಕಾರಣನಾದ ಮಹಾಪುರುಷ ಯಾಜ್ಞವಲ್ಕ್ಯರ ಮಹತ್-ಸಾಧನೆಯ ಹೃದಯಂಗಮ ನಿರೂಪಣೆ, ಶತಪಥ ಬ್ರಾಹ್ಮಣ, ಮಹಾಭಾರತ, ಭಾಗವತಗಳಲ್ಲಿ ಬಂದಿರುವ ಯಾಜ್ಞವಲ್ಕ್ಯರ ಕಥೆಯನ್ನು ಸಂದರ್ಭೋಚಿತವಾಗಿ ಬಳಸಿಕೊಂಡು ಈ ಕೃತಿ ಮೈದಳೆದಿದೆ. ಈ ಗ್ರಂಥ ಕಥೆಯೆಂದವರಿಗೆ ಕಥೆ, ಶಾಸ್ತ್ರವೆಂದವರಿಗೆ ಶಾಸ್ತ್ರ, ವಿದ್ಯೆ ಎಂದವರಿಗೆ ವಿದ್ಯೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)